ಆರೋಗ್ಯವೇ ಭಾಗ್ಯ ಕಾಪಾಡಿಕೊಂಡು ಬರಲು ಕ್ರೀಡಾಕೂಟ ಬಹಳ ಮುಖ್ಯವಾಗಿದೆ

ಆರೋಗ್ಯವೇ ಭಾಗ್ಯ ಕಾಪಾಡಿಕೊಂಡು ಬರಲು ಕ್ರೀಡಾಕೂಟ ಬಹಳ ಮುಖ್ಯವಾಗಿದೆ

ಆರೋಗ್ಯವೇ ಭಾಗ್ಯ ಕಾಪಾಡಿಕೊಂಡು ಬರಲು ಕ್ರೀಡಾಕೂಟ ಬಹಳ ಮುಖ್ಯವಾಗಿದೆ

ಕಮಲನಗರ:ಮಕ್ಕಳ ಭವಿಷ್ಯ ಉತ್ತಮ ರೀತಿಯಲ್ಲಿ ಇರಬೇಕಾದರೆ ಮನಸ್ಸು ಶರೀರ ದೃಢವಾಗಿರಲು ಕ್ರೀಡಾಕೂಟಗಳು ಜರಗಬೇಕು ಎಂದು ಶ್ಯಾಮ್ ವೆಲ್ ನುಡಿದರು. 

ತಾಲೂಕಿನ ಡಾಕ್ಟರ್ ಚನ್ನಬಸವ ಪಟ್ಟದೇವರ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ, ಖೇಡ್ ಸಂಗಮದಲ್ಲಿ ಮಕ್ಕಳ ಕ್ರೀಡಾಕೂಟದಲ್ಲಿ ಪ್ರಥಮ ದ್ವಿತೀಯ ತೃತೀಯ ಬಂದ ಮಕ್ಕಳಿಗೆ ಬಹುಮಾನ ವಿತರಿಸಿ ಆರೋಗ್ಯವೇ ಭಾಗ್ಯ ಕಾಪಾಡಿಕೊಂಡು ಬರಲು ಕ್ರೀಡಾಕೂಟಗಳು ಮೇಲಿಂದ ಮೇಲೆ ನಡೆಯಬೇಕೆಂದು ಮಾತನಾಡಿದರು.

  ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಸಂಜು ಕುಮಾರ್ ಮೆಂಗಾ ಸರ್ ಅವರು ವಿದ್ಯಾರ್ಥಿಗಳ ಬೆಳವಣಿಗೆಗೆ ಕ್ರೀಡಾಕೂಟ ಬಹಳ ಮುಖ್ಯವಾಗಿದೆ ಹಾಗೂ ವಿದ್ಯಾರ್ಥಿಗಳು ಒಳ್ಳೆಯ ರೀತಿಯಿಂದ ಕ್ರೀಡೆಯಲ್ಲಿ ಆಟ ಆಡಿ ಬಹುಮಾನ ಪಡೆದದ್ದು. ನಮ್ಮ ಸಂಗಮ ಶಾಲೆಯ ಮಕ್ಕಳು ಬಹಳಷ್ಟು ಶಿಸ್ತಿನ ಕ್ರಮ ಅನುಸರಿಸುತ್ತಾರೆ ಎಂದು ಮಾತನಾಡಿ ಹರ್ಷ ವ್ಯಕ್ತಪಡಿಸಿದರು

ಕಾರ್ಯಕ್ರಮದ ಮೊದಲಿಗೆ ಶಿಕ್ಷಕರಾದ ಬಸವರಾಜ್ ಚಿಂದೆ ವಚನಗಾಯನ ಮಾಡಿದರು.

 ಕಾರ್ಯಕ್ರಮದ ಸಂಚಾಲಕರು ಸಂಗೀತಾ ಮೇತ್ರೆ .ಸ್ವಾಗತ ಭಾಷಣ ಶಿವಕುಮಾರ ಸ್ವಾಮೀ ನೆರವೇರಿಸಿ ಕೊಟ್ಟರು. ಅತಿಥಿ ಸುಮೀತ ಮೇಡಂ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರಾದ ರೇಷ್ಮಾ ಮೇಡಂ ವೈಶಾಲಿ ಜ್ಯೋತಿ ಪ್ರತಿಭಾ ರೇಣುಕಾ ಶ್ವೇತಾ ದೀಪಿಕಾ ಹಾಗೂ ಮುಗ್ಧ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.