ಚಂದ್ರ ಗ್ರಹಣ ನಿಮಿತ್ತ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವಾಲಯದಲ್ಲಿ ಭಜನೆ
ಚಂದ್ರ ಗ್ರಹಣ ನಿಮಿತ್ತ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವಾಲಯದಲ್ಲಿ ಭಜನೆ
ಕಮಲನಗರ: ತಾಲೂಕಿನ ಡಿಗ್ಗಿ ಗ್ರಾಮದ ಆರಾಧ್ಯ ದೇವಾ ಶ್ರೀ ಮಡಿವಾಳೇಶ್ವರ ದೇವಾಲಯದಲ್ಲಿ ಮಂಗಳವಾರ ಚಂದ್ರ ಗ್ರಹಣದ ಅಂಗವಾಗಿ ವಿಶೇಷ ಭಜನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿಭಾವದಿಂದ ಗ್ರಹಣ ಕಾಲದಲ್ಲಿ ದೇವರ ನಾಮಸ್ಮರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯ ಟ್ರಸ್ಟ್‌ನ ಅಧ್ಯಕ್ಷರಾದ ದೇವೇಂದ್ರ ಪಾಟೀಲ, ಚಂದ್ರ ಗ್ರಹಣದ ಧಾರ್ಮಿಕ ಹಾಗೂ ವೈಜ್ಞಾನಿಕ ಮಹತ್ವದ ಕುರಿತು ಮಾಹಿತಿ ನೀಡಿದರು.ಗ್ರಹಣ ಕಾಲವು ಅಧ್ಯಾತ್ಮಿಕ ಸಾಧನೆಗೆ ಪ್ರಶಸ್ತವಾದ ಸಮಯ. ಈ ಅವಧಿಯಲ್ಲಿ ಜಪ, ತಪ ಮತ್ತು ಭಜನೆ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಹೇಳಿದರು.
ನಂತರ ಭಜನಾ ಮಂಡಳಿಯ ಅಧ್ಯಕ್ಷರಾದ ಯುವರಾಜ ಚಾಂಡೇಶ್ವರೆ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಭಜನೆಗೆ ವಿಶೇಷ ಸ್ಥಾನವಿದೆ. ಗ್ರಹಣದಂತಹ ಸಂದರ್ಭಗಳಲ್ಲಿ ಸಾಮೂಹಿಕವಾಗಿ ಭಜನೆ ಮಾಡುವುದರಿಂದ ಗ್ರಾಮದಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ಹೇಳಿದರು.
ದೇವಾಲಯದ ಗರ್ಭಗುಡಿಯ ಮುಂದೆ ಕುಳಿತು ಹಿರಿಯರಿಂದ ಮಧುರವಾದ ಭಜನೆ.
ಹಾರ್ಮೋನಿಯಂ ಮಾಸ್ಟರ ಯುವರಾಜ ಚಾಂಡೇಶ್ವರೆ, ತಬಲಾ ಮಾಸ್ಟರ ನಾಗಯ್ಯ ಸ್ವಾಮಿ ಮತ್ತು ಅಕ್ಕನ ಬಳಗ ಹಾಗೂ ಅಣ್ಣನ ಬಳಗದವರು ತಾಳಗಳ ಸಾಥ್‌ನೊಂದಿಗೆ ಭಜನೆ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಅರ್ಚಕ ಚಂದ್ರಕಾಂತ ಸ್ವಾಮಿ, ಮಹದಯ್ಯ ಸ್ವಾಮಿ, ಟ್ರಸ್ಟ್ ಹಿರಿಯ ಸದಸ್ಯರಾದ ಶಿವಕುಮಾರ ರಾಂಪುರೆ, ಕಾಶೀನಾಥ ಬಿರಾದಾರ, ಧನರಾಜ ಬಿ. ರಾಂಪುರೆ, ಪರಮೇಶ ರಾಂಪುರೆ ಹಾಗೂ ಮಹಿಳಾ ಪ್ರಮುಖರಾದ ನೀಲಮ್ಮ ಬಿರಾದಾರ, ಕಾಶಿಬಾಯಿ ಪಂಚಾಳ, ಮಲ್ಲಮ್ಮ ಬಿರಾದಾರ, ಪಾರಮ್ಮ ಚಾಂಡೇಶ್ವರೆ, ಉಷಾ ಬಿರಾದಾರ, ಶ್ರೀದೇವಿ ಹರಪಾಳೆ, ರತನ್ಮ ಬಿರಾದಾರ, ಮಹಾದೇವಿ ಬಿರಾದಾರ ಸೇರಿದಂತೆ ಅನೇಕರು ಇದ್ದರು
