ನಮ್ಮ ದೇಶದ ನಿಜವಾದ ದೇವರೇ ಸೈನಿಕರು

ನಮ್ಮ ದೇಶದ ನಿಜವಾದ ದೇವರೇ ಸೈನಿಕರು

 ನಮ್ಮ ದೇಶದ ನಿಜವಾದ ದೇವರೇ ಸೈನಿಕರು

 .. ದೇಶಕ್ಕಾಗಿ ಮಡಿದವರು ನಮ್ಮ ಭಾರತೀಯ ಸೈನಿಕರು ಹಗಲು ರಾತ್ರಿ ಎನ್ನದೆ ಅವರು ದೇಶಕ್ಕಾಗಿ ದುಡಿದವರು 

... ತಂದೆ ತಾಯಿ ಬಂಧು ಬಳಗ ಬಿಟ್ಟು ದೂರ ನಡೆದವರು ಬಂದ ಕಷ್ಟ ಸಾವಿರಾರು ಅಂದರೆ ಇವರು ನಗುನಗುತ ಇರುವವರು ಭಾರತಾಂಬೆ ಗಾಗಿ ಅವರು ಪ್ರಾಣವನ್ನೇ ಕೊಟ್ಟವರು    ಧೈರ್ಯಶಾಲಿ ಗುಣದವರು ಸಿಂಹ ದಂತ ನಮ್ಮ ಸೈನಿಕರು 

  ತಂದೆ ತಾಯಿ ಸತ್ತರು ಮನೆಗೆ ಬರದವರು 

   ತಂದೆ ತಾಯಿ ಗಿಂತ ಶ್ರೇಷ್ಠ ದೇಶ ದೊಡ್ಡದು ಅಂದವರು ಜಾತಿಭೇದ ಮರೆತವರು ನಾವು ಎಲ್ಲ ಒಂದೇ ಭಾರತೀಯರು ಯುದ್ಧ ಬಂದರೆ ನಿಲ್ಲುವರು ಗೆಲ್ಲುವ ತನಕ ಹೋರಾಡುವವರು 

  ವೈರಿ ಕಂಡರೆ ಹಿಡಿದವರು ಮುನ್ನುಗ್ಗಿ ಬಡೆದವರು 

 ಸತ್ಯ ಶಾಂತಿ ಪ್ರಿಯರು ನಮ್ಮ ಸೈನಿಕರು 

  ವಿಜಯಶಾಲಿ ಯೋಧರು 

  ನಮ್ಮ ದೇಶದ ಗಡಿ ಕಾಯುವವರು ಜೀವವನ್ನೇ ಕೊಟ್ಟವರು 

  ಭಾರತ ಭಾಗ್ಯ ವಿಧಾತರು ನಿಜವಾದ ನಾಯಕರು 

    ಇವರೇ ನಮ್ಮ ಅಚ್ಚುಮೆಚ್ಚಿನ ದೇಶದ ದೇವರು ಸೈನಿಕರು 

                                                  ರಚನೆ -ಜೀವನ್