ಹೊಂಗನಸು
ಹೊಂಗನಸು
ಪ್ರೇಮವದು ಸಹಜ
ನಲ್ಲೆ ಹಪಹಪಿಸುವುದು ನಿಜ
ಸಮ್ಮತಿಸದಿದ್ದರೆ ಸಜ
ಒಪ್ಪಿದರೆ ಒಲವಿನ ಮಜ
ಅನುರಾಗದ ಅನುಕ್ಷಣದ ಅಲೆ
ಸಮಾಜದ ಸಂಕೋಲೆ
ಮಾಡಿಬಿಡುತ್ತೆ ಪ್ರೀತಿಯ ಕೊಲೆ
ಎದೆಯಂತರಾಳದಿ ಬುಗಿಲೆದ್ದ ವಿರಹ ಜ್ವಾಲೆ
ನಿಷ್ಕಲ್ಮಶ ಪ್ರೀತಿಗೆ ಸ್ಪಂದಿಸಲೆ
ನೀತಿ ನಿಯಮ ಬದಿಗೊತ್ತಲೋಲ್ಲೆ
ಬಾಯಲ್ಲಿ ಮೂಡುತ್ತಿಲ್ಲ ಆ ಸೊಲ್ಲೆ
ಹೃದಯವಾಯಿತು ಕಲ್ಲೆ
ಕಮರಿದ ಕನಸು
ಮುದುಡಿದ ಮನಸು
ಮತ್ತೆ ಓಡಮೂಡುವುದೆ ಹೊಂಗನಸು
ಆ ಸವಿ ಸ್ವಪ್ನ ಬಲು ಸೊಗಸು
ಲೋಕರತ್ನ ಸುತೆ