ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯದ ಲಾಭ ಪಡೆಯಿರಿ: ಬೆಳವಣಕಿ

ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯದ ಲಾಭ ಪಡೆಯಿರಿ: ಬೆಳವಣಕಿ

ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯದ ಲಾಭ ಪಡೆಯಿರಿ: ಬೆಳವಣಕಿ

ಆಳಂದ: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಅಡಿಯಲ್ಲಿ ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆ ಸಾಧಿಸಲು ಹಾಗೂ ಸ್ವಯಂ ಉದ್ಯೋಗಕ್ಕಾಗಿ ನೀಡುತ್ತಿರುವ ತರಬೇತಿಯಂತ ಕಾರ್ಯಕ್ರಮಗಳ ಲಾಭವನ್ನು ಫಲಾನುಭವಿಗಳು ಪಡೆದುಕೊಂಡು ವ್ಯಕ್ತಿಗತ ಅಭಿವೃದ್ಧಿ ಸಾಧಿಸಬೇಕು ಎಂದು ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಿಕಿ ಅವರು ಹೇಳಿದರು. 

ತಾಲೂಕಿನ ಬೆಳಮಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮೂರು ತಿಂಗಳ ಉಚಿತವಾಗಿ ಹೊಲಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಈಗಿನ ಕಾಲದಲ್ಲಿ ಜನ ಸಾಮಾನ್ಯರ ಜೀವನ ನಡೆಸಲು ತುಂಬಾ ಕಷ್ಟ ಇದೆ. ದಿನ ದಿನಕ್ಕೆ ಖರ್ಚು ವೆಚ್ಚಗಳು ಹೆಚ್ಚಾಗುತ್ತಿದ್ದೂ ಖರ್ಚು ವೆಚ್ಚಗಳನ್ನು ನಿಬಾಯಿಸಿಕೊಂಡು ಹೋಗಲು ಉದ್ಯೋಗ ಬೇಕೇ ಬೇಕು ಈ ನಿಟ್ಟಿನಲ್ಲಿ ಸಂಸ್ಥೆಯಿAದ ನೀಡಿದ ಹೊಲಿಗೆ ತರಬೇತಿಯ ಫಲಾನುಭವಿಗಳು, ಸ್ವಾವಲಂಬಿಗಳಾಗಿ ಆರ್ಥಿಕ ಸದೃಢತೆಯನ್ನು ಸಾಧಿಸಿಕೊಳ್ಳಬೇಕು ಎಂದು ಹೇಳಿದರು. 

ಧರ್ಮಸ್ಥಳ ಸಂಸ್ಥೆಯ ಅಡಿಯಲ್ಲಿನ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿ ನೀಡಲಾಗಿದ್ದು ಇದರ ಉಪಯೋಗ ನೀವೆಲ್ಲ ಪಡೆದುಕೊಂಡಿದ್ದು ಇದರ ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. 

ಸಂಸ್ಥೆಯ ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯ ರಾಜಕುಮಾರ ಶೇಟಗಾರ, ಗ್ರಾಪಂ ಮಾಜಿ ಅಧ್ಯಕ್ಷ ಧನರಾಜ ರಾಠೋಡ, ಸೊಸೈಟಿ ಮಾಜಿ ಸದಸ್ಯ ಕೇಮಲಿಂಗಪ್ಪ ಹಳ್ಳಿ ಗ್ರಾಮಸ್ಥರಾದ ಭಿಮಾಶಂಕರ ಶೇಟಗಾರ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ತರಬೇತಿ ಪಡಕೊಂಡ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಣುಕಾ ಹಿರೇಕುಡಿ, ವಲಯ ಮೇಲ್ವಿಚಾಕಿ ಜಯಶ್ರೀ, ಸೇವಾ ಪ್ರತಿನಿಧಿಗಳಾದ ಸವಿತಾ, ಪಂಚಶೀಲ, ಸಂಘದ ಸದಸ್ಯರು ಹಾಜರಿದ್ದರು. 

ವರದಿ ಡಾ ಅವಿನಾಶ S ದೇವನೂರ