ಪಂಚಮಿ ಹಬ್ಬ, ಪ್ರೊ.ಶೋಭಾದೇವಿ ಚಕ್ಕಿ

ಪಂಚಮಿ ಹಬ್ಬ, ಪ್ರೊ.ಶೋಭಾದೇವಿ ಚಕ್ಕಿ

ಪಂಚಮಿ ಹಬ್ಬ

ಬಾಗಿಲಿಗೆ ತೋರಣ ಕಟ್ಟೋಣ

ಚುಕ್ಕಿ ರಂಗೋಲಿ ಬಿಡಿಸೋಣ

ಬಣ್ಣವ ನಾವು ತುಂಬೋಣ

ಪಂಚಮಿ ಹಬ್ಬ ಮಾಡೋಣ

ಲಂಗ ದಾವಣಿ ಧರಿಸೋಣ

ತಲೆಗೆ ಹೂವನು ಮುಡಿಯೋಣ

ಕೈತುಂಬ ಬಳೆಯನು ಹಾಕೋಣ

ಪಂಚಮಿ ಹಬ್ಬ ಮಾಡೋಣ

ನಾಗಪ್ಪಗ ಪೂಜೆ ಮಾಡೋಣ

ಹಂಗನೂಲನು ಹಾಕೋಣ

ತುಂಬಿಟ್ಟು ಉಂಡಿ ತಿನ್ನೋಣ

ಪಂಚಮಿ ಹಬ್ಬ ಮಾಡೋಣ

ಗೆಳತಿಯರೆಲ್ಲರು ಸೇರೋಣ

ಜೋಕಾಲಿಯಲ್ಲಿ ಜೀಕೋಣ

ಹಾಡನು ನಾವು ಹಾಕೋಣ

ಪಂಚಮಿ ಹಬ್ಬ ಮಾಡೋಣ 

ದ್ವೇಷವನ್ನು ಮರೆಯೋಣ

ಸ್ನೇಹದಿ ನಾವು ಬಾಳೋಣ

ಉತ್ತಮ ಪ್ರಜೆಗಳಾಗೋಣ

ನಾಡಿನ ಗರಿಮೆ ಸಾರೋಣ

     ಪ್ರೊ.ಶೋಭಾದೇವಿ ಚೆಕ್ಕಿ