ಸಹೋದರತ್ವ,ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ.

ಸಹೋದರತ್ವ,ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ.
ಚಿಟಗುಪ್ಪ : ಶಾಂತಿ ಇದ್ದ ಸ್ಥಳ ಸದಾ ಕಾಲ ಅಭಿವೃದ್ಧಿ ಕಾಲವಾಗಲಿದೆ.
ಸಹೋದರತ್ವ,ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ ಎಂದು ಚಿಟಗುಪ್ಪಾ ವೃತ್ತ ನಿರೀಕ್ಷಕರಾದ ಶ್ರೀನಿವಾಸ ಅಲ್ಲಾಪೂರ್ ರವರು ಹೇಳಿದರು.
ನಗರದ ಪೋಲಿಸ್ ಠಾಣೆಯಲ್ಲಿ ರಂಜಾನ್ ಹಾಗೂ ಹೋಳಿ ಹಬ್ಬದ ಪ್ರಯುಕ್ತ
ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕೆಲಸವಾಗಿದೆ. ರಂಜಾನ್, ಹೋಳಿ ಹಬ್ಬಗಳು ಶಾಂತಿಯುತವಾಗಿ ಆಚರಣೆ ಆಗಬೇಕು. ಈ ದಿಸೆಯಲ್ಲಿ ಪೊಲೀಸ್ ಇಲಾಖೆ ಎಲ್ಲಾ ಕಟ್ಟು ನಿಟ್ಟಿನ ನಿಯಮಗಳನ್ನು ಕೈಗೊಂಡು ಎಲ್ಲರಿಗೂ ಸುರಕ್ಷತೆ ನೀಡುತ್ತದೆ.
ಒಮ್ಮೆ ಆದಂತಹ ಘಟನೆ ಪುನಃ ಪುನರಾವರ್ತನೆ ಆಗದಂತೆ ಕ್ರಮ ವಹಿಸುವುದು ಪೋಲೀಸ್ ಇಲಾಖೆ ಜವಾಬ್ದಾರಿ ಸಹ ಆಗಿದೆ. ಈ ನಿಟ್ಟಿನಲ್ಲಿ ಇಲಾಖೆಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ.ಫೇಸ್‍ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ವಿಷಯಗಳನ್ನು ಪೋಸ್ಟ್ ಮಾಡಬಾರದು, ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬೇಡಿ. ಪರಸ್ಪರ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಚಿಟಗುಪ್ಪಾ ಠಾಣೆ ಉಪ ನಿರೀಕ್ಷಕರಾದ ಭಾಶುಮಿಯ್ಯಾ ರವರು ಮಾತನಾಡಿ ಯಾರದೋ ವೈಯಕ್ತಿಕ ಸಮಸ್ಯೆ ತಂದು ಅದು ಸಮಾಜಗಳ ಮೇಲೆ ಹಾಕಬೇಡಿ.ಧರ್ಮ - ಧರ್ಮಗಳ ನಡುವೆ ದ್ವೇಷ ಹಚ್ಚುವ ಕೆಲಸ ಯಾರು ಮಾಡಬೇಡಿ.
ಜನಸಾಮಾನ್ಯರ ರಕ್ಷಣೆ ಮಾಡುವುದು ಪೋಲೀಸ್ ಇಲಾಖೆಯ ಆದ ಕರ್ತವ್ಯವಾಗಿದೆ. ರಂಗಪಂಚಮಿಯಂದು ರಾಸಾಯನಿಕ ಬಣ್ಣ ಬಳಸದೆ ಒಣ ಬಣ್ಣ ಬಳಸುವುದು ಸೂಕ್ತ.
ಸಮಯ - ಸಂದರ್ಭಕ್ಕೆ ಅನುಗುಣವಾಗಿ ಪೋಲಿಸ್ ಇಲಾಖೆಯು ನೀಡುವ ಸಲಹೆ - ಸೂಚನೆಗಳು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು.ಕಾನೂನು ಮೀರುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸಿ ಎಂದರು.
ಈ ಸಂದರ್ಭದಲ್ಲಿ ಶಾಂತಿ ಸಭೆ ಕುರಿತು ಸಂಗಮೇಶ ಎನ್ ಜವಾದಿ, ರಾಷೀದ್ ಅಲಿ ಪಟೇಲ್ , ರಾಜ್ ದೀಪ ಜಾಬಾಮಾತನಾಡಿದರು.
ಚಿಟಗುಪ್ಪ ನಗರದ ಪುರಸಭೆ ಸದಸ್ಯರು,
ವಿವಿಧ ಗ್ರಾಮಗಳ ಗಣ್ಯರು ಉಪಸ್ಥಿತರಿದ್ದರು.