ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ನಾಗೇಂದ್ರ ಭಾಜನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ  ಪ್ರಶಸ್ತಿಗೆ ಹಿರಿಯ ಪತ್ರಕರ್ತ ನಾಗೇಂದ್ರ  ಭಾಜನ

ಗಿರಿನಾಡಿಗೆ ಗರಿಮೂಡಿಸಿದ ಮತ್ತೊಂದು ಪ್ರಶಸ್ತಿಯ ಮುಕುಟ..

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ನಾಗೇಂದ್ರ ಭಾಜನ

ಸಂಘದ ಪರವಾಗಿ ಅವರಿಗೆ ವಿಶೇಷವಾದ ಅಭಿನಂದನೆಗಳು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವಿಶೇಷ ಪ್ರಶಸ್ತಿಗೆ ಪ್ರಜಾವಾಣಿ ಪತ್ರಿಕೆ ಶಹಾಪುರ ತಾಲ್ಲೂಕು ವರದಿಗಾರ ನಾಗೇಂದ್ರ ಅವರು ಭಾಜನರಾಗಿದ್ದಾರೆ.

ಕಳೆದ ಸುಮಾರು 30 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮ ಪ್ರಖರವಾದ ಬರವಣಿಗೆ ಮೂಲಕ ಸೇವೆ ಸಲ್ಲಿಸುತ್ತಿರುವ ಅವರಿಗೆ ಪ್ರಶಸ್ತಿ ಲಭಿಸಿರುವುದು ಗಿರಿನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಪ್ರಶಸ್ತಿಗಳನ್ನು ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿ ನೀಡಲಾಗುತ್ತಿದೆ.

ಮಾಚ್೯ 9ರಂದು ಕೊಪ್ಪಳದಲ್ಲಿ ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಜಿಲ್ಲೆಯ ಹಿರಿಯ ಪತ್ರಕರ್ತ ನಾಗೇಂದ್ರ ಅವರನ್ನು ಪ್ರಶಸ್ತಿಗೆ ಪರಿಗಣಿಸಿರುವುದಕ್ಕೆ ಅವರಿಗೆ ಸಂಘದ ಪರವಾಗಿ ಅಭಿನಂದನೆಗಳು

ಪ್ರಶಸ್ತಿಗಳಿಂದ ಮತ್ತಷ್ಟು ಜವಾಬ್ದಾರಿ ನಿಮ್ಮಿಂದ ನಾವು ನಿರೀಕ್ಷೆ ಮಾಡುತ್ತೇವೆ. ಹರಿತವಾದ ಲೇಖನಗಳು ನಿಮ್ಮ ಬರವಣಿಗೆಯಿಂದ ಸದಾ ಚಿಮ್ಮಲಿನಾಗೇಂದ್ರ ಅವರಿಗೆ ಇನ್ನಷ್ಟು 

ಪ್ರಶಸ್ತಿಗಳು ಹರಸಿ ಬರಲಿ ಎಂದು ಸಂಘದ ಪರವಾಗಿ ಹಾರೈಸುತ್ತೇನೆ