ಬೀದರ್ ಜಿಲ್ಲೆ ಇತಿಹಾಸ, ಸಂಸ್ಕøತಿ ರಾಜ್ಯಕ್ಕೆ ಮಾದರಿ:ಸಚಿವ ಈಶ್ವರ ಖಂಡ್ರೆ ಸ್ಮರಣೆ,
ಡಿಗ್ಗಿ ಮಡಿವಾಳೇಶ್ವರ ದೇಗುಲದಲ್ಲಿ ರುದ್ರಾಭಿಷೇಕ; ಸಚಿವ ಈಶ್ವರ ಖಂಡ್ರೆ ಸ್ಮರಣೆ,
ಬೀದರ್ ಜಿಲ್ಲೆ ಇತಿಹಾಸ, ಸಂಸ್ಕøತಿ ರಾಜ್ಯಕ್ಕೆ ಮಾದರಿ
ಕಮಲನಗರ: ಬೀದರ ಜಿಲ್ಲೆಯ ಇತಿಹಾಸ, ಪರಂಪರೆ, ಸಂಸ್ಕøತಿ ರಾಜ್ಯಕ್ಕೆ ಮಾದರಿಯಾಗಿದ್ದು, ಜನರ ಸಂಸ್ಕøತಿ, ಡಾ. ಚನ್ನಬಸವ ಪಟ್ಟದ್ದೇವರು ಜನ್ಮಭೂಮಿ ಕಮಲನಗರ ಸುತ್ತಮುತ್ತಲಿನ ಗ್ರಾಮಗಳ ಉಗಮ ಬೆಳವಣಿಗೆಗೆ ಕಾರಣವಾಗಿದೆ ಎಂದು ಅರಣ್ಯ ಪರಿಸರ ಜೀವಶಾಸ್ತ್ರ ಸಚಿವ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ.ಬಿ. ಖಂಡ್ರೆ ಹೇಳಿದರು.
ತಾಲ್ಲೂಕಿನ ಡಿಗ್ಗಿ ಗ್ರಾಮದ ಆರೈಧ್ಯದೈವ ಶ್ರೀ ಮಡಿವಾಳೇಶ್ವರ ದೇಗುಲದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಮಹಾರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಮಡಿವಾಳೇಶ್ವರ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರಿ.ಶ. ಪೂರ್ವ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಕರ್ನಾಟಕದ ಉತ್ತರ ಪೂರ್ವಭಾಗದಲ್ಲಿರುವ ಬೀದರ್ ದಖ್ಖನ್ ಪ್ರಸ್ತಭೂಮಿ, ಸುದೀರ್ಗ ಐತಿಹಾಸಿಕ ಸಾಹಿತ್ಯಕ ಪರಂಪರೆಯ, ವಿಭಿನ್ನ ಸಾಂಸ್ಕøತಿಕ ನೆಲೆಯ, ಡಾ. ಪಟ್ಟದ್ದೇವರ ಸಮಾಜೋ-ಧಾರ್ಮಿಕ ಕಳಕಳಿಯ, ವೈವಿಧ್ಯಮಯ ಸಂಪ್ರದಾಯಗಳ, ಜೀವಪರ ಕಾಳಜಿಯ ತಾಣವಾಗಿದೆ. ಈ ಜಿಲ್ಲೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟತೆ ಪಡೆದುಕೊಂಡಿದೆ ಎಂದರು.
ಸರ್ಕಾರ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿದೆ. ಸರ್ಕಾರ ಇರುವರೆಗೂ ಗೃಹಲಕ್ಷ್ಮೀ, ಗೃಹಜ್ಯೋತಿ ಸ್ಭೆರಿದಂತೆ ಉಚಿತ ಯೋಜನೆಗಳು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತೇವೆ. ಅಲ್ಲದೇ ಬೀದರ್ ಮಾದರಿ ಜಿಲ್ಲೆಯನ್ನಾಗಿಸುವ ಗುರಿ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಡಾ. ಗೀತಾ ಈಶ್ವರ ಖಂಡ್ರೆ, ಮುಖಂಡ ಭೀಮಸೇನ್ ಸಿಂಧೆ, ಪ್ರಕಾಶ ಟೊಣ್ಣೆ, ಆನಂದ ಚವಾಣ್, ಹಣಮಂತರಾವ ಚವಾಣ್, ಪ್ರವೀಣ ಪಾಟೀಲ, ಸಂತೋಷ ಬಿರಾದಾರ, ಬಾಬುರಾವ ಪಾಟೀಲ, ಪ್ರಕಾಶ ಮಾನಕರಿ, ಸುಭಾಷ ಮಿರ್ಚೆ, ಶೇಖರ ವಂಕೆ, ಜ್ಯೋತಿ ಸಂತೋಷ ಪಾಟೀಲ, ದೇವೇಂದ್ರ ಪಾಟೀಲ, ಮಡಿವಾಳಪ್ಪ ಮುರ್ಕೆ, ಭೀಮರಾವ ಪಾಟೀಲ, ವಿಜಯಕುಮಾರ ಪಾಟೀಲ, ಸಂಜೀವಕುಮಾರ ಪಾಟೀಲ ಇದ್ದರು.
ವಚನಶ್ರೀ ಸ್ವಾಗತ ಗೀತೆ ಹಾಡಿದರು. ನವಲಿಂಗ ಪಾಟೀಲ್ ನಿರೂಪಿಸಿದರು. ಶಿವರಾಜ ಪಾಟೀಲ ಸ್ವಾಗತಿಸಿದರು. ಪ್ರಶಾಂತ್ ಖಾನಪುರೆ ವಂದಿಸಿದರು.
ಮೆರವಣಿಗೆ:
ಡಿಗ್ಗಿ ಗ್ರಾಮದ ಹೊರವಲಯದ ಅಗ್ಗಿ ಬಸವಣ್ಣ ಮಂಟಪದಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ.ಬಿ.ಖಂಡ್ರೆ ಮತ್ತು ಡಾ. ಗೀತಾ ಖಂಡ್ರೆ ಅವರನ್ನು ಸಾರೋಟಿನಲ್ಲಿ ಕುಳ್ಳರಿಸಿ ಭವ್ಯ ಮೆರವಣಿಗೆ ಜರುಗಿತು.
ಮೆರವಣಿಗೆ ಗ್ರಾಮದ ಮಹಾಧ್ವಾರದ ಮೂಲಕ ಸರ್ಕಾರಿ ಶಾಲೆ ಮಾರ್ಗವಾಗಿ ಶ್ರೀ ಮಡಿವಾಳೇಶ್ವರ ದೇಗುಲದವರೆಗೂ ಮೆರವಣಿಗೆ ನಡೆಯಿತು.
ಮೆರವಣಿಗೆ ಉದ್ದಕ್ಕೂ ಸರ್ಕಾರಿ ಶಾಲೆ, ಗುರುಪ್ಪ ಟೊಣ್ಣೆ, ಶರಣಬಸವೇಶ್ವರ ಪಬ್ಲಿಕ್ ಶಾಲೆ ಮುದ್ದು ಮಕ್ಕಳಿಂದ ಸಾಂಸ್ಕøತಿಕ ನೃತ್ಯ, ಡಿಜೆ ಹಾಡುಗಳು, ಭಾಜಾ ಭಜಂತ್ರಿ ಮೆರವಣಿಗೆಗೆ ಮೆರಗು ಹೆಚ್ಚಿಸಿದವು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ಸಚಿವ ಈಶ್ವರ ಖಂಡ್ರೆ ಅವರನ್ನು ಸ್ವಾಗತಿಸಿದ ಬಳಿಕ ಸನ್ಮಾನಿಸಿದರು. ಕಮಲನಗರ ಪೊಲೀಸ್ ಠಾಣೆ, ಹೊಕರಣಾ ಠಾಣೆ, ಕುಶನೂರು ಠಾಣೆ, ಭಾಲ್ಕಿ ಠಾಣೆ ಮತ್ತು ಬೀದರ್‍ನ ಡಿಎಆರ್ ಪೋಲಿಸ್ ಸಿಬ್ಬಂದಿ ಸಿಪಿಐ, ಪಿಎಸ್‍ಐ, ಎಸ್‍ಐ, ಜಮಾದಾರ ಹಾಗೂ ಪೊಲೀಸ್ ಪೇದೆಗಳಿಗೆ ಬೀಗಿ ಬಂದೋಬಸ್ತ್‍ಗಾಗಿ ನೇಮಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆದುಕೊಳ್ಳದಂತೆ ನೋಡಿಕೊಳ್ಳಲಾಯಿತು.