ತೋರಣಾ ಗ್ರಾಮದಲ್ಲಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನ: ಇಓ ಮಾಣಿಕರಾವ ಪಾಟೀಲ ಚಾಲನೆ
ತೋರಣಾ ಗ್ರಾಮದಲ್ಲಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನ: ಇಓ ಮಾಣಿಕರಾವ ಪಾಟೀಲ ಚಾಲನೆ
ಸ್ವಚ್ಛವಾಹಿನಿ ಮೂಲಕ ಜಾಗೃತಿ, ಮನೆ ಮನೆ ಜಾಥಾ: ಕಾಮಗಾರಿ ಬೇಡಿಕೆ ಅರ್ಜಿ ಸ್ವೀಕಾರ
ರೈತರು ತಮ್ಮ ಮೊಬೈಲ್ ನಲ್ಲೆ ಸ್ಕ್ಯಾನ ಮಾಡಿ ಕಾಮಗಾರಿ ಅರ್ಜಿ ಸಲ್ಲಿಸಿ
ಕಮಲನಗರ ತಾಲೂಕಿನ ತೋರಣಾ ಗ್ರಾಮ ಪಂಚಾಯತಿಯ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ *2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಚಾಲನೆ ನೀಡಿದರು.
ತಾಲೂಕು ಪಂಚಾಯತಿ *ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಮಾಣಿಕರಾವ ಪಾಟೀಲ* ಅವರು ಆಟೋ ಪ್ರಚಾರಕ್ಕೆ ಚಾಲನೆ ನೀಡಿ, ನರೇಗಾ ಯೋಜನೆಯಡಿ ಡಿಜಿಟಲ್ ಆನ್‌ಲೈನ್ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು. ಕ್ಯೂಆರ್ ಕೋಡ್ ಮೂಲಕ ತಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಕ್ರಿಯಾಯೋಜನೆ ಸಿದ್ದಪಡಿಸುವ ಸಲುವಾಗಿ ಐಇಸಿ ಕಾರ್ಯಕ್ರಮದಡಿ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಮನರೇಗಾ ಯೋಜನೆಯಡಿ ದಿನಕ್ಕೆ 349 ರೂ. ಕೂಲಿ ದೊರೆಯುತ್ತದೆ. ಹೆಣ್ಣು ಗಂಡಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುತ್ತದೆ. ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ 100 ದಿನಗಳು ಕೆಲಸ ದೊರೆಯುತ್ತದೆ. ಎಲ್ಲರು ಸದುಪಯೋಗ ಪಡೆದುಕೊಳ್ಳಿ ಎಂದರು.
ನರೇಗಾ ಯೋಜನೆಯಡಿ ಇರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ತಿಳಿಸಿದರು. ಅರ್ಹ ಫಲಾನುಭವಿಗಳು ವೈಯಕ್ತಿಕ ಕಾಮಗಾರಿಗಳಾದ ಬಚ್ಚಲುಗುಂಡಿ, ದನದ ಕೊಟ್ಟಿಗೆ, ಕೋಳಿ ಶೆಡ್, ಕುರಿ ಶೆಡ್, ತೋಟಗಾರಿಕೆ, ರೇಷ್ಮೆ ಕಾಮಗಾರಿಗಳು ಕೂಡ ಇದೆ. ಜೀವಿತಾವಧಿಯಲ್ಲಿ 5 ಲಕ್ಷದವರೆಗೂ ಅನುದಾನ ಪಡೆದುಕೊಂಡು ಕಾಮಗಾರಿಗಳನ್ನು ಮಾಡಿಕೊಳ್ಳಬಹುದು ಎಂದರು ಜೊತೆಗೆ ಮನರೇಗಾ ಏಕೀಕೃತ ಸಹಾಯವಾಣಿಯಾದ 827750600 ಬಗ್ಗೆ ಅರಿವು ಮೂಡಿಸಿದರು. ಜಾಗೃತಿ ಜಾಥಾ ಹಾಗೂ ರೈತರಿಂದ ಕಾಮಗಾರಿಗಳ ಬೇಡಿಕೆ ಅರ್ಜಿ ಸಲ್ಲಿಸಲು ತಿಳಿಸಿದರು.
ಗ್ರಾಮ ಪಂಚಾಯತಿ ಪಿಡಿಓರಾದ ಮಲ್ಲೇಶ ಅವರು ಸ್ವ-ಸಹಾಯ ಸಂಘದ ಮಹಿಳೆಯರು ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಅದಕ್ಕಾಗಿ ಇಂದೆ ಎಲ್ಲರೂ ಅರ್ಜಿ ಸಲ್ಲಿಸಬೇಕು ಗ್ರಾಮ ಪಂಚಾಯತನಲ್ಲಿ ಬೇಡಿಕೆ ಪೆಟ್ಟಿಗೆಯಲ್ಲಿ ಸಹ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ ಆದ ಕಾರಣ ಸರಕಾರದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು. ಇದೇ ವೇಳೆ ಗ್ರಾಮದ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಮುಂದಿನ ವರ್ಷದ ಕ್ರಿಯಾಯೋಜನೆಯಲ್ಲಿ ತಮ್ಮ ಹೆಸರು ಸೇರಿಸಲಾಗುವುದು ಎಂದು ತಿಳಿಸಿದರು.
ಜಾಥಾದಲ್ಲಿ ಅಧ್ಯಕ್ಷರಾದ ಸುನೀಲ ಶಿಗರೆ, ಸದಸ್ಯರಾದ ಮಾಧವ ಬೋಸಲೆ, ಕಾರ್ಯದರ್ಶಿ ಸಂಜುಕುಮಾರ ಮಾಳೆ, ಗ್ರಾಮ ಪಂಚಾಯತಿ ಕರ ವಸುಲಿಗಾರರಾದ ಸಂಜು ಬಾಕಲೆ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಕವಿತಾ ಬಿರಾದಾರ, ರಾಜೀವಗಾಂಧಿ ಸಂಯೋಜಕರಾದ ಸಂಪತ್ತ, ಐಇಸಿ ಸಂಯೋಜಕರಾದ ಸವಿತಾ ನಾಗೇಶ, ಗ್ರಾ.ಪಂ ಸಿಬ್ಬಂದಿ, ಸ್ವ ಸಹಾಯ ಸಂಘದ ಮಹಿಳೆಯರು, ಗ್ರಾಮದ ಹಿರಿಯರು ಸಾರ್ವಜನಿಕರು ಹಾಜರಿದ್ದರು.