ವಿದ್ಯಾರ್ಥಿಗಳು ಕಲಿಕಾ ಆಸಕ್ತಿಯನ್ನು ಹೆಚ್ಚಿಸಬೇಕು. ವೀರೇಶ ಬೋಳಶೆಟ್ಟಿ

ವಿದ್ಯಾರ್ಥಿಗಳು ಕಲಿಕಾ ಆಸಕ್ತಿಯನ್ನು ಹೆಚ್ಚಿಸಬೇಕು. ವೀರೇಶ ಬೋಳಶೆಟ್ಟಿ

ವಿದ್ಯಾರ್ಥಿಗಳು ಕಲಿಕಾ ಆಸಕ್ತಿಯನ್ನು ಹೆಚ್ಚಿಸಬೇಕು. ವೀರೇಶ ಬೋಳಶೆಟ್ಟಿ

ಗಣಿತ ಕಲಿಕಾ ಆಂದೋಲನವು ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಗಣಿತ ವಿಷಯದ ಆಸಕ್ತಿಯನ್ನು ವೃದ್ಧಿಸಿ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಆಳಂದ ತಾಲ್ಲೂಕಿನ ಹೊದಲೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ವೀರೇಶ ಬೋಳಶೆಟ್ಟಿ ಹೇಳಿದರು.ಗಣಿತ ಕಲಿಕಾ ಆಂದೋಲನದ ಅಂಗವಾಗಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಯೋಗದಲ್ಲಿ ಆಳಂದ ತಾಲೂಕಿನ ಹೊದಲೂರು ಗ್ರಾಮ ಪಂಚಾಯತ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಒಟ್ಟು ಏಳು ಶಾಲೆಗಳ ವಿದ್ಯಾರ್ಥಿಗಳನ್ನೊಳಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊದಲೂರಿನಲ್ಲಿ ಆಯೋಜಿಸಲಾಗಿದೆ. 

  ಎಲ್ಲಾ ಮಕ್ಕಳು ಈ ಗಣಿತ ಕಲಿಕಾ ಆಂದೋಲನದ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಹೊದಲೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರಿ ಮುಖ್ಯ ಗುರುಗಳಾದ ಮಂಜು ರೆಡ್ಡಿ ವಹಿಸಿದರು. ಹಿರಿಯ ಶಿಕ್ಷಕರಾದ ಮಲ್ಲಿಕಾರ್ಜುನ ಹೊಸಮನಿ ಕಾರ್ಯಕ್ರಮ ಉದ್ಘಾಟಿಸಿದರು. ನಂದಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಶಿಕ್ಷಕರಾದ ರವೀಂದ್ರ ರುದ್ರವಾಡಿಯವರು ಗಣಿತ ಕಲಿಕಾ ಸ್ಪರ್ಧೆಯ ನಿಯಮಗಳನ್ನು ಮಕ್ಕಳೆಲ್ಲರಿಗೂ ತಿಳಿಸಿದರು. ಗ್ರಾಮೀಣ ಪ್ರದೇಶದ 4, 5 ಮತ್ತು 6ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ಗಣಿತ ಕಲಿಕಾ ಆಂದೋಲನದ ನಿಮಿತ್ತ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮೂಲಭೂತ ಗಣಿತ ಸಾಕ್ಷರತೆಯನ್ನು ಅಳೆಯುವ ಗಣಿತ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಈ ಸ್ಪರ್ಧೆಯು ಮಕ್ಕಳಲ್ಲಿ ಗಣಿತದ ಕುರಿತಾಗಿನ ಆಸಕ್ತಿಯನ್ನು ಹೆಚ್ಚಿಸಿ, ಗಣಿತ ಕಲಿಕೆಯನ್ನು ಸಂತಸದಾಯಕವನ್ನಾಗಿ ಮಾಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು. 

ಹೊದಲೂರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀದೇವಿ ಕಾಮಶೆಟ್ಟಿ,ಹೊದಲೂರ ಗ್ರಾಪಂ ಲೆಕ್ಕಾದಿಕಾರಿ ಲಕ್ಪತಿ ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿದ್ದರು. ಕಾರ್ಯಕ್ರಮದಲ್ಲಿ ಹೊದಲೂರ,ಜವಳಗಾ,ಹೊದಲೂರ ತಾಂಡಾ,ನಂದಗೂರು,ಅಣೂರ ಶಾಲೆಯ ಮಕ್ಕಳು,ಶಿಕ್ಷಕರಾದ ಹಣಮಂತ ಪಾತ್ರೆ, ಮೋಹನಕುಮಾರ ಬಿ.ಕೆ. ಕರೆಪ್ಪ ಮುಧೋಳ, ಚಂದ್ರಶೇಖರ ಮಠಪತಿ, ಸ್ವಪ್ನಾ ಮೋದಿ, ನಾಗಿಣಿ ಬಸವರಾಜ ಹಾಗೂ ಅತಿಥಿ ಶಿಕ್ಷಕರು ಸೇರಿದಂತೆ ಗ್ರಾಮದ ಅನೇಕ ಜನ ಭಾಗವಹಿಸಿದ್ದರು.