ಡಾ. ಪೆರ್ಲಗೆ ಕ.ಸಾ ಪ ಪುರಸ್ಕಾರ

ಡಾ. ಪೆರ್ಲಗೆ ಕ.ಸಾ ಪ ಪುರಸ್ಕಾರ
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ವತಿಯಿಂದ ಫೆಬ್ರವರಿ20 ಮತ್ತು 21ರಂದು ನಡೆದ 21ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ ಕ್ಷೇತ್ರದ ವಿಶೇಷ ಸಾಧನೆಗಾಗಿ ಡಾ. ಸದಾನಂದ ಪೆರ್ಲ ಅವರನ್ನು ಸನ್ಮಾನಿಸಲಾಯಿತು.
ಫೆ. 21ರಂದು ಕಲಬುರಗಿಯ ಬಾಪೂಗೌಡ ದರ್ಶನಾಪುರ ರಂಗ ಮಂದಿರದ ಪೂಜ್ಯ ದೊಡ್ಡಪ್ಪ ವೇದಿಕೆಯಲ್ಲಿ ನಡೆದ ವಿವಿಧ ಕ್ಷೇತ್ರದ ಪ್ರಮುಖರ ಸತ್ಕಾರ ಸಮಾರಂಭದಲ್ಲಿ ಶರಣಬಸವೇಶ್ವರ ಸಂಸ್ಥಾನ ಮಠದ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ ಅವರು ಮಧ್ಯಮ ರಂಗದ ವಿಶೇಷ ಕೊಡುಗೆಗಾಗಿ ಡಾ. ಪೆರ್ಲ ಅವರಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಹನುಮಂತ ರಾವ್ ಬಿ ದೊಡ್ಮನಿ, ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ್ ತೇಗಳತಿಪ್ಪಿ, ಸಂಶೋಧಕ ಮುಡುಬಿ ಗುಂಡೇರಾವ್, ಶಿಕ್ಷಕರ ಸಹಕಾರಿ ಸಂಘದ ಶ್ರೀಮತಿ ನಂದಿನಿ ಸನಬಾಳ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸಾವಿತ್ರಿ ಪಾಟೀಲ್ ಮತ್ತು ಇದ್ದರೂ ಉಪಸ್ಥಿತರಿದ್ದರು.