ಯಡ್ರಾಮಿಯಲ್ಲಿ 70ನೇಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು
ಯಡ್ರಾಮಿಯಲ್ಲಿ 70ನೇಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು
ಜೈ ಕನ್ನಡಿಗರ ಸೇನೆ ಯಡ್ರಾಮಿ ತಾಲೂಕ ಸಮಿತಿ ವತಿಯಿಂದ ನಮ್ಮ ಜೈ ಕನ್ನಡಿಗರ ಸೇನೆ ವೃತ್ತದಲ್ಲಿ 70ನೇಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ. ಅದ್ದೂರಿಯಾಗಿ ಆಚರಣೆ..
ಯಡ್ರಾಮಿ ಪಟ್ಟಣದಲ್ಲಿ ಜೈ ಕನ್ನಡಿಗರ ಸೇನೆ ಯಡ್ರಾಮಿ ತಾಲೂಕ ಸಮಿತಿ ವತಿಯಿಂದ ಜೈ ಕನ್ನಡಿಗರ ಸೇನೆಯ ವೃತ್ತದಲ್ಲಿ 70ನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಹಾಗು
ಈ ಕಾರ್ಯಕ್ರಮದಲ್ಲಿ ಪ್ರಭುಲಿಂಗ ಹಿರೇಮಠ ಮತ್ತು ಡಾ. ಬಸನಗೌಡ ಪಾಟೀಲ್ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು ಹಾಗೂ ಭರತ್ ಎಂ ದೊರೆ ತಾಲೂಕ ಅಧ್ಯಕ್ಷರು ಜೈ ಕನ್ನಡಿಗರ ಸೇನೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಮತ್ತು ಗಂಗಾಧರ್ ಕರಕಿಹಳ್ಳಿ ಅವರು ನಿರೂಪಣೆಯ ಕಾರ್ಯಕ್ರಮವನ್ನು ಮಾಡಿದರು.ಹಾಗು
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿಗಳಾದ ಯಲ್ಲಪ್ಪ ಸುಬೇದಾರ್ ಹಾಗು ಯಡ್ರಾಮಿ ಪೊಲೀಸ್ ಠಾಣೆಯ ಆರಕ್ಷಕ ಅಧಿಕಾರಿ ವಿಶ್ವನಾಥ್ ಮುದರೆಡ್ಡಿ, ಅವರು ವಿಶೇಷವಾಗಿ ಭಾಗವಹಿಸಿದ್ದರು ಹಾಗೂ ಈ ಸಂದರ್ಭದಲ್ಲಿ ತಾಲೂಕಿನ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಹಾಗೂ ಜೈ ಕನ್ನಡಿಗರ ಸೇನೆಯ ಪದಾಧಿಕಾರಿಗಳಾದ, ಆನಂದ ದೊಡ್ಮನಿ ದೇವಿಂದ್ರ ಯಂಕಂಚಿ, ಮಲ್ಲಿಕಾರ್ಜುನ ಯಡ್ರಾಮಿ ಮಲ್ಲಿಕಾರ್ಜುನ್ ಕೋಟರ ನಾಗು ಗುತ್ತೇದಾರ್ ಬಾಗೇಶ್ ಚೀಲಾ ದೇವಿಂದ್ರ ಕಾಚಾಪುರ್ ಬಸವರಾಜ ದೊರೆ ನಾಗರಹಳ್ಳಿ ಲಾಳೆಮಶಾಕ ಹೊಸಮನಿ ಪುಂಡಲೀಕ ಹಳ್ಳಿ ಸಂದೀಪ್ ದೊರೆ ಮಹಾಂತೇಶ್ ಕೊಟರ ರವಿ ಹೂಗಾರ
ಈ ಸಂದರ್ಭದಲ್ಲಿ ಕನ್ನಡ ಅಭಿಮಾನಿಗಳು ಹಾಗೂ ಜೈ ಕನ್ನಡಿಗರ ಸೇನೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು
ವರದಿ ಜೇಟ್ಟೆಪ್ಪ ಎಸ್ ಪೂಜಾರಿ
