ಪುರಾಣ ಪ್ರವಚನಗಳಿಂದ ಮನಸ್ಸಿಗೆ ನೆಮ್ಮದಿ.

ಪುರಾಣ ಪ್ರವಚನಗಳಿಂದ ಮನಸ್ಸಿಗೆ ನೆಮ್ಮದಿ.
ಶಹಾಪುರ : ಮನುಷ್ಯನ ಬದುಕಿನ ಜಂಜಾಟದಿಂದ ದೂರ ಉಳಿದು ಪ್ರತಿನಿತ್ಯ ಪುರಾಣ ಪ್ರವಚನಗಳು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಒಕ್ಕಲಿಗರ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಸಗರ ಗ್ರಾಮದ ಒಕ್ಕಲಿಗೇರ ಹಿರೇಮಠದಲ್ಲಿ ಶ್ರೀ ಕರಿಬಸವೇಶ್ವರ ಜಾತ್ರಾ ಮಹೋತ್ಸವವಾಗಿ ಹಮ್ಮಿಕೊಂಡಿರುವ ಶ್ರೀ ದೇವಿ ಪುರಾಣದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು,
ಶಹಾಪುರ ಏಕದಂಡಗಿ ಮಠದ ಪರಮ ಪೂಜ್ಯ ಕಾಳಹಸ್ತೆಂದ್ರ ಮಹಾಸ್ವಾಮಿಗಳು ಮಾತನಾಡಿ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದರ ಜೊತೆಗೆ ದಾನ,ಧರ್ಮ, ಸತ್ಕಾರ್ಯಗಳು ಕೈಗೊಂಡಾಗ ಮಾತ್ರ ಜೀವನದಲ್ಲಿ ಮೋಕ್ಷ ಕಾಣಲು ಸಾಧ್ಯ ಎಂದು ನುಡಿದರು.
ಈ ಸಮಾರಂಭದ ವೇದಿಕೆಯ ಮೇಲೆ ಅಕ್ಕಮಹಾದೇವಿಯ ಮಠದ ಮಾತೋಶ್ರೀ ಶರಣಮ್ಮ ತಾಯಿ, ದೋರನಹಳ್ಳಿ ಚಿಕ್ಕಮಠದ ಪರಮಪೂಜ್ಯರಾದ ಶಿವಲಿಂಗ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು,ಗುಂಬಳಾಪುರ ಮಠದ ಪರಮಪೂಜ್ಯರಾದ ಯೋಗಿರತ್ನ ಸಿದ್ದೇಶ್ವರ ಶಿವಾಚಾರ್ಯರು,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.