ಮರಾಠಿ ಪುಂಡರನ್ನು ಆದಷ್ಟು ಬೇಗನೆ ಗಡಿಪಾರು ಮಾಡಬೇಕು: ಸಂಗಮೇಶ ಎನ್ ಜವಾದಿ.

ಮರಾಠಿ ಪುಂಡರನ್ನು ಆದಷ್ಟು ಬೇಗನೆ ಗಡಿಪಾರು ಮಾಡಬೇಕು: ಸಂಗಮೇಶ ಎನ್ ಜವಾದಿ.
ಬೀದರ/ಚಿಟಗುಪ್ಪಾ : ಕೆಎಸ್ಆರ್ ಟಿಸಿ ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿರುವ ಮರಾಠಿ ಪುಂಡರನ್ನು ಆದಷ್ಟು ಬೇಗನೆ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಸರ್ಕಾರಕ್ಕೆ ಕನ್ನಡ ನಾಡು ನುಡಿ ಸೇವಕ ಸಂಗಮೇಶ ಎನ್ ಜವಾದಿ ಆಗ್ರಹಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾರಿಗೆ
ಸಂಸ್ಥೆಗಳ ಚಾಲಕ ಮತ್ತು
ನಿರ್ವಾಹಕರ ಮೇಲೆ ಪರಭಾಷಿಕರು ಹಲ್ಲೆ, ದಬ್ಬಾಳಿಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ಆದಾಗ್ಯೂ ಕರ್ನಾಟಕ ಸಾರಿಗೆ ಇಲಾಖೆ ಯಾವುದೇ ರೀತಿಯ ಗಂಭೀರ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಇದು ಖಂಡನೀಯ ನಡೆಯಾಗಿದೆ. ಈ ಕೂಡಲೇ ಗೃಹ ಸಚಿವರು ಮರಾಠಿ ಪುಂಡರನ್ನು ಹತ್ತಿಕ್ಕಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ನಿರಂತರವಾಗಿ ಅನ್ಯ ಭಾಷಿಕರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಸೂಕ್ತ ಚಿಕಿತ್ಸೆ, ಕಾನೂನಿನ ನೆರವು ನೀಡಬೇಕು ಎಂದು ಸಂಗಮೇಶ ಎನ್ ಜವಾದಿ ರವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.