ಡಾ. ಬಾಬು ಜಗಜೀವನರಾಮ ಭವನದ ಕಟ್ಟಡ ಪೂರ್ಣಗೊಳಿಸುವಂತೆ ಸಚಿವರಿಗೆ ಮನವಿ

ಡಾ. ಬಾಬು ಜಗಜೀವನರಾಮ ಭವನದ ಕಟ್ಟಡ ಪೂರ್ಣಗೊಳಿಸುವಂತೆ ಸಚಿವರಿಗೆ ಮನವಿ

ಡಾ. ಬಾಬು ಜಗಜೀವನರಾಮ ಭವನದ ಕಟ್ಟಡ ಪೂರ್ಣಗೊಳಿಸುವಂತೆ ಸಚಿವರಿಗೆ ಮನವಿ

ಕಲಬುರಗಿ: ಜಿಲ್ಲಾ ಮಾದಿಗ ಸಮಾಜದ ಒಕ್ಕೂಟದಿಂದ ಡಾ. ಬಾಬು ಜಗಜೀವನರಾಮ ಭವನದ ಕಟ್ಟಡ ಪೂರ್ಣಗೊಳಿಸಬೇಕೆಂದು ಜಿಲ್ಲಾ ಮಾದಿಗ ಸಮಾಜದ ನಿಯೋಗದ ವತಿಯಿಂದ ಸಚಿವರಾದ ಪ್ರೀಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್, ಹೆಚ್.ಸಿ. ಮಹಾದೇವಪ್ಪ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.

ಜಿಲ್ಲಾ ಮಾದಿಗ ಸಮಾಜದ ನಿಯೋಗದ ವತಿಯಿಂದ ಸುಮಾರು ೨೦ ಜನರು ಸೇರಿಕೊಂಡು ಸಚಿವರಾದ ಪ್ರೀಯಾಂಕ್ ಖರ್ಗೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್, ಹೆಚ್.ಸಿ. ಮಹಾದೇವಪ್ಪ ಇವರನ್ನು ಭೇಟಿ ಮಾಡಿ ಡಾ. ಬಾಬು ಜಗಜೀವನರಾಮ ಭವನದ ಬಗ್ಗೆ ವಿಸ್ತರವಾಗಿ ಹೇಳಿದ ನಂತರ ತಕ್ಷಣ ಸ್ಪಂಧಿಸಿದರು. 

ಸಮಾಜ ಕಲ್ಯಾಣ ಸಚಿವರಿಗೆ ಈ ಕೂಡಲೇ ಹೇಳುತ್ತೇವೆ ಎಂದು ಭರವಸೆ ಕೊಟ್ಟಿರುತ್ತಾರೆ. ಅಲ್ಲದೇ ನಾನು ಕಲಬುರಗಿಗೆ ಬಂದಾಗ ಒಂದು ಸಾರಿ ನನಗೆ ಭವನವನ್ನು ತೋರಿಸಿ ನೋಡೋಣ ಎಂದು ತಿಳಿಸಿದರು. ನಾವು ಕೊಟ್ಟ ಮನವಿಯನ್ನು ಸಮಾಜ ಕಲ್ಯಾಣ ಸಚಿವರಿಗೆ ಈ ಕೂಡಲೇ ನಿಮ್ಮ ಅರ್ಜಿಯನ್ನು ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದರು, ಮುಂದೆ ಅನುದಾನ ಬಿಡುಗಡೆ ಮಾಡಿಕೊಡುತ್ತೇನೆ ಎಂದು ಪ್ರೀಯಾಂಕ್ ಖರ್ಗೆ ಅವರು ಭರವಸೆ ನೀಡಿದ್ದಾರೆ.

ಅದರಂತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಭೇಟಿ ಮಾಡಿದಾಗ ಅವರಿಗೂ ಕೂಡ ಡಾ. ಬಾಬು ಜಗಜೀವನರಾಮ ಭವನದ ನಿರ್ಮಾಣದ ಹಂತವನ್ನು ತಿಳಿಸಿದಾಗ ಅವರು ಕೂಡ ತಕ್ಷಣ ಸಚಿವರಾದ ಹೆಚ್.ಸಿ. ಮಹಾದೇವಪ್ಪ ಸಮಾಜ ಕಲ್ಯಾಣ ಸಚಿವರಿಗೆ ಫೋನ್ ಮೂಲಕ ಕರೆ ಮಾಡಿ ಎಲ್ಲರ ಎದುರುಗಡೆ ಬಾಬುಜೀ ಯವರ ಭವನಕ್ಕೆ ಬೇಕಾಗಿರುವ ಹಣ ಇನ್ನೂ ೫.೦೦ ಕೋಟಿ ರೂಪಾಯಿ ಬೇಕಾಗಿರುತ್ತದೆ. ಅದನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಪೂರ್ವಕವಾಗಿ ಹೇಳಿದರು.

ಸಮಾಜ ಕಲ್ಯಾಣ ಸಚಿವರಿಗೆ ಭೇಟಿ ಮಾಡಿದಾಗ ಸಕರಾತ್ಮವಾಗಿ ಮಾತನಾಡಿ ನಿಮಗೆ ಎಷ್ಟು ಹಣ ಬೇಕು ಎಂದು ಕೇಳಿದಾಗ ನಾವು ಇನ್ನೂ ಭವನ ನಿರ್ಮಾನಕ್ಕೆ ೫.೦೦ ಕೋಟಿ ರೂಪಾಯಿ ಬೇಕಾಗುತ್ತದೆ ಎಂದಾಗ ಅದಕ್ಕೆ ಅವರು ಅಷ್ಟು ಹಣ ಬಿಡುಗಡೆ ಮಾಡಿಸಿಕೊಡುತ್ತೇನೆ ಅಂತಾ ಹೇಳಿದರು.

ಈ ವಿಷಯವನ್ನು ಜಿಲ್ಲಾ ಮಾದಿಗ ಸಮಾಜದ ನಿಯೋಗದ ಮುಖಂಡರಾದ ಶಾಮ ನಾಟಿಕಾರ, ಲಿಂಗರಾಜ ತಾರಫೈಲ್, ವಿಜಯಕುಮಾರ ಜಿ. ರಾಮಕೃಷ್ಣ, ನಾಗರಾಜ ಗುಂಡಗುರ್ತಿ, ಸಿದ್ದಾರ್ಥ ಕೋರವಾರ, ಮಲ್ಲಿಕಾರ್ಜುನ ಜಿನಕೇರಿ, ಮಲ್ಲಿಕಾರ್ಜುನ ದೊಡ್ಡಮನಿ, ಶ್ರೀಮಂತ ಭಂಡಾರಿ, ಶಿವಪುತ್ರ ನಾಗನಳ್ಳಿ, ಬಂಡೇಶ ತಾರಫೈಲ್, ಶಿವಶಂಕರ ಬಂದರವಾಡ, ಪ್ರಕಾಶ ಮಾಳಗೆ, ಶಿವರಾಜ ತಾರಫೈಲ್, ಪ್ರದೀಪ ಬಾಚನಾಳಕರ, ರೋಹಿತ ಗುಲ್ಲಾಬಾಡಿ ಸೇರಿದಂತೆ ಇನ್ನಿತರರು ಇದ್ದರು.