ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ - ಬಸವರಾಜ ಶಿಣ್ಣೂರ
ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ - ಬಸವರಾಜ ಶಿಣ್ಣೂರ
ಶಹಪುರ : ಮಕ್ಕಳಿಗೆ ಶಾಲೆಗಳಲ್ಲಿ ಶಿಕ್ಷಣ,ಶಿಸ್ತು,ಜವಾಬ್ದಾರಿ ಹೊಣೆಗಾರಿಕೆಯ ಜೊತೆಗೆ ನೈತಿಕ ಮೌಲ್ಯಗಳನ್ನು ಶಿಕ್ಷಕರು ಬಿತ್ತಬೇಕು ಎಂದು ಪತ್ರಕರ್ತ ಬಸವರಾಜ ಶಿಣ್ಣೂರ ಹೇಳಿದರು
ತಾಲೂಕಿನ ಸೈದಾಪುರ ಗ್ರಾಮದ ಹೊಸಬೆಳಕು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ, ಯುನೈಟೆಡ್ ಪಬ್ಲಿಕ್ ಶಾಲೆಯ ಪಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಮಗುವಿನ ಶಿಕ್ಷಣದಲ್ಲಿ ಪೋಷಕರ ಪಾಲ್ಗೊಳ್ಳುವಿಕೆಯ ಮಟ್ಟವು ವಿದ್ಯಾರ್ಥಿಯ ಯಶಸ್ಸಿನ ಅತ್ಯುತ್ತಮ ಮುನ್ಸೂಚಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಗುವಿನ ಕಲಿಕೆಯ ನೈಜತೆ ಅರಿತುಕೊಳ್ಳಬೇಕಾದರೆ ಪಾಲಕರು ಕಡ್ಡಾಯವಾಗಿ ಸಭೆಯಲ್ಲಿ ಹಾಜರಾಗಬೇಕು ಕಾರಣ ತಮ್ಮ ಮಗುವಿನ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಾಮರ್ಥ್ಯ ಹಾಗೂ ದೌರ್ಬಲ್ಯಗಳು ಅವರ ಆಸಕ್ತಿಯ ಕ್ಷೇತ್ರಗಳ ಬಗ್ಗೆ ಪಾಲಕರು ಹೆಚ್ಚು ತಿಳಿದಿರುತ್ತಾರೆ ಎಂದು ಉಪನ್ಯಾಸಕ ಶರಣಗೌಡ ಜೈನಾಪುರ ಹೇಳಿದರು.
ಸಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಅಂಬಲಯ್ಯ ಸೈದಾಪುರ ಮಾತನಾಡಿ ಮಗುವಿನ ವ್ಯಕ್ತಿತ್ವ,ಸ್ವಭಾವ,ಅಭ್ಯಾಸಗಳು, ಭಾವನಾತ್ಮಕ ಬೆಳವಣಿಗೆ ಇತ್ಯಾದಿಗಳನ್ನು ರೂಪಿಸುವಲ್ಲಿ ಪಾಲಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ,ಮಗುವಿನ ಪ್ರತಿಯೊಂದು ಹಂತದ ಬೆಳವಣಿಗೆಯಲ್ಲಿ ಪಾಲಕರು ನಿಗಾ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ನಾಗನಟಗಿ ವೀರಭದ್ರೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯರಾದ ಸಿದ್ದರಾಮೇಶ್ವರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು,ಯುವ ಮುಖಂಡರಾದ ತಿರುಪತಿಗೌಡ ಬಾಣತಿಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾದ ಮಲ್ಲಣ್ಣ ಐಕೂರ, ಭೀ.ಗುಡಿ ಕಸಾಪ ಮಹಿಳಾ ಪ್ರತಿನಿಧಿ ಶಾರದಾ ಹಿರೇಮಠ,ಸಂಸ್ಥೆಯ ಅಧ್ಯಕ್ಷರಾದ ಶರಣಬಸವ ಪೊಲೀಸ್ ಬಿರಾದಾರ, ಕಾರ್ಯದರ್ಶಿ ಶಿವಲಿಂಗಮ್ಮ ಪೊಲೀಸ್ ಬಿರಾದರ,ಕಲಾವಿದ ಮಹಾಂತೇಶ್ ಹುಲ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಮುಖ್ಯ ಗುರುಗಳಾದ ದೇವಮ್ಮ ಶಿರವಾಳ ಸ್ವಾಗತಿಸಿದರು ಜೆಟ್ಟೆಪ್ಪ ಪೂಜಾರಿ ನಿರೂಪಿಸಿದರು,ಸಾಯಿಬಾಬಾ ವಂದಿಸಿದರು.