ಜೀವನದಲ್ಲಿ ಪರಿಶ್ರಮಪಟ್ಟರೆ ಉನ್ನತಿ ಸಾಧ್ಯ : ಪೊಲೀಸ್ ಆಯುಕ್ತ ಶರಣಪ್ಪ ಸಲಹೆ

ಕಲಬುರಗಿಯಲ್ಲಿ ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿಯ ಶಾಲಾ ಕಾಲೇಜುಗಳ ಸ್ನೇಹ ಸಮ್ಮೇಳನವನ್ನು ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಉದ್ಘಾಟಿಸಿದರು.
ಶಾಲಾ ಕಾಲೇಜುಗಳ ಸ್ನೇಹ ಸಮ್ಮೇಳನದಲ್ಲಿ ಪೊಲೀಸ್ ಆಯುಕ್ತ ಶರಣಪ್ಪ ಸಲಹೆ
ಜೀವನದಲ್ಲಿ ಪರಿಶ್ರಮಪಟ್ಟರೆ ಉನ್ನತಿ ಸಾಧ್ಯ : ಪೊಲೀಸ್ ಆಯುಕ್ತ ಶರಣಪ್ಪ ಸಲಹೆ
ಕಲಬುರಗಿ ಜೀವನದಲ್ಲಿ ಅಸಾಧ್ಯವಾದ್ದದು ಯಾವುದು ಇಲ್ಲ, ಕಷ್ಟಪಟ್ಟು ಪರಿಶ್ರಮ ಪಟ್ಟರೆ ಉನ್ನತ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ಅಧ್ಯಯನಶೀಲತೆ ಗುಣ ಮೈಗೂಡಿಸಿಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಸಲಹೆ ನೀಡಿದರು.
ಇಲ್ಲಿನ ಬ್ರಹ್ಮಪುರ ಬಡಾವಣೆಯ ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿಯ ಶಾಲಾ ಕಾಲೇಜುಗಳ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು, ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಸಕರಾತ್ಮಕ ಮನೋಭಾವ ಬೆಳೆಸಿ ಅವರ ಬದುಕಿಗೆ ಬೆಳಕಾಗಬೇಕು ಎಂದು ತಿಳಿಹೇಳಿದರು.
ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಅಪ್ಪಾರಾವ್ ಅಕ್ಕೋಣಿ, ಪ್ರಮಾಣಪತ್ರ ಸಂಪಾದಿಸುವುದರಿAದ ವ್ಯಕ್ತಿತ್ವ ಬರಲ್ಲ, ವ್ಯಕ್ತಿತ್ವದಿಂದ ಪ್ರಮಾಣಪತ್ರಗಳು ಲಭಿಸುತ್ತವೆ. ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಪಾಲಕರು ತಮ್ಮ ಮಕ್ಕಳಿಗೆ ನೈತಿಕ ಪಾಠ ಬೋಧಿಸಬೇಕು ಎಂದರು.
ಅರ್ಥಶಾಸ್ತçಜ್ಞ ಡಾ. ವಾಸುದೇವ ಸೇಡಂ ಮಾತನಾಡಿ, ವಿದ್ಯಾರ್ಥಿಗಳನ್ನು ನಟ, ವಿಜ್ಞಾನಿ, ರಾಜಕಾರಣಿ, ಐಎಎಸ್, ಐಪಿಎಸ್ ಅಧಿಕಾರಿಯನ್ನಾಗಿಸುವ ಸಾಮಾರ್ಥ್ಯ ಶಿಕ್ಷಕರಲ್ಲಿ ಇರುತ್ತದೆ. ಹೆತ್ತವರು, ಗುರು ಹಿರಿಯರನ್ನು ಗೌರವ ತರುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದರು. ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸುಧಾರಣಾ ಸಮಿತಿ ಸದಸ್ಯೆ ಹಾಗೂ ಕೆಪಿಎಸ್‌ಸಿ ಮಾಜಿ ಸದಸ್ಯೆ ಡಾ. ನಾಗಾಬಾಯಿ ಬಿ. ಬುಳ್ಳಾ, ಪತ್ರಕರ್ತ ಭೀಮಾಶಂಕರ ಎಂ. ಫಿರೋಜಾಬಾದ್ ಮಾತನಾಡಿದರು.
ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ಸಾಬಣ್ಣ ವಡಗೇರಿ, ಉಪಾಧ್ಯಕ್ಷ ರಾಮಲಿಂಗ ನಾಟೀಕಾರ್, ಬ್ರಹ್ಮಪುರ ವಲಯದ ಸಿಆರ್‌ಸಿ ಹರ್ಷದ್, ಮುಖ್ಯಗುರು ವಿಜಯಲಕ್ಷ್ಮಿ ಬೆಳಮಗಿ ಮತ್ತಿತರರಿದ್ದರು. ಕಾಲೇಜಿನ ಪ್ರಾಚಾರ್ಯ ಕು. ಸೋನಾಲಿ ಎ ಬೆಟಗೇರಿ ಮತ್ತಿತರರಿದ್ದರು. ಕು. ರೇಣುಕಾ ಎಸ್. ಕೊತಲಿ, ಭಾಗ್ಯಶ್ರೀ ಸಿ. ಪಾಟೀಲ್ ನಿರೂಪಣೆ ಮಾಡಿದರು. ಶಿವಾನಂದ ಕೇರೂರ್ ಪ್ರಾರ್ಥಿಸಿದರು. ಶೃತಿ ಹೂಗಾರ ಸ್ವಾಗತಿಸಿದರು. ಉಪನ್ಯಾಸಕಿ ಆರತಿ ಎಸ್. ವಡಗೇರಿ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳು ನೋಡಗರ ಗಮನ ಸೆಳೆದವು.
ಬದುಕಿಗೆ ಚಿನ್ನಕ್ಕಿಂತ ಅನ್ನಲೇಸು, ಅನ್ನಕ್ಕಿಂತ ಅಕ್ಷರಲೇಸು. ಈ ದಿಸೆಯಲ್ಲಿ ವಿದ್ಯೆ ಸಂಪನ್ನರಾಗಬೇಕು. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ನಮ್ಮ ಸಂಸ್ಥೆಯದ್ದಾಗಿದೆ.
ಡಾ. ಬಿ.ಪಿ. ಬುಳ್ಳಾ, ಗೌರವ ಅಧ್ಯಕ್ಷರು,ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿ