ಐವಾನ್ ಎ ಶಾಹಿ ಬಡಾವಣೆಯ ಸಿಗಣಾಪೂರ ಮಹಾದೇವ ದೇವಸ್ಥಾನದಲ್ಲಿ ಶಿವ ಮಹಾ ಪುರಾಣ ಆರಂಭ

ಐವಾನ್ ಎ ಶಾಹಿ ಬಡಾವಣೆಯ ಸಿಗಣಾಪೂರ ಮಹಾದೇವ ದೇವಸ್ಥಾನದಲ್ಲಿ ಶಿವ ಮಹಾ ಪುರಾಣ ಆರಂಭ

ಐವಾನ್ ಎ ಶಾಹಿ ಬಡಾವಣೆಯ ಸಿಗಣಾಪೂರ ಮಹಾದೇವ ದೇವಸ್ಥಾನದಲ್ಲಿ ಶಿವ ಮಹಾ ಪುರಾಣ ಆರಂಭ

ಕಲಬುರ್ಗಿ: ಕಲಬುರ್ಗಿ ನಗರದ ಐವಾನ್ ಎ ಶಾಹಿ ಬಡಾವಣೆಯ ಶ್ರೀ ಸಿಗಣಾಪೂ ಮಹಾದೇವ ದೇವಸ್ಥಾನದಲ್ಲಿ ಇಂದಿನಿಂದ ದಿನಾಂಕ 22-02-2025 ರಿಂದ 26-02-2025 ವರೆಗೆ 5 ದಿನಗಳವರೆಗೆ ಶಿವ ಪುರಾಣ ಹಮ್ಮಿಕೊಳ್ಳಲಾಗಿದೆ

ದಿನಾಲೂ ಸಾಯಂಕಾಲ 7 ಗಂಟೆಯಿಂದ 8-30 ರಿ ವರೆಗೆ ನಡೆಯಲಿದೆ ಶಿವ ಪುರಾಣವನ್ನು ಶ್ರೀ ವೇದಮೂರ್ತಿ ಮಹಾಲಿಂಗಯ್ಯ ಶಾಸ್ತ್ರಿಗಳು ವೀರೇಶ್ವರ ಪುಣ್ಯಾಶ್ರಮ ಗದಗ ಇವರು ನಡೆಸಿಕೊಡಲಿದ್ದಾರೆ. ಗವಾಯಿಗಳಾದ ಶ್ರೀ ಚನ್ನಬಸವ ಬಹುಮನಿ, ತಬಲಾ ವಾದಕರಾದ ಶಿವಕುಮಾರ್ ಕೊಡ್ಲಿ ಇವರಿಂದ ಸಂಗೀತ ಸೇವೆ ಜರುಗಲಿದೆ, ನಾಂದಿ ಸೇವೆಯನ್ನು ಶಿವಶರಣಪ್ಪ ಪಾಟೀಲ್ ನಡೆಸಿಕೊಡಲಿದ್ದಾರೆ

ಇಂದು ಈ ಪುರಾಣದ ಉದ್ಘಾಟನೆಯನ್ನು ಬಡಾವಣೆಯ ಶ್ರೀ ಸತೀಶ್ ಪಾಟೀಲ್ ಕಮಲಾಪೂರ, ಶ್ರೀ ಶಿವರಾಜ್ ಪಾಟೀಲ್ ಮಹಾಗಾಂವ, ಶ್ರೀ ಈರನಗೌಡ ಪಾಟೀಲ್ ದೇ ಹಿಪ್ಪರಗಿ, ರೀಷಿತ್ ರಾಂಪೂರೆ, ನೆರವೇರಿಸಿದರು ಈ ಸಂದರ್ಭದಲ್ಲಿ ದೇವಸ್ಥಾನದ ಕರಸಂಜಾತರಾದ ಶ್ರೀ ಚನ್ನವೀರಯ್ಯ ಮಠಪತಿ ಉಪಸ್ಥಿತರಿದ್ದರು ಶ್ರೀ ಸಿದ್ದು ಪಾಟೀಲ್ ಕುಮಸಿ ಕಾರ್ಯಕ್ರಮ ನಿರೂಪಿಸಿದರು