19ರಂದು ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಧಕರಿಗೆ ಸನ್ಮಾನ

19ರಂದು ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಧಕರಿಗೆ ಸನ್ಮಾನ

19ರಂದು ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ, ಸನ್ಮಾನ

ಕಲಬುರಗಿ: ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯ ವತಿಯಿಂದ ದಿ. 19 ರಂದು ಬೆಳಗ್ಗೆ 11 ಗಂಟೆಗೆ ನಗರದ ಕನ್ನಡ ಭವನದ ಸುವರ್ಣಾ ಸಭಾಭವನದಲ್ಲಿ ಬಿ.ಎ. ಮತ್ತು ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಅಧ್ಯಕ್ಷ ಸಂದೀಪ ದೇಸಾಯಿ, ಕಾರ್ಯದರ್ಶಿ ಜಗನ್ನಾಥ ನಾಗೂರ ತಿಳಿಸಿದ್ದಾರೆ. 

ಕಲಬುರಗಿ ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ, ಐಪಿಎಸ್ ಅಧಿಕಾರಿ ಕು. ಬಿಂದುಮಣ ಆರ್.ಎನ್, ಉದ್ಘಾಟಿಸುವರು. ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಎಂ.ಎ. ಮಠಪತಿ, ಸಾಮಾಜಿಕ ಚಿಂತಕ ಚಂದ್ರಕಾಂತ ಸಿರಗಾಪುರ ಜ್ಯೋತಿ ಬೆಳಗಿಸುವರು. ಜೆಸ್ಕಾಂ ಎಇಇ ಪ್ರಭು ಮಡ್ಡಿತೋಟ, ಪತ್ರಕರ್ತರಾದ ಭೀಮಾಶಂಕರ ಫಿರೋಜಾಬಾದ್, ದತ್ತಾತ್ರೇಯ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.

 ಇದೇ ಸಂದರ್ಭದಲ್ಲಿ ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯರಾದ ಉದಯ ಪಾಟೀಲ್, ನಿವೃತ್ತ ಶಿಕ್ಷಕ ಸಿದ್ದಣ್ಣ ಚಂದ್ರಶೇಖರ, ಪ್ರಗತಿ ಪರ ರೈತ ಬಸವರಾಜ ಹಚ್ಚಡ, ಮಹಿಳಾ ಸಾಧಕಿ ಮಹಾದೇವಿ ನಂದಿಕೋಲಮಠ, ಕುಮಸಿವಾಡಿಯ ಪ್ರೌಢಶಾಲೆ ಮುಖ್ಯಗುರು ಭೀಮಶಾ ಮೂಲಗೆ, ಶಿಕ್ಷಕ ಸುಧೀರ ಜಗತಿ, ದೃಶ್ಯ ಛಾಯಾಗ್ರಾಹಕ ಶರಣಬಸಪ್ಪ ಬನ್ನೂರ್ ಅವರನ್ನು ಸನ್ಮಾನಿಸಲಾಗುವುದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಕಾಶ ರಾಠೋಡ, ಕಸಾಪ ತಾಲೂಕು ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಪತ್ರಕರ್ತ ಯಲ್ಲಾಲಿಂಗ ಪೂಜಾರಿ, ಸಂಸ್ಥೆಯ ಗೌರವ ಅಧ್ಯಕ್ಷ ಚಂದ್ರಕಾಂತ ದೇಸಾಯಿ ಅಧ್ಯಕ್ಷತೆ ವಹಿಸುವರು.