ಸರ್ಕಾರದಿಂದ ನೀಡುತ್ತಿರುವ ವಿಮೆಯನ್ನು ಹೊರಗುತ್ತಿಗೆ ನೌಕರರರಿಗೂ ಅನ್ವಯ ಮಾಡಲು ಹೊಸ ನಿಯಮ ಮಾಡಬೇಕು : ಶ್ರೀಕಾಂತ ಸ್ವಾಮಿ

ಸರ್ಕಾರದಿಂದ ನೀಡುತ್ತಿರುವ ವಿಮೆಯನ್ನು ಹೊರಗುತ್ತಿಗೆ ನೌಕರರರಿಗೂ ಅನ್ವಯ ಮಾಡಲು ಹೊಸ ನಿಯಮ ಮಾಡಬೇಕು : ಶ್ರೀಕಾಂತ ಸ್ವಾಮಿ

ಸರ್ಕಾರದಿಂದ ನೀಡುತ್ತಿರುವ ವಿಮೆಯನ್ನು ಹೊರಗುತ್ತಿಗೆ ನೌಕರರರಿಗೂ ಅನ್ವಯ ಮಾಡಲು ಹೊಸ ನಿಯಮ ಮಾಡಬೇಕು : ಶ್ರೀಕಾಂತ ಸ್ವಾಮಿ

ಕಲಬುರಗಿ: ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಹಾಗೂ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್‌ನ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ಆರೋಗ್ಯ ಸೌಧದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಗುಂಪು ವಿಮೆ ಯೋಜನೆಯ (ಲಗತ್ತಿಸಿದೆ) ಜಾರಿ ಮಾಡಲು ಎನ್.ಎಚ್.ಎಂ ಕರ್ನಾಟಕ ಹಾಗೂ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ನಡುವೆ ಒಡಂಬಡಿಕೆಗೆ ಸಹಿ ಮಾಡುವ ಕಾರ್ಯಕ್ರಮವನ್ನು ಕೆ.ಎಸ್.ಎಚ್.ಸಿ.ಓ.ಈ.ಎ (ಬಿ.ಎಂ.ಎಸ್) ಸಂಘದ ರಾಜ್ಯಾಧ್ಯಕ್ಷ ಶ್ರೀಕಾಂತ ಸ್ವಾಮಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಬಿಹಾರದಲ್ಲಿ ಅಲ್ಲಿನ ಆರೋಗ್ಯ ಸಚಿವರು ಪಬ್ಲಿಕ್ ಹೆಲ್ತ್ ಮ್ಯಾನೇಜಮೆಂಟ್ ಕ್ಯಾಡರ್ ಪದ್ದತಿಯನ್ನು ಅಳವಡಿಸಿ ಎನ್.ಎಚ್.ಎಂ ಸಿಬ್ಬಂದಿಗಳಿಗೆ ಖಾಯಮಾತಿ ಮಾಡಲು ಹೇಗೆ ಘೋಷಣೆ ಮಾಡಿರುವರೊ ಅದೇ ರೀತಿ ಆರೋಗ್ಯ ಸೇವೆಯನ್ನು ವಿಶೇಷವೆಂದು ಪರಿಗಣಿಸಿ ನಮ್ಮ ನೌಕರರಿಗೂ ಎಲ್ಲರಿಗೂ ಖಾಯಮಾತಿ ಮಾಡಲು ಕ್ರಮ ವಹಿಸಬೇಕು , ಸರ್ಕಾರದಿಂದ ನೀಡುತ್ತಿರುವ ವಿಮೆಯನ್ನು ಹೊರಗುತ್ತಿಗೆ ನೌಕರರರಿಗೂ ಅನ್ವಯ ಮಾಡಲು ಹೊಸ ನಿಯಮ ಮಾಡಬೇಕು, ನೇಮಕಾತಿಗಳಲಿ ಕೃಪಾಂಕವನ್ನು ಮತ್ತು ವಯೋಮಿತಿ ಸಡಿಲಿಕೆಯನ್ನು ಕೈಬಿಡಬಾರದು ಎಂದು ವೇದಿಕೆಯಲ್ಲಿ ಇರುವ ಆರೋಗ್ಯ ಸಚಿವರಿಗೆ ಮನವಿ ಮಾಡಿದರು.

ಈ ಕಾರ್ಯಕ್ರಮವನ್ನು ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಇವರು ಉದ್ಘಾಟಿಸಿದರು ಹಾಗೂ ಸಚಿವರ ಸಮ್ಮುಖದಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ಡಾ.ನವೀನ್ ಭಟ್ ವೈ (ಭಾ.ಆ.ಸೆ)ರವರು ಹಾಗೂ ಆಕ್ಸಿಸ್ ಬ್ಯಾಂಕ್ ಮುಖ್ಯಸ್ಥರು ಗುಂಪು ವಿಮೆಯ ಒಡಂಬಡಿಕೆಯನ್ನು ಸಹಿ ಮಾಡಿ ಹಸ್ತಾಂತರ ಮಾಡಿಕೊಳ್ಳಲಾಯಿತು. ಗುಂಪು ವಿಮೆ ಜಾರಿ ಮಾಡಿರುವದಕ್ಕೆ ಕೆ.ಎಸ್.ಎಚ್.ಸಿ.ಓ.ಈ.ಎ ಸಂಘದಿAದ ಮಾನ್ಯ ಆರೋಗ್ಯ ಸಚಿವರಿಗೆ ಸನ್ಮಾನಿಸಲಾಯಿತು. ಇದೇ ಸಮಯದಲ್ಲಿ ಸಂಘದ ಬೇಡಿಕೆಗಳ ಪಟ್ಟಿಯನ್ನು ª ಸಚಿವರಿಗೆ ಸಂಘದ ವತಿಯಿಂದ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಶಿವಕುಮಾರ, ಎನ್.ಎಚ್.ಎಂ ಆರ್ಥಿಕ ಮುಖ್ಯ ಅಧಿಕಾರಿ ನಿಷ್ಮಾ ಡಿ.ಕೋಸ್ಟ್, ಎನ್.ಎಚ್ ಎಂ ಮುಖ್ಯ ಆಡಳಿತ ಅಧಿಕಾರಿ ಜಿ.ಹೆಚ್.ನಾಗ ಹನುಮಯ್ಯ, ಕೆ.ಎಸ್.ಎಚ್.ಸಿ.ಓ.ಈ.ಎ ಸಂಘದ ಗೌರವ ಅಧ್ಯಕ್ಷ ಆಯನೂರು ಮಂಜುನಾಥ್, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯ ಕೆ ಎಸ್ ಶಿವರಾಮ್, ಹಾಗೂ ಕಾರ್ಯಾಧ್ಯಕ್ಷರುಗಳಾದ ಗಿರೀಶ್ ಕಡ್ಡಿಪುಡಿ, ವೆಂಕಟೇಶ, ಖಜಾಂಚಿ ರುದ್ರೇಶ್, ಸಂಘಟನಾ ಕಾರ್ಯದರ್ಶಿ ಡಾ.ರವಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ ವರ್ಗದವರು, ಆಕ್ಸಿಸ್ ಬ್ಯಾಂಕ್ ಸಿಬ್ಬಂದಿಗಳು, ಸಿಬ್ಬಂದಿಗಳು ಸಂಘದ ಇತರೇ ಪ್ರಮುಖರು ಉಪಸ್ಥಿತರಿದ್ದರು. ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಉಪ್ಪಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.