ಕಣ್ಣಿದ್ದು ಕುರುಡಾದ ಸರ್ಕಾರಕೆ ಚಾಟಿ ಬೀಸಿದ ಬಾಪುಗೌಡ ಕೊಡಮನಹಳ್ಳಿ.

ಕಣ್ಣಿದ್ದು ಕುರುಡಾದ ಸರ್ಕಾರಕೆ ಚಾಟಿ ಬೀಸಿದ ಬಾಪುಗೌಡ ಕೊಡಮನಹಳ್ಳಿ.

ಕಣ್ಣಿದ್ದು ಕುರುಡಾದ ಸರ್ಕಾರಕೆ ಚಾಟಿ ಬೀಸಿದ ಬಾಪುಗೌಡ ಕೊಡಮನಹಳ್ಳಿ.

 ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿ ಸಾಲಬಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಇತ್ತ ಕಡೆ ಜನಪ್ರತಿನಿಧಿಗಳು ಕುರ್ಚಿಗಾಗಿ ಕಿತ್ತಾಡುತ್ತಿರುವುದು ಹಾಸ್ಯಸ್ಪದ ಸಂಗತಿಯಾಗಿದೆ. ಈ ಸರ್ಕಾರಕ್ಕೆ ಕಣ್ಣು ಇಲ್ಲ ಕಿವಿಯು ಇಲ್ಲ. ರೈತರ ಬಗ್ಗೆ ಕಾಳಜಿಯಂತು ಮೊದಲೇ ಇಲ್ಲ ಚಿಂಚೋಳಿ ತಾಲೂಕಿನ ಪೊತಂಗಲ ಗ್ರಾಮದ ರೈತ ಪಾಂಡಪ್ಪ ತಂದೆ ತಿಪ್ಪಣ್ಣ ಎನ್ನುವ ರೈತ ಸಾಲ ತೀರಿಸಲಾಗದೆ ಬ್ಯಾಂಕ್ ನೋಟಿಸ್ಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥಹ ಹಲವಾರು ಪ್ರಕರಣಗಳು ಮಾಧ್ಯಮದಲ್ಲಿ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದರು ರೈತರ ಪರವಾಗಿ ಸೂಕ್ತ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ರೈತ ಮುಖಂಡರಾದ ಬಾಪು ಗೌಡ ಕೊಡಮನಹಳ್ಳಿ ಬಿಳವಾರ ಅವರು ಸರ್ಕಾರಕ್ಕೆ ಚಾಟಿಬಿಸಿದ್ದಾರೆ ಕುರ್ಚಿಗಾಗಿ ಕಿತ್ತಾಡುವುದನ್ನು ಬಿಡಿ. ರೈತರಿಗೋಸ್ಕರ ಕಿತ್ತಾಡಿ ರೈತರ ಸಾಲ ಮನ್ನಾ ಮಾಡುವುದಕ್ಕೋಸ್ಕರ ಕಿತ್ತಾಡಿ 

ನೋಡೋಣವೆಂದು ಬಾಪು ಗೌಡ ಕೊಡಮನಹಳ್ಳಿಯ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಈಗಾಗಲೇ ರಾಜ್ಯದಲ್ಲಿ ಅನಾವೃಷ್ಟಿಯಿಂದ ಹಾಗೂ ಅತಿವೃಷ್ಟಿಯಿಂದ ರಾಜ್ಯದಲ್ಲಿ ಬೆಳೆ ಹಾನಿಯಾಗಿದೆ ಕೂಡಲೇ ಪ್ರತಿ ಎಕರೆಗೆ ಐವತ್ತು ಸಾವಿರ ರೂಪಾಯಿ ಪರಿಹಾರ ದನ ನೀಡಬೇಕು..ಈಗಾಗಲೇ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿ ನೀರು ನಿಂತು ಶೇಕಡ 80ರಷ್ಟು ಬೆಳೆನಾಶವಾಗಿರುತ್ತದೆ ಆದ್ದರಿಂದ ಸರಕಾರವು ಬೆಳೆ ಹಾನಿ ಸಮೀಕ್ಷೆಯನ್ನು ಮಾಡಿ ಪ್ರತಿ ಎಕರೆಗೆ 50,000 ರೂಪಾಯಿ ಪರಿಹಾರ ಧನ ಘೋಷಣೆ ಮಾಡಬೇಕೆಂದು ರೈತ ಮುಖಂಡರಾಧ ಬಾಪು ಗೌಡ ಕೊಡಮನಹಳ್ಳಿ ಬಿಳವಾರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ 

 ವರದಿ ಜಟ್ಟಪ್ಪ ಎಸ್ ಪೂಜಾರಿ