ರೈತ ಮುಖಂಡರ ಮನವಿಗೆ ಸ್ಪಂದಿಸಿ, ಭೇಟಿಗೆ ಸಮಯ ನಿಗದಿಪಡಿಸಿದ ಸಚಿವ ಈಶ್ವರ ಖಂಡ್ರೆ

ರೈತ ಮುಖಂಡರ ಮನವಿಗೆ ಸ್ಪಂದಿಸಿ, ಭೇಟಿಗೆ ಸಮಯ ನಿಗದಿಪಡಿಸಿದ  ಸಚಿವ ಈಶ್ವರ ಖಂಡ್ರೆ

ರೈತ ಮುಖಂಡರ ಮನವಿಗೆ ಸ್ಪಂದಿಸಿ, ಭೇಟಿಗೆ ಸಮಯ ನಿಗದಿಪಡಿಸಿದ ಸಚಿವ ಈಶ್ವರ ಖಂಡ್ರೆ 

ಭೇಟಿಗೆ ನಿರಾಕರಿಸಿ, ಬಸವನಗೌಡ ಪಾಟೀಲ್ ಯತ್ನಾಳ ತಾಳಕ್ಕೆ ತಕ್ಕಂತೆ ಕುಣಿದು, ಸಿದ್ಧಸಿರಿ ಪ್ರಾಯೋಜಕರಂತೆ ವರ್ತಿಸುತ್ತಿರುವ ಹೋರಾಟದ ರೈತ ಮುಖಂಡರು 

ಚಿಂಚೋಳಿ : ಕಾನೂನು ತೊಡಕುನಿಂದ ಬಂದ್ ಆಗಿರುವ ಸಿದ್ಧಸಿರಿ ಎಥಿನಾಲ್ ಕಾರ್ಖಾನೆ ಮರು ಪ್ರಾರಂಭಕ್ಕೆ ನಡೆಸುತ್ತಿರುವ ರೈತರ ಹೋರಾಟದ ಮುಖಂಡರು ಬಸವನಗೌಡ ಪಾಟೀಲ ಯತ್ನಾಳ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಚಿಂಚೋಳಿ ಕಾಂಗ್ರೆಸ್ ಪಕ್ಷದ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಆರೋಪಿಸಿದ್ದಾರೆ. 

ಹೀಗೆಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು,ಈ ಹೋರಾಟಗಾರರಿಗೆ ಸರ್ವೋಚ್ಚ ನ್ಯಾಯಾಲಯದ ಮೇಲೆ ವಿಶ್ವಾಸ ಇಲ್ಲ. ಜಿಲ್ಲಾಡಳಿತ ಮೇಲೆ ವಿಶ್ವಾಸ ಇಲ್ಲ. ರೈತರ ಕಟ್ಟಾವು ಮಾಡಿ ಕಬ್ಬು ಸಾಗಾಟ ಆಗುವುದು ಬೇಕಾಗಿಲ್ಲ.

ಹೋರಾಟ ಪ್ರಾರಂಭವಾದಾಗಿನಿಂದ ಹಲವು ಬಾರಿ ಸಚಿವ ಈಶ್ವರ್ ಖಂಡ್ರೆ ಅವರ ಭೇಟಿಗೆ ವೇದಿಕೆ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿ ಚಿಂಚೋಳಿ ಕಾಂಗ್ರೆಸ್ ನ ಶರಣು ಪಾಟೀಲ್ ಮೋತಕಪಳ್ಳಿ, ಅಬ್ದುಲ್ ಬಾಸಿದ್, ಲಕ್ಷ್ಮಣ ಅವುಂಟಿ, ನಾಗೇಶ್ ಗುಣಾಜಿ, ಶಬ್ಬೀರ್, ಸಂತೋಷ ಗುತ್ತೇದಾರ, ಜಗನ್ನಾಥ ಗುತ್ತೇದಾರ ಸೇರಿದಂತೆ ಹಲವು ಮುಖಂಡರು ಈಶ್ವರ ಖಂಡ್ರೆ ಅವರೊಂದಿಗೆ ಭೇಟಿಯಾಗಲು ಶುಕ್ರವಾರ ಸಾಯಂಕಾಲ 5 ಗಂಟೆಗೆ ಸಮಯನಿಗದಿಪಡಿಸಲಾಗಿತ್ತು. ಆದರೆ ರೈತ ಮುಖಂಡರು ಈಶ್ವರ ಖಂಡ್ರೆ ಅವರೊಂದಿಗೆ ಭೇಟಿಯಾಗಲು ನಿರಾಕರಿಸಿದ್ದಾರೆ. ಆದರೆ ರೈತ ಮುಖಂಡರು ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಭೇಟಿಯಾಗಲು ನಿರಾಕರಿಸಿದ್ದರು. ಯಾರೊಂದಿಗೂ ಮಾತನಾಡಬೇಕಾದರೆ ಸಿದ್ದಸಿರಿ ಕಾರ್ಖಾನೆಯ ಆಡಳಿತ ಮಂಡಳಿಯ ಅನುಮತಿ ಕಡ್ಡಾಯವಾಗಿಬೇಕು. ತಾಂತ್ರಿಕ ಸಮಸ್ಯೆ ಅನ್ನೋ ವಿಷಯ ಗೊತ್ತಿದ್ದೂ ಇವರು ಹೋರಾಟ ಮಾಡುತ್ತಿದ್ದಾರೆ ಅಂದರೆ ಇವರು ಸಿದ್ದಸಿರಿ ಕಾರ್ಖಾನೆಯ ಪ್ರಾಯೋಜಿತ ಹೋರಾಟಗಾರರಲ್ಲದೆ ಮತ್ತೇನು? ಸಚಿವರ ರೈತರ ಸಮಸ್ಯೆ ಬಗೆಹರಿಸಲು ಭೇಟಿಗೆ ವೇದಿಕೆ ಕಲ್ಪಿಸಿದಾಗ ನಿರಾಕರಿಸಿರುವುದು ಗಮನಿಸಿದರೆ, ಹೋರಾಟಗಾರರಲ್ಲೇ ಗೊಂದಲ ಇರುವುದು ಸ್ಪಷ್ಟವಾಗಿ ಗೊಚರಿಸುತ್ತಿದೆ. ಈ ಕಾರ್ಖಾನೆ ಪ್ರಾಯೋಜಿತ ಹೋರಾಟದ ಮುಖಂಡರುಗಳ ಮಧ್ಯದಲ್ಲಿಯೇ ಯಾವ ವಿಷಯದ ಬಗ್ಗೆ ಹೊರಟ ಮಾಡಬೇಕು ಹಾಗೂ ಯಾವ ದಾರಿಯಲ್ಲಿ ಪರಿಹಾರ ಕಾಣಬೇಕು ಅನ್ನುವಲ್ಲಿ ಭಿನ್ನಾಭಿಪ್ರಾಯವಿದೆ. ಇವರಿಗೆ ರೈತರು ಬೆಳೆದ ಕಬ್ಬು ಸಾಗಿಸುವ ಹೀತಕ್ಕಿಂತ ಕಾನೂನು ತೊಡಕಿನಿಂದ ಬಂದ್ ಆಗಿರುವ ಸಿದ್ದಸಿರಿ ಕಾರ್ಖಾನೆ ಪ್ರಾರಂಭವೇ ಬಹಳ ಮುಖ್ಯವಾಗಿದೆ.

ಇಷ್ಟು ದಿನಗಳು ಕಳೆದರು ಒಂದು ದಿನವು ಹೋರಾಟದ ವೇದಿಕೆ ಕಡೆ ಬರದ ಬಸವನಗೌಡ ಪಾಟೀಲ ಯತ್ನಾಳ್ ತಾಲೂಕಿನ ರೈತರನ್ನು ದಾರಿ ತಪ್ಪಿಸುವ ಈ ಪ್ರಾಯೋಜಿತ ಹೋರಾಟಗಾರರನ್ನು ತಯ್ಯಾರು ಮಾಡಿ ಹೋರಾಟಕ್ಕೆ ಹಚ್ಚಿ ಮಜಾ ನೋಡುತ್ತಿದ್ದಾರೆ.

ತಾಲೂಕಿನ ರೈತರು ಈ ಪ್ರಯೋಜಿತ ಹೋರಾಟಗಾರರ ಮಾತಿಗೆ ಮನ್ನಣೆ ಕೊಡದೆ ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನ ಪ್ರತಿ ಹಳ್ಳಿಯ ರೈತರ ಕಬ್ಬು ಜಿಲ್ಲಾಧಿಕಾರಿಗಳ ಆದೇಶದಲ್ಲಿರುವಂತೆ ಸಂಬಂಧಿಸಿದ ಕಾರ್ಖಾನೆಯವರು ಕಬ್ಬು ಖರೀದಿ ಮಾಡುವರು ತಾಲೂಕಿನ ರೈತರು ಯಾವುದೇ ಕಾರಣಕ್ಕೂ ಹೆದರಬೇಕಾಗಿಲ್ಲ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ.