ಅಭಿವೃದ್ಧಿಯ ಮತ್ತು ಸುಂದರ ಕಲಬುರಗಿ ನನ್ನ ಕನಸು: ಡಿಸಿ ಫೌಜಿಯ ತರನ್ನುಮ್

*ಕಲಬುರಗಿ ವಿಷನ್ 2035 ವಿಶೇಷ ಸಂವಾದ*
ಅಭಿವೃದ್ಧಿಯ ಮತ್ತು ಸುಂದರ ಕಲಬುರಗಿ ನನ್ನ ಕನಸು: ಡಿಸಿ ಫೌಜಿಯ ತರನ್ನುಮ್
ಕಲಬುರಗಿ: ರಾಜ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ಹಂತನ ದ ನಗರಗಳಲ್ಲಿ ಕಲಬುರಗಿಯು ಒಂದಾಗಿದ್ದು 2035 ರಲ್ಲಿ ಅಭಿವೃದ್ಧಿಯ ಮತ್ತು ಸುಂದರ ಕಲಬುರಗಿ ನನ್ನ ಕನಸು ಎಂದು ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ಹೇಳಿದರು.
ಆರ್ಕ್ ವಿಸ್ತಾರ 2025 ರ ಅಂಗವಾಗಿ ವಾಸ್ತುಶಿಲ್ಪಿ ತಂತ್ರಜ್ಞಾನ ವಿನ್ಯಾಸಕಾರರ ಸಮ್ಮೇಳನದಲ್ಲಿ ಮೇ 4 ರಂದು ಏರ್ಪಡಿಸಿದ ಕಲಬುರಗಿ ಮಿಷನ್ - 2035 ವಿಶೇಷ ಸಂವಾದದಲ್ಲಿ ಭಾಗವಹಿಸಿ ಮಾತನಾಡಿ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು ಪ್ರಗತಿಯ ಹಂತದಲ್ಲಿದ್ದು ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಮಾಡಲು ಕೆಲ ಮಾನದಂಡಗಳನ್ನು ಪೂರೈಸಲು ಅದಕ್ಕಾಗಿ ಕಳೆದ ಸಚಿವ ಸಂಪುಟದಲ್ಲಿ ಅನುದಾನದ ನೆರವು ನೀಡಿದ್ದು ಶೀಘ್ರದಲ್ಲಿ ಸ್ಮಾರ್ಟ್ ಸಿಟಿ ಘೋಷಣೆಗೆ ಬೇಕಾದ ಎಲ್ಲ ಮಾನದಂಡಗಳನ್ನು ಪೂರೈಸಲು ಸಾರ್ವಜನಿಕರ ಸಹಭಾಗಿತ್ವ ಹಾಗೂ ನೆರವನ್ನು ನಿರೀಕ್ಷಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಸ್ಮಾರ್ಟ್ ಸಿಟಿಯಾಗಿ ಪರಿಗಣಿಸಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಪಾಲಿಕೆ ಕಮಿಷನರ್ ಹಾಗೂ ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆಗಳು ಮತ್ತು ಬೇಡಿಕೆಗಳ ಬಗ್ಗೆ ಪೂರ್ಣ ತಿಳುವಳಿಕೆ ಇದ್ದು ವಾಸ್ತುಶಿಲ್ಪಿ ತಂತ್ರಜ್ಞಾನ ವಿನ್ಯಾಸಕಾರರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಏರ್ಪಡಿಸಿದ ಸಂವಾದವು ಸಂದರ್ಭೋಚಿವಾಗಿದ್ದು ಕಲಬುರಗಿ ಪ್ರಾದೇಶಿಕ ಕೇಂದ್ರವಾಗಿದ್ದು ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಸುಗಮ ಸಂಚಾರ ಹಿರಿಯ ನಾಗರಿಕರಿಗೆ ಮತ್ತು ಸೈಕಲ್ ಸವಾರರಿಗೆ ಪ್ರತ್ಯೇಕ ಪಥ, ಎಲ್ಲ ಕಂದಾಯ ಇಲಾಖೆಯ ಜಿಲ್ಲಾ ಮಟ್ಟದ ಕಚೇರಿಗಳನ್ನು ಒಂದೇ ಸೂರಿನಡಿ ತರುವಂತಹ ಪ್ರಯತ್ನ, ಸೋಲಾರ್ ವಿದ್ಯುತ್ ವ್ಯವಸ್ಥೆ,
ಕೈಗಾರಿಕೆ,ಪ್ರವಾಸೋದ್ಯಮ, ಕೃಷಿಗೆ ಹೆಚ್ಚಿನ ಯೋಜನೆಗಳನ್ನು ರೂಪಿಸಲಾಗುತ್ತಿದೆ ನಗರದ ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಲು ಫ್ಲೈ ಓವರ್ ನಿರ್ಮಾಣ, ಹೊರವಲಯ ರಿಂಗ್ ರೋಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ನಗರದ ಜಿಲ್ಲಾ ಪಂಚಾಯತ್ ಕಚೇರಿ ಈ ಹಿಂದೆ ಸಮ್ಮರ್ ಪ್ಯಾಲೇಸ್ (ಬೇಸಿಗೆ ಅರಮನೆ) ಈ ಪಾರಂಪರಿಕ ಕಟ್ಟಡವನ್ನು ರಕ್ಷಿಸಲು ಎಸ್ಎಂ ಪಂಡಿತ್ ಅವರ ಕಲಾ ಕೃತಿಗಳನ್ನು ಅಲ್ಲಿಡಲು ಮುಂದಿನ ದಿನಗಳಲ್ಲಿ ಚಿಂತನೆ ಮಾಡ ಲಾಗುವುದು ಎಂದು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸ್ತಾ ಹೇಳಿದರು. ಸಿಐಎಫ್ಎಲ್ ಆರಂಭಿಸಲು ಗಮನವಹಿಸಲಾಗುವುದು ಎಂದು ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿ ಹೇಳಿದರು. ಭ್ರಷ್ಟಾಚಾರ ಮುಕ್ತ ಜಿಲ್ಲೆಯನ್ನಾ ಗಿಸಲು ಸಾರ್ವಜನಿಕರು ಮುಂದಾಗಬೇಕು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಲು ಮುಂದಾಗಬೇಕು ಎಂದು ಹೇಳಿದರು.
*ಕಲಬುರಗಿ ಮಾದರಿ ನಗರವಾಗಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಕೃಷ್ಣ ಭಾಜಪೇಯಿ*
ಕಲಬುರಗಿ ವಿಷನ್ 2035 ಸಂವಾದದಲ್ಲಿ ಪಾಲ್ಗೊಂಡ ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೇಯಿ ಮಾತನಾಡಿ ನಗರವು ಮುಂದಿನ 10 ವರ್ಷಗಳಲ್ಲಿ ಸರ್ವಾಂಗಣ ಅಭಿವೃದ್ಧಿ ಹೊಂದಲು ಆಡಳಿತದ ಜೊತೆ ಸಾರ್ವಜನಿಕರ ಪೂರ್ಣ ಪ್ರಮಾಣದ ಸಹಭಾಗಿತ್ವ ಅಗತ್ಯ ಮತ್ತು ಬೇಡಿಕೆಗಳನ್ನು ಈಡೇರಿಸಲು ಸಂಪನ್ಮೂಲದ ಹೊಂದಾಣಿಕೆಯನ್ನು ಮಾಡಲು ನೆರವಾಗಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ವಿವಿಧ ಹಂತಗಳಲ್ಲಿ ಬೆಳೆಯಲು ನಮ್ಮ ರಾಜ್ಯದ ಅತ್ಯಂತ ಪ್ರಶಸ್ತ ನಗರವಾಗಿದ್ದು ಆರೋಗ್ಯ ರಂಗದಲ್ಲಿ ಹೆಚ್ಚಿನ ಸಾಧನೆಯನ್ನು ಈಗಾಗಲೇ ಮಾಡಿದ್ದು ಇಲ್ಲಿ ಐಟಿಬಿಟಿ, ಕೈಗಾರಿಕೆ, ಕೃಷಿ ಆಧಾರಿತ ಕೈಗಾರಿಕೆ ಸ್ವಚ್ಛ ನಗರ ಪರಿಕಲ್ಪನೆ ಸೇರಿದಂತೆ ಹಲವು ರಂಗಗಳ ಕ್ಷಿಪ್ರ ಅಭಿವೃದ್ಧಿ ಕಾರ್ಯಗಳಿಗೆ ಹೊಣೆಗಾರಿಕೆಯ ಪ್ರಯತ್ನ ಆಗಬೇಕಾಗಿದೆ. ಇತರ ರಾಜ್ಯಗಳಲ್ಲಿರುವ ಸ್ಮಾರ್ಟ್ ಸಿಟಿಗಳಂತೆ ಕಲಬುರ್ಗಿಯು ಬೆಳೆಯ ಬೇಕಾದರೆ ಸಾರ್ವಜನಿಕರು ಇನ್ನಷ್ಟು ತಮ್ಮ ಕೊಡುಗೆಗಳನ್ನು ನೀಡುವ ಅಗತ್ಯವಿದ್ದು ಸಂಘಟನೆ ಪ್ರಯತ್ನ ಬಹಳ ಮುಖ್ಯ. ಕಲಬುರ್ಗಿ ನಗರ ರಾಜ್ಯಕ್ಕೆ ಮಾದರಿಯಾಗುವ ನಗರವಾಗಿ ಬೆಳೆದು ನಿಲ್ಲಬೇಕು ಎಂಬುದು ನನ್ನ ದೊಡ್ಡ ಕನಸು ಎಂದು ಬಾಜಪೇಯಿ ಹೇಳಿದರು.
ಸಂವಾದವನ್ನು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ನಿರ್ವಹಣೆ ಮಾಡಿ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಸಮನ್ವಯಗೊಳಿಸಿದರು.
ಆರ್ಕ್ ವಿಸ್ತಾರದ ಆಯುಧಕರು ಹಾಗೂ ವಾಸ್ತುಶಿಲ್ಪಿ ವಿನ್ಯಾಸಕಾರರಾದ ವೈಭವ ನವಣಿ, ಭರತ್ ಭೂಷಣ್, ನಳಿನಿ ಮಹಾಗಾವಂಕರ್, ಮನೋಹರ್ ಚಿಂಚೋಳಿ ದೇವ ವೃತ, ಹಾಗೂ ವಿವೇಕಾನಂದ ಪ್ರೌಢಶಾಲಾ ವಿದ್ಯಾರ್ಥಿಗಳು ಡಿಸಿ ಮತ್ತು ಆರ್ಸಿ ಅವರಿಗೆ ಪ್ರಶ್ನೆಗಳನ್ನು ಕೇಳಿ ಭವಿಷ್ಯದ ಕಲಬುರಗಿಯ ಯೋಜನೆಗಳ ಬಗ್ಗೆ ಮತ್ತು ತಮ್ಮ ಕನಸುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ನಂತರ ವಾಸ್ತು ಶಿಲ್ಪ ವಿನ್ಯಾಸಕಾರ ಬಸವರಾಜ್ ಜೆ ಖಂಡೆ ರಾವ್ ಧನ್ಯವಾದವಿತ್ತರು. ಹಾಗೂ ಸಮಿತಿ ಪದಾಧಿಕಾರಿಗಳು
ಸನ್ಮಾನ ನೆರವೇರಿಸಿದರು. ಶಶಿಕಲಾ ಜಡೆ ಮತ್ತು ಮಾಧುರಿ ದೇವಣಿ ನಿರೂಪಣೆ ಮಾಡಿದರು.