ಸಾಹಿತ್ಯ-ಸರಸ್ವತಿ: ಡಾ.ಚೆನ್ನವೀರ ಶಿವಾಚಾರ್ಯರು

ಸಾಹಿತ್ಯ-ಸರಸ್ವತಿ: ಡಾ.ಚೆನ್ನವೀರ ಶಿವಾಚಾರ್ಯರು

ಸಾಹಿತ್ಯ-ಸರಸ್ವತಿ: ಡಾ.ಚೆನ್ನವೀರ ಶಿವಾಚಾರ್ಯರು

               ಕಲ್ಯಾಣ ಕರ್ನಾಟಕದ ಮಠಗಳಲ್ಲಿ ಸಾಮರಸ್ಯ ಸೌಹಾರ್ದತೆ, ಸಮನ್ವಯತೆಯ ಕೇಂದ್ರವೆಂದು ಪ್ರಸಿದ್ಧವಾಗಿರುವುದು ಹಾರಕೂಡದ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನವಾಗಿದೆ. ಈ ಮಠಕ್ಕೆ ಪೂಜ್ಯ ಸಂಗನ ಬಸವರಿಂದ ಪ್ರಾರಂಭವಾಗಿ ಶ್ರೀ ಚನ್ನವೀರ ಶಿವಾಚಾರ್ಯರವರೆಗೆ ಏಳು ಪೀಠಾಧಿಪತಿಗಳು ಆಗಿ ಹೋಗಿದ್ದಾರೆ. ಈಗ ಎಂಟನೇ ಪೀಠಾಧಿಪತಿಗಳಾಗಿ ಬಂದವರೇ ಪೂಜ್ಯ ಶ್ರೀ ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡದ ವೇದಮೂರ್ತಿ ಶ್ರೀ ಕರಬಸಯ್ಯ ಹಿರೇಮಠ ಮತ್ತು ಸುಭದ್ರ ತಾಯಿಯವರ ಮಗನಾಗಿ ೦೧-೦೭-೧೯೬೩ ರಲ್ಲಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ರೇವಣಸಿದ್ದಯ್ಯ. ಶ್ರೀಗಳು ತಮ್ಮ ಶಿಕ್ಷಣಾ ಅಭ್ಯಾಸವನ್ನು ಹಾರಕೂಡದಲ್ಲಿ ಪ್ರಾರಂಭಿಸಿದರು. ಕಲಬುರ್ಗಿಯ ಶರಣಬಸವೇಶ್ವರ ಪ್ರೌಢಶಾಲೆ, ಬೆಳಗಾವಿಯ ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ೨೯೮೪ ರಲ್ಲಿ ಬಿ.ಎ‌ ಪದವಿಯನ್ನು ಪೂರೈಸಿದರು. ಧಾರವಾಡ ವಿಶ್ವವಿದ್ಯಾಲಯದಿಂದ ೧೯೮೬ ಎಂ.ಎ.ಪದವಿ ಪಡೆದರು. ಹುಬ್ಬಳ್ಳಿಯ ಮೂರು ಸಾವಿರಮಠದ ಡಾ.ಗಂಗಾಧರ ರಾಜ ಯೋಗೇಂದ್ರ ಜಗದ್ಗುರುಗಳು ಪ್ರಭಾವದಿಂದ ಸಾಹಿತ್ಯ ಆಸಕ್ತಿ. ಶಿವಯೋಗ ಮಂದಿರದಲ್ಲಿ ಸ್ವಾಮಿ ತರಬೇತಿ ಹೊಂದಿ ಕನ್ನಡ ಮತ್ತು ಸಂಸ್ಕೃತ ಭಾಷೆ- ಸಾಹಿತ್ಯ ಪ್ರೌಢಿಮೆ ಹೊಂದಿದರು.

      ಶ್ರೀ ರೇವಣಸಿದ್ಧರು ಚನ್ನವೀರರರಾಗಿ ಹಾರಕೂಡ ಹಿರೇಮಠ‌ ಸಂಸ್ಥಾನದ ಪಟ್ಟಾಧಿಕಾರವನ್ನು ೨೫-೦೪-೧೯ ೯೬ ರಲ್ಲಿ ಹೊಂದಿದರು.ಅಲ್ಲಿಂದ ಸಣ್ಣ ಮಠದ ಜವಾಬ್ದಾರಿ ಹೊತ್ತು ಮಠದ ಪರಂಪರೆಯನ್ನು ಮುಂದುವರಿಸುವ‌ ಸಾಮಥ್ರ್ಯ ಹೊಂದಿದರು.ಅಪಾರ ಭಕ್ತ ಆರಾಧ್ಯ ಗುರುಳಾದರು. ಮಠದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಲಿ.ಚನ್ನಬಸವ ಶಿವಯೋಗಿಗಳು, ಲಿಂ.ಗುರುಲಿಂಗ ಶಿವಾ ಚಾರ್ಯರನ್ನು, ಪಂಚಪೀಠ, ಆಚಾರ್ಯ ಪರಂಪರೆ, ಶರಣ ಪರಂಪರೆಯೊಂದಿಗೆ ಸರ್ವಧರ್ಮ, ಸರ್ವಜಾತಿ, ಸಕಲ ಮತಗಳನ್ನು ಒಳಗೊಂಡು ಸಕಲ ಜೀವಾತ್ಮರಿಗೆ ಲೇಸ ಬಯಸುವ ಕಾರ್ಯಕೈಗೊಂಡು ಸರ್ವ ಜನಾಂಗದ ಶಾಂತಿ‌ಯ ತೋಟವಾಗಿಸಿಕೊಂಡ ಮಹಾ ಮಾನವತಾವಾದಿಯಾದವರು.

      ಮಠದ ಆವರಣದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ, ದಾಸೋಹ ಮನೆ, ಶಾಲೆ,ಕುಸ್ತಿ, ಕ್ರೀಡಾಂಗಣ, ಕಲ್ಯಾಣ ಮಂಟಪ, ಕಳಸಾರೋಹಣ,ಮೂರ್ತಿ ಪ್ರತಿಷ್ಠಾನ, ತಂದೆ- ತಾಯಿ ಸ್ಮರಣೆ ಭವನ, ರಥೋತ್ಸವ, ಜಾತ್ರೆ, ದಪೂಜೆ ಪುನಸ್ಕಾರ, ಜಾನುವಾರು, ಶಿಬಿರಗಳು, ತರಬೇತಿ, ಕಲೆ, ಸಂಗೀತ ದರ್ಬಾರ್, ಭಜನೆ, ಜಾನಪದ ಕಲೆ- ಹಾಡು ಪ್ರದರ್ಶನ. ಸಾಹಿತ್ಯ ಸಮ್ಮೇಳನ ಆಯೋಜನೆ, ಸಂಗೀತ ಸಮ್ಮೇಳನ, ಧರ್ಮ ಗೋಷ್ಠಿ, ಅನುಭಾವ ಪ್ರಚಾರೋಪನ್ಯಾಸ, ೧೦೩ಕ್ಕೂ ಹೆಚ್ಚು ಪುಸ್ತಕ ಪ್ರಕಟ. ವಿಷಯ ವಚನ ೧೫ ಸಂಪುಟಗಳು. ಪುರಾಣ, ನಾಟಕ ಪ್ರದರ್ಶನ, ಹೀಗೆ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ, ಕನ್ನಡ ಪರಿಚಾರಕರಾಗಿದ್ದಾರೆ.

         ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಸುಲಭವಾಗಿ, ಉತ್ತಮ ಶಿಕ್ಷಣ ನೀಡಲು ಯುಕೆಜಿಯಿಂದ ಪದವಿ ಹಂತದವರೆಗೂ ಶಿಕ್ಷಣ ಕೇಂದ್ರವನ್ನು ಹಾರಕೂಡ, ಚಿಂಚೋಳಿ, ಭಾಲ್ಕಿ, ಮೊದಲಾದ ಕಡೆ ಶಿಕ್ಷಣ ಕೇಂದ್ರ ಅದರಲ್ಲೂ ಕನ್ನಡ ಮಾಧ್ಯ ಮದಲ್ಲಿ, ಉಚಿತ ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಪ್ರೇರೇಪಿಸಿದವರು. ಪಾಲಕರು, ಶಿಕ್ಷಕರ ಸ್ಮರಣೆ ಮಾಡಿಸುತ್ತಿದ್ದಾರೆ.

           ಪ್ರಶಸ್ತಿ ನೀಡುವ ಮಠವಾಗಿದೆ. ಕವಿ, ಸಾಹಿತಿ, ಕಲಾವಿ‌ದರು, ಬಡವರಾಗಬಾರದೆಂದು ಚನ್ನಶ್ರೀ ಪ್ರಶಸ್ತಿ, ಚನ್ನರತ್ನ, ಕಲ್ಯಾಣ ಕರ್ನಾಟಕ ಸಂಗೀತ ರತ್ನ, ಶಿಕ್ಷಣ ರತ್ನ, ಬಸವಭಾನು, ಕಲ್ಯಾಣ ಕರ್ನಾಟಕ ರತ್ನ, ಭಜನಾ ಪ್ರಶಸ್ತಿ, 

ಅಲ್ಲದೆ ಕನ್ನಡ ನಾಡಿನ ಪ್ರತಿಷ್ಠಿತ ೧ ಲಕ್ಷ, ೨ ತೊಲ ಚಿನ್ನದ ಪದಕ ಪ್ರಶಸ್ತಿ ಫಲಕ ಹೊಂದಿದೆ. ಇದುವರೆಗೆ ೧೨ ಜನರಲ್ಲಿ ಪ್ರದಾನ ಮಾಡಲಾಗಿದೆ. 

    ಪೂಜ್ಯರು ಸಾಹಿತಿಗಳು. ಅವರು ನೀಡುವ ಆಶೀರ್ವಚನ

ಸಂದೇಶ, ಪ್ರವಚನ, ವಾಗ್ಮಿತನ, ಮೂಲಕ ಜನಸಾಮಾನ್ಯರಿಂದ ಹೀಡಿದು ವಿದ್ವಾಂಸರಿಗೂ ಅನ್ವಯವಾಗುವ‌ ಹಿತ ವಚನ ಬೋಧನೆ ಮಾಡುವರು. ಹಡಪದ ಅಪ್ಪಣ್ಣನ ನೂರ ವಚನ ಗಳ ಸಂಗ್ರಹ,ಚನ್ನ ಚಿಂತನ,ಚನ್ನಚಂದ್ರಹಾರ, ಚನ್ನಕಾಂತ ವಿಚಾರ ಬಿಂದುಗಳು, ಶ್ರೀಚನ್ನ ನುಡಿ ಎನ್ನುವ ಐದು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸಮನ್ವಯತೆ ಹೊಂದಿದೆ. ಸರಳವಾಗಿ ಸರ್ವರು ಓದುವ ಸಮತಾ ಭಾವ ನೀಡುವುದು.

   ಪೂಜ್ಯರ ಕುರಿತು ಚನ್ಮವೀರ, ಹಾರಕೂಡ ಸಿರಿ, ನಡೆದಾಡುವ ದೇವರು, ಚನ್ನ ಶ್ರೀನಿಧಿ, ಚನ್ನವೀರ ಪದನಮನ

ಚನ್ನ ಚಂದನ, ನುಡಿಚನ್ನ, ವಚನ ವಾರಿಧಿ, ಚನ್ನ ಸಂಭ್ರಮ, ಚನ್ನಶ್ರೀವಾಣಿ, ಅಲ್ಲದೇ ಮಠದ ಹಾಗೂ ಶ್ರೀಗಳ ಕುರಿತು ಎಂಫಿಲ್,ವಪಿಎಚ್.ಡಿಗಳಾಗಿವೆ.

     ಶಿವಾಚಾರ್ಯ ರತ್ನ, ಸದ್ಧರ್ಮ ಶಿಖಾಮಣಿ, ಮನುಕುಲ

ರತ್ನ, ದಾಸೋಹ ಜ್ಯಾನ ರತ್ನ, ಆಧ್ಯಾತ್ಮ ಸಿರಿ, ಅನ್ನದಾನೇಶ್ವ‌ರ ಪ್ರಶಸ್ತಿ, ಸ್ವರ ಮಾಧುರಿ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ರತ್ನ, ಕಲ್ಯಾಣ ಕರ್ನಾಟಕ ರತ್ನ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಲಭಿಸಿವೆ. ಕಲ್ಯಾಣ ಕರ್ನಾಟಕ ಎರಡನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಹೊಂದಿದ್ದರು ಈಗ ಬೇಲೂರು ಉರಿಲಿಂಗಪೆದ್ದಿ ಮಠದಲ್ಲಿ ಜರುಗುವ‌ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ‌ಸಂದಿದೆ.

ಡಾ. ರಾಜಕುಮಾರ ಮಾಳಗೆ ಲೇಖಕರು, ಕಲಬುರಗಿ