4ನೇ ಬೌದ್ಧ ಸಮ್ಮೇಳನ

4ನೇ ಬೌದ್ಧ ಸಮ್ಮೇಳನ

4ನೇ ಬೌದ್ಧ ಸಮ್ಮೇಳನ

 ಬೀದರ್ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ಡಿ 15ರಂದು ಬುದ್ಧಿಸ್ಟ್ ಮಹಾವಿಹಾರದಲ್ಲಿ ಬೌದ್ಧ ಸಮ್ಮೇಳನ ಜರುಗತ್ತಲ್ಲಿದ್ದು ದೇಶದ ನಾನಾ ಭಾಗಗಳಿಂದ ಪೂಜ್ಯ ಭಿಕ್ಕುಗಳ ಆಗಮನವಾಗುತ್ತಿದ್ದು 

ವಿಶೇಷವಾಗಿ ಪೂಜ್ಯ ಭಂತೆ ಮನೋರಕ್ಷಿತ ಕೊಳ್ಳೆಗಾಲ,

ಸಾಮಾಜಿಕ ಮಾಧ್ಯಮಗಳಲ್ಲಿ ಚಿರಪರಿಚಿತರಾದ ಶ್ರೀಲಂಕಾ ದಲ್ಲಿ ಧಮ್ಮ ಅಧ್ಯಾಯನ ಮಾಡಿ ಬಂದಿರುವ ಪೂಜ್ಯ ಭಂತೆ ಗುಣಾನಂದ ಅಭಿಭೂ ಔರಂಗಾಬಾದ ಮಹಾರಾಷ್ಟ್ರ, ಹಾಗೂ ಪೂಜ್ಯ ಭಂತೆ ಪ್ರೀಯದರ್ಶಿ, ಸಾರನಾಥ, ಉತ್ತರ ಪ್ರದೇಶ. ಪೂಜ್ಯ ಭಂತೆ ಧಮ್ಮತಿಸ್ಸ ಕೊಳ್ಳೆಗಾಲ ದಿಂದ ಆಗಮಿಸುತ್ತಿರುವ ಇವರೆಲ್ಲರೂ ವಿಶೇಷವಾಗಿ ತಮ್ಮ ಅಮೂಲ್ಯವಾದ ಧಮ್ಮ ಪ್ರವಚನ ನೀಡಲಿದ್ದಾರೆ. ಆದ್ದರಿಂದ ಇಂಥಹ ಪವಿತ್ರ ಮತ್ತು ಜ್ಞಾನಿಗಳಾದ ಬೌದ್ಧ ಭಿಕ್ಷುಗಳು ಬೀದರ ಜಿಲ್ಲೆಗೆ ಆಗಮಿಸುತ್ತಿರುವುದು ಬೀದರ ಜಿಲ್ಲೆಯ ಜನರ ಪುಣ್ಯವಾಗಿದೆ. ಆದ್ದರಿಂದ ಬೌದ್ಧ ಉಪಾಸಕ / ಉಪಾಸಕಿಯರು,ಶ್ರದ್ಧಾವಂತ ಬೌದ್ಧ ಅನುಯಾಯಿ ಗಳೆಲ್ಲರೂ ತಮ್ಮ ತಮ್ಮ ಪರಿವಾರ,ಬಂಧು -ಮಿತ್ರರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕರೆ ತಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಮ್ಮ ಉಪದೇಶವನ್ನು ಕೇಳಿ ಪುನಿತರಾಗಬೇಕೆಂದು ತಮ್ಮೆಲ್ಲರಿಗೆ ಈ ಪ್ರಕಟಣೆ ಮೂಲಕ ತಿಳಿಸಲಾಗಿದೆ.  

 ವರದಿ:ಮಛಂದ್ರನಾಥ ಕಾಂಬ್ಳೆ ಬೀದರ್