ಸರ್ಕಾರಿ ಪ್ರೌಢಶಾಲೆ ಬಿರಾಳ ಬಿ ಹತ್ತನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಕಾರ್ಯಕ್ರಮ.

ಸರ್ಕಾರಿ ಪ್ರೌಢಶಾಲೆ ಬಿರಾಳ ಬಿ ಹತ್ತನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಕಾರ್ಯಕ್ರಮ.

ಸರ್ಕಾರಿ ಪ್ರೌಢಶಾಲೆ ಬಿರಾಳ ಬಿ ಹತ್ತನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಕಾರ್ಯಕ್ರಮ.

ಜೇವರ್ಗಿ ತಾಲೂಕಿನ ಬಿರಾಳ್ ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅದ್ದೂರಿಯಾಗಿ ಜರುಗಿದ 10ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವು

  ಶಾಲಾ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ದಯಾನಂದ್ ಬಿರಾದಾರ್ ಅವರು ಇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು ಅದೇ ರೀತಿಯಾಗಿ ಶಿಕ್ಷಣವೇ ಬದುಕಿನ ಮೂಲ ಮಂತ್ರ ಎಂಬ ದ್ಯಯವನ್ನಿಟ್ಟುಕೊಂಡು ಉತ್ತಮ ಶಿಕ್ಷಣವನ್ನು ಪಡೆದು ನಿಮ್ನ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು ಯಾವುದೇ ರೀತಿಯ ಪರೀಕ್ಷೆಯನ್ನು ಎದುರಿಸುವವಾಗ ಸಕಾರಾತ್ಮಕ ಪ್ರಯತ್ನವಿದ್ದಲ್ಲಿ ಫಲ ಇದ್ದೇ ಇರುತ್ತದೆ ಜೀವನದಲ್ಲಿ ಯಾವುದು ಅಸಾಧ್ಯವಿಲ್ಲ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಮಕ್ಕಳಿಗೆ ಕಿವಿಮಾತು ತಿಳಿಸಿದರು.

ಅದರಂತೆಯೇ 10ನೇ ತರಗತಿಯ ವರ್ಗ ಶಿಕ್ಷಕರಾದ ಶ್ರೀ ಲಾಳೆ ಮಶಾಕ್ ಬಳಬಟ್ಟಿ ಗುರುಗಳು ಪ್ರಾಸ್ತಾವಿಕ ಭಾಷಣದಲ್ಲಿ ವಿದ್ಯಾರ್ಥಿಗಳು ಪ್ರಬಲವಾದ ಇಚ್ಛಾಶಕ್ತಿಯೊಂದಿಗೆ ಕಾರ್ಯನಿರ್ವಹಿಸಬೇಕು ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿರಬೇಕು. ಉತ್ತಮ ದಾರಿಯಲ್ಲಿ ಸಾಗಬೇಕು ಎಂದು ಮಕ್ಕಳಿಗೆ ತಿಳಿಸಿದರು ಶಾಲೆಯ ಫಲಿತಾಂಶ 100 ಪ್ರತಿಶತ ನಮ್ಮ ಶಾಲೆದಾಗಿರಬೇಕು ಎಂದು ಹೇಳಿದರು ಅದೇ ರೀತಿ ಅತಿಥಿಗಳಾಗಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಶರ್ಮದ್ದೀನ್ ಮತ್ತು ಶಾಲೆಯ ಸಿಬ್ಬಂದಿ ವರ್ಗ ಶ್ರೀ ಬಸವರಾಜ್ ಮುರುಡಿ ಶ್ರೀ ದುಂಡಪ್ಪ ದೊಡ್ಮನಿ ಶ್ರೀ ಸುಬ್ಬರಾಯಪ್ಪ ಶ್ರೀ ಅಪ್ಪು ಚೌಹಾಣ್ ಶ್ರೀ ದಿಲೀಪ್ ಕುಮಾರ್ ಹೂಗಾರ್ ಹಾಗೂ ಶಾಲೆಯ ದೈಹಿಕ ಶಿಕ್ಷಣದ ವಿಭಾಗದ ದೈಹಿಕ ಶಿಕ್ಷಕಿಯರಾದ ಶ್ರೀಮತಿ ಲಕ್ಷ್ಮಿ ಬಾಯಿ ಬಾರೊಡ್ಡಿ ಅವ್ರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಶುಭ ಹಾರೈಸಿ ಪ್ರಾಸ್ತಾವಿಕ ಭಾಷಣ ಮುಗಿಸಿದರು ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು

ವರದಿ ಜೆಟ್ಟೆಪ್ಪ ಎಸ ಪೂಜಾರಿ