ಪೋಲಿಸ್ ಪಾಟೀಲ ಮೇರು ವ್ಯಕ್ತಿತ್ವದ ಸಾಹಿತಿ- ಪ್ರೊ.ಚೆಕ್ಕಿ

ಸಾಹಿತ್ಯ ಸಮಾಗಮ ಉಪನ್ಯಾಸ ಮಾಲೆ-೨
ಪೋಲಿಸ್ ಪಾಟೀಲ ಮೇರು ವ್ಯಕ್ತಿತ್ವದ ಸಾಹಿತಿ- ಪ್ರೊ.ಚೆಕ್ಕಿ
ಕಲಬುರಗಿ: ಹಾಸ್ಯದ ಮೂಲಕ ಪ್ರಬಂಧಗಳನ್ನು ಬರೆದು,ಪತ್ರಿಕೆ,ಆಕಾಶವಾಣಿಗಳಲ್ಲಿ ಇವರ ಪ್ರತಿಭೆ ಅಡಗಿದೆ
ಪ್ರಬಂಧ ಗಳಲ್ಲಿ ಹಾಸ್ಯ ತಿಳಿವು,ಲೋಕರೂಢಿ,ಗಾದೆ, ಒಗಟು,ಬಳಸಿಕೊಂಡು ಸಮಾಜಕ್ಕೆ, ನಾಡಿಗೆ ಉಪಯುಕ್ತ
ಪ್ರಬಂಧಗಳು ಮನಸ್ಸಿಗೆ ನಾಟುವ ಮೂಲಕ ಹೃದಯಸ್ಪರ್ಶಿ ಪ್ರಬಂಧ ಬರೆದ ಸಿದ್ಧರಾಮ ಪೋಲಿಸ್ ಪಾಟೀಲರು ಮೇರು ವ್ಯಕ್ತಿತ್ವದ ಸಾಹಿತಿ ಎಂದು ವಿಶ್ರಾಂತ ಪ್ರಾಧ್ಯಾಪಕರು, ಸಾಹಿತಿ ಡಾ.ಶೋಭಾದೇವಿ ಚೆಕ್ಕಿ ಅಭಿಮತ ಪಟ್ಟರು
ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಮತ್ತು ಸಾಕ್ಷಿ ಪ್ರತಿಷ್ಠಾನ
ಆಶ್ರಯದಲ್ಲಿ ಮಹಾವೀರ ನಗರದ ಕಾಡಸಿದ್ದೇಶ್ವರ ನಿವಾಸದಲ್ಲಿ ಸಾಹಿತ್ಯ ಸಮಾಗಮದ ಮಾಲಿಕೆ:೨ ರಲ್ಲಿ ಪ್ರಬಂಧ ಸಾಹಿತ್ಯ ಕುರಿತು ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರದ ವಾಸ್ತವದ ಪ್ರಭಾವಯುತ ಪ್ರಬಂಧ ರಚಿಸಿದವರು
ಸೇಡಂನ ಅತಿಥಿ ಪ್ರಾಧ್ಯಾಪಕ ಡಾ.ಸಿದ್ಧಪ್ಪ ಹೊಸಮನಿ ಮಾತನಾಡಿ ಲೇಖಕರು ಸ್ವಯಂ ಅನುಭವದ ಮೂಲಕ ಸಾಮಾಜಿಕ,ಧಾರ್ಮಿಕ, ವ್ಯಕ್ತಿ,ಪ್ರಾದೇಶಿಕತೆ,ಆರೋಗ್ಯ ಕುರಿತು ವೈಚಾರಿಕತೆ ಮತ್ತು ಲಯ,ಪ್ರಾಸ,ಮಾತ್ರ ಗಣ ಛಂದಸ್ಸಿನಲ್ಲಿ ರಚಿಸಿ ಆಧುನಿಕ ವಚನ ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಸಾಹಿತಿ ಪ್ರೊ.ಶಿವರಾಜ ಪಾಟೀಲರು ವೃತ್ತಿ ಬೇರೆಯಾದರೂ ಪ್ರವೃತ್ತಿಯಿಂದ ಸಾಹಿತಿಯಾಗಿ ನಮ್ಮ ನೈಜ ಬದುಕನ್ನು ಅವರು ಸಾಹಿತ್ಯದಲ್ಲಿ ರಚಿಸಿದ್ದು ಅನನ್ಯ ಎಂದರು.ಸಾಹಿತಿ ಸಿದ್ಧರಾಮ ಪೋಲಿಸ್ ಪಾಟೀಲರು ಮಾತನಾಡಿ ನಮ್ಮಲ್ಲಿ ಪ್ರತಿಭಾವಂತ ಲೇಖಕರಿದ್ದಾರೆ ಅವರಿ ಪ್ರಚಾರದ ಕೊರತೆಯಿದೆ ಇಂತಹ ವಿಮರ್ಶೆ ಮೂಲಕ ಪ್ರಚಾರ ಮಾಡಬೇಕು ಈ ಪ್ರದೇಶದ ಸಾಹಿತಿಗಳ ವಿಮರ್ಶೆ ಸಮೂಹ ಮಾಧ್ಯಮ ವರದಿ ಮಾಡಿ ಬೇರೆಯವರಿಗೂ ತಿಳಿ ಸಬೇಕಾದ ಅನಿವಾರ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ವಹಿಸಿ ಸಿದ್ಧರಾಮರ ಸಾಹಿತ್ಯ ಅದರಲ್ಲಿ ಬಳಸುವ ಶಬ್ದಗಳು ನಮ್ಮ ಡಿಕ್ಷನರಿ ಗಳಲ್ಲಿ ಇಲ್ಲ. ಅವುಗಳ ಕುರಿತು ಚರ್ಚೆಯಾಗಬೇಕು.ಅವರು ಯಾವುದೇ ಆಪೇಕ್ಷೆ ಇಲ್ಲದೇ ಬರಹದಲ್ಲಿ ತೊಡಗಿದ ಸಂತೃಪ್ತ ಜೀವನ ಬರಹ ಒಂದಾಗಿಸಿದ ಲೇಖಕರೆಂದರು.
ವೇದಿಕೆ ಕಾರ್ಯದರ್ಶಿ ಡಾ.ಶೀಲಾದೇವಿ ಎಸ್.ಬಿರಾದಾರ
ಸ್ವಾಗತಿಸಿದರು.ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಸಿದ್ಧರಾಮ ಸರಸಂಬಿ ವಂದಿಸಿದರು.
ವೀರಭದ್ರ ಸಿಂಪಿ,ಕಲ್ಲಯ್ಯ ಸ್ಥಾವರಮಠ,ಸಿದ್ಧರಾಮ ಸರಸಂಬಿ,ಶರಣಬಸವ ಸೂಗೂರು, ಡಾ.ಸುಖದೇವಿ, ಆಕಾಶ ತೆಗನೂರು, ರವಿಗೌಡಗೇರಿ,ಡಾ.ಚಿದಾನಂದ ಕುಡ್ಡನ್, ಮನೋಹರ ಮರಗುತ್ತಿ,ಶಿವಾನಂದ ಹಿರೇಮಠ, ಡಾ.ಅವಿನಾಶ ದೇವನೂರು,ಮಲ್ಲಮ್ಮ ಕಾಳಗಿ, ಮತ್ತಿತರರು ಇದ್ದರು
ವರದಿ ಡಾ .ಅವಿನಾಶ S ದೇವನೂರ,