ಕಂದ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಕಂದ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಕಂದ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಸೇಡಂ: ಕೊಡೇಕಲ್ಲ ಚನ್ನಬಸವಣ್ಣ ಪ್ರಕಾಶನ, ಹಣಮನಹಳ್ಳಿ (ತಾಲೂಕು: ಸೇಡಂ, ಜಿಲ್ಲೆ: ಕಲಬುರಗಿ) ವತಿಯಿಂದ ನೀಡಲಾಗುವ ‘ಕಂದ ಪ್ರಶಸ್ತಿ’ಗಾಗಿ ಕನ್ನಡ ಸಾಹಿತ್ಯದ ಕಥೆ ಮತ್ತು ಕಾದಂಬರಿ ಪ್ರಕಾರದ 2024 ಮತ್ತು 2025ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ.

ಕು. ರಾಘವೇಂದ್ರ ಎಂ.ಹೆಚ್. ಹಣಮನಹಳ್ಳಿಯವರ ಜನ್ಮ ದಿನಾಚರಣೆಯ ನಿಮಿತ್ತ 10-02-2026 ರಂದು ಸೇಡಂ ಪಟ್ಟಣದಲ್ಲಿ ನಡೆಯಲಿರುವ ಸರಳ ಸಮಾರಂಭದ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಂದ ಪ್ರಶಸ್ತಿಯ ಸಂಚಾಲಕರಾದ ಮುರಗೆಪ್ಪ ಆರ್.ಎಚ್. ಹಣಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿ.ಎಚ್.ಡಿ. ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತರು ತಮ್ಮ ಪುಸ್ತಕದ ಮೂರು ಪ್ರತಿಗಳನ್ನು 31-12-2025ರ ಒಳಗೆ ಕಳುಹಿಸಬಹುದು.

ಪುಸ್ತಕ ಕಳುಹಿಸಬೇಕಾದ ವಿಳಾಸ:

ಮುರಗೆಪ್ಪ ತಂದೆ ರೇವಣಸಿದ್ದಪ್ಪ ಹಡಪದ

ಮು: ಹಣಮನಹಳ್ಳಿ

ಪೋಸ್ಟ್: ಸಿಂಧನಮಡು

ತಾಲೂಕಾ: ಸೇಡಂ

ಜಿಲ್ಲಾ: ಕಲಬುರಗಿ

ಪಿನ್: 585222

ಮೊಬೈಲ್: 9900101903

ಕೊಡೇಕಲ್ಲ ಚನ್ನಬಸವಣ್ಣ ಪ್ರಕಾಶನ, ಹಣಮನಹಳ್ಳಿ