ಮೆಚ್ಚುಗೆ ಗಳಿಸಿದ ಉದ್ಭವ ಅಂತರಾಷ್ಟ್ರೀಯ ಜಾನಪದ ನೃತ್ಯೋತ್ಸವ
ಮೆಚ್ಚುಗೆ ಗಳಿಸಿದ ಉದ್ಭವ ಅಂತರಾಷ್ಟ್ರೀಯ ಜಾನಪದ ನೃತ್ಯೋತ್ಸವ
ಮಧ್ಯಪ್ರದೇಶ : ಪುರಾತನ ಕಾಲದಿಂದಲೂ ಜನರಿಂದ ಜನರಿಗಾಗಿ ಹರಿದು ಬಂದ ಜಾನಪದದ ಸೊಗಡು ನಗರೀಕರಣ, ಗಡಿಬಿಡಿಯ ಬದುಕಿನಿಂದ ಕಣ್ಮರೆಯಾಗುತ್ತಿರುವ ನಡುವೆಯೇ
ರಾಜ್ಯದ ಗ್ವಾಲಿಯರ್ ನಗರದಲ್ಲಿ ಉದ್ಭವ ಅಂತರಾಷ್ಟ್ರೀಯ ಜಾನಪದ ನೃತ್ಯೋತ್ಸವ ನಿಮಿತ್ಯ ಹಮ್ಮಿಕೊಂಡ ಭವ್ಯ ಮೆರವಣಿಗೆ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಉದ್ಭವ ಅಂತರಾಷ್ಟ್ರೀಯ ಜಾನಪದ ನೃತ್ಯೋತ್ಸವ ನಿಮಿತ್ಯ ಹಮ್ಮಿಕೊಂಡ ಭವ್ಯ ಮೆರವಣಿಗೆ ಕಾರ್ಯಕ್ರಮವನ್ನು ಉದ್ಭವ ಅಂತರಾಷ್ಟ್ರೀಯ ಕಲಾ ಸಂಸ್ಥೆ ನವದೆಹಲಿ ಉಪಾಧ್ಯಕ್ಷರಾದ ಶ್ರೀಮತಿ ಕಿರಣ ಮಧೋರಿಯಾ ಚಾಲನೆ ನೀಡಿದರು.
ಕಿರ್ಗಿಸ್ತಾನ್, ನೆದರ್ಲ್ಯಾಂಡ್, ಬಲ್ಗೇರಿಯಾ, ಅರ್ಮೇನಿಯಾ,ಶ್ರೀಲಂಕಾ ದೇಶದ ಜೊತೆಗೆ ಭಾರತ ದೇಶದ ವಿವಿಧ ರಾಜ್ಯಗಳ ಕಲಾ ತಂಡದ ಮುಖ್ಯಸ್ಥರು,ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಆಯೋಜನಾ ಸಮಿತಿ ಅಧ್ಯಕ್ಷ ಡಾ.ಕೇಶವ ಪಾಂಡೆ ಕಾರ್ಯದರ್ಶಿ ಶ್ರೀ ದೀಪಕ ತೋಮರ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ನವದೆಹಲಿ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸೇರಿದಂತೆ ಕರ್ನಾಟಕ ಜಾನಪದ ಪರಿಷತ್ತು ಬೀದರ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಕಾಶ್ ಕನ್ನಾಳೆ ಜಂಟಿ ಕಾರ್ಯದರ್ಶಿ ಶ್ರೀ ಶಿವಶರಣಪ್ಪ ಗಣೇಶಪುರ ಮತ್ತು ಇತರರು ಉಪಸ್ಥಿತರಿದ್ದರು ಎಂದು ಡಾ.ರಾಜಕುಮಾರ ಹೆಬ್ಬಾಳೆ ಕಾರ್ಯದರ್ಶಿ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ನವದೆಹಲಿ , ಅವರು ಹೇಳಿದರು