ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತೋತ್ಸವ ಆಚರಣೆ

ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತೋತ್ಸವ ಆಚರಣೆ
ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಬಹ್ಮಪುರ ಶಿವಾಜಿ ಪಾರ್ಕ್ ನ ಅಧ್ಯಕ್ಷ ಜ್ಯೋತಿಬಾ ಕೆ ಜಾಧವ್ ಅವರ ನೇತೃತ್ವದಲ್ಲಿ ಶಿವಾಜಿ ಪಾಕ್೯ನಲ್ಲಿ ಏರ್ಪಡಿಸಲಾಗಿತ್ತು ಸಮಾರಂಭದಲ್ಲಿ ಬಡಾವಣೆಯಲ್ಲಿ ಜನರೆಲ್ಲ ಸೇರಿಕೊಂಡು ಶಿವಾಜಿ ಮಹಾರಾಜರ ಮೂರ್ತಿಗೆ ವಿಷೇಶ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಬಳಿಕ ಶಿವಾಜಿ ಪಾರ್ಕಿನಲ್ಲಿ ಬಡಾವಣೆಯ ಜನರಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನೇರವೆರಿಸಲಾಯಿತು.
ಈ ವೇಳೆ ಮಾತನಾಡಿದ ಜ್ಯೋತಿಬಾ ಜಾಧವ್ ಅವರು ಶಿವಾಜಿ ಮಹಾರಾಜರ ಜಯಂತಿಯನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಇತ್ತಿಚಿಗೆ ಸಮುದಾಯ ಹಿರಿಯ ಮುಖಂಡರಾದ ಅನಿಲ್ ಮೋರೆ ಅವರ ನಿಧನ ಹೊಂದಿರುವ ಕಾರಣ ಈ ಬಾರಿ ಸರಳವಾಗಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ರೇಣುಕಾ ವಳಕೇರಿ, ಮುಖಂಡರಾದ ನಾರಾಯಣ ನವಲೇ, ವಿಠ್ಠಲ ಬೋಸಲೆ, ಪಿಂಟೂ ಕಿಣ್ಣಿಕರ್, ರಾಜು ತುವಾರ್, ಬಾಪು ಜಾಧವ್, ಶಿವಾಜಿ ಜಾಧವ್, ಮಾಧು ಗಾಯಕವಾಡ್, ಸುನೀಲ್ ಮೋರೆ, ಪಿಂಟೂ ಸ್ವಾಮಿ, ಸಿದ್ದು ಮಾನೆ ಸೇರಿದಂತೆ ಅನೇಕ ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು...