ಗುಣಮಟ್ಟದ ಕಾಮಗಾರಿ ಕಲ್ಪಿಸಬೇಕೆಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರಿಗೆ ಮನವಿ

ಗುಣಮಟ್ಟದ ಕಾಮಗಾರಿ ಕಲ್ಪಿಸಬೇಕೆಂದು  ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರಿಗೆ ಮನವಿ

ಗುಣಮಟ್ಟದ ಕಾಮಗಾರಿ ಕಲ್ಪಿಸಬೇಕೆಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರಿಗೆ ಮನವಿ

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿನದಲ್ಲಿ ನಡೆದಿರುವ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು ಕೂಡಲೆ ಸಂಬAಧಿತ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಜರುಗಿಸಿ ಗುಣಮಟ್ಟದ ಕಾಮಗಾರಿ ಕಲ್ಪಿಸಬೇಕೆಂದು ಜೈ ಕನ್ನಡಿಗರ ಸೇನೆ ರಾಜ್ಯ ಸಮಿತಿ ವತಿಯಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಚೇರಿಯ ಎದುರು ಪ್ರತಿಭಟನೆ ನಡೆಸಿ ನಂತರ ಕಾರ್ಯಪಾಲಕ ಅಭಿಯಂತರಿಗೆ ಮನವಿ ಸಲ್ಲಿಸಲಾಯಿತು.

ಚಿಂಚೋಳಿ ತಾಲೂಕಿನಲ್ಲಿ ಸ್ಲಂಬೊರ್ಡ (ಕೊಳಚೆ ಪ್ರದೇಶ) ಅಭಿವೃದ್ಧಿ ಮಂಡಳಿ ಅಧಿನದಲ್ಲಿ ನಡೆದಿರುವ ಸುಮಾರು 500 ನೂರ ವಸತಿ ಯೋಜನೆ ಕಟ್ಟಡ ಪ್ರಗತಿಯಲ್ಲಿದ್ದು ಕಟ್ಟಡ ಕಾಮಗಾರಿಗೆ ಸಂಬAಧಿತ ಸ್ಟೀಲ್, ರೇತಿ, ಇಟ್ಟಂಗಿ ಮತ್ತು ಕಾಂಕ್ರೇಟ್ ಮುಂತಾದ ಇತ್ಯಾದಿ ವಸ್ತುಗಳು ಅಳವಡಿಸದೆ ಕಳಪೆ ಮಟ್ಟದ ಸಾಮಗ್ರಿಗಳು ಅಳವಡಿಸಿ ಕಾಮಗಾರಿ ಪ್ರಗತಿಯಲ್ಲಿದ್ದು ಈ ಕೂಡಲೆ ಕಳಪೆ ಕಾಮಗಾರಿ ತಡೆದು ಸಂಬAಧಿತ ಕಿರಿಯ ಅಭಿಯಂತರರು ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕೂಡಲೆ ಸೂಕ್ತ ಕಾನೂನು ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಪ್ರಗತಿಯಲ್ಲಿ ಇದ್ದ ಕಾಮಗಾರಿ ತಡೆದು ಗುಣಮಟ್ಟದ ಮಟೆರಿಯಲ್ ಅಳವಡಿಸಿ ಗುಣಮಟ್ಟದ ಕಾಮಗಾರಿ ಕಲ್ಪಿಸಬೇಕು ಒಂದುವೇಳೆ ಶಿಸ್ತುಕ್ರಮ ಕೈಗೋಳ್ಳದೆ ಹೋದರೆ ಮುಂದೆ ಬರುವ ದಿನಗಳಲ್ಲಿ ತಮ್ಮ ಮಂಡಳಿ ಮುಂದೆ ಸಮಿತಿ ವತಿಯಿಂದ ಉಗ್ರವಾದ ಹೋರಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಕ್ಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್. ಭಾಸಗಿ, ಚಿಂಚೋಳಿ ತಾಲೂಕಾ ಜೈ ಕನ್ನಡಿಗರ ಸೇನೆ ತಾಲೂಕಾ ಅಧ್ಯಕ್ಷ ಭಾಗ್ಯವಂತ ಆರ್ ಶಾರದ, ಕಾರ್ಯಕರ್ತರಾದ ಭೀರಪ್ಪ, ತಿಪ್ಪಣ್ಣ, ಚಂದ್ರಪ್ಪ, ದೇವಪ್ಪ, ರಮೇಶ, ಗುಂಡಪ್ಪ, ಜಗನಾಥ, ಶ್ರೀಕಾಂತ, ಮಲ್ಲು ಆಲಗೂಡ, ನವೀನ ಧುಮ್ಮನಸೂರ, ವಿಠಲ ವಾಲಿಕಾರ, ಅಭಿ ಗೌಡ, ಹುಸೇನ ಸೇರಿದಂತೆ ಉಪಸ್ಥಿತರಿದ್ದರು.