ಕಮಲಾಪುರ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಮೇಲೆ ಅಕ್ರಮ – ತಕ್ಷಣ ಕ್ರಮಕ್ಕೆ ಕನಸು ಸೇವಾ ಸಂಸ್ಥೆ ಒತ್ತಾಯ"
ಕಮಲಾಪುರ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಮೇಲೆ ಅಕ್ರಮ – ತಕ್ಷಣ ಕ್ರಮಕ್ಕೆ ಕನಸು ಸೇವಾ ಸಂಸ್ಥೆ ಒತ್ತಾಯ"
ಕಮಲಾಪುರ: ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದು, ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದು ವಿತರಕರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಕರ್ತವ್ಯವಾಗಿದೆ. ಹಾಗೂ ರೈತಬಾಂಧವರಿಗೆ ಅನುಕೂಲವಾಗುವಂತೆ ಪ್ರತಿ ಬೀಜ, ಗೊಬ್ಬರ, ಕೀಟನಾಶಕಗಳ ದಾಸ್ತಾನು ಹಾಗೂ ದರಪಟ್ಟಿಯನ್ನು ತಮ್ಮ ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ದಾಸ್ತಾನು ರಜಿಸ್ಟರ್ ಬರೆಯುವುದು. ರಜಿಸ್ಟರ್‍ನಲ್ಲಿರುವ ದಾಸ್ತಾನಕ್ಕೂ ಭೌತಿಕ ದಾಸ್ತಾನಕ್ಕೂ ಸರಿಹೊಂದುವಂತಿರಬೇಕು. ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ ಮಶೀನ್ (ಪಾಸ ಮಶೀನ) ಬಳಕೆಮಾಡಿ ರಸಗೊಬ್ಬರ ಮಾರಾಟ ಮಾಡಬೇಕು. ರೈತರ ಸಹಿ ಪಡೆದು ಅವರಿಗೆ ಕಡ್ಡಾಯವಾಗಿ ರಶೀದಿ ಕೊಡಬೇಕು. ರಸಗೊಬ್ಬರ ನಿಯಂತ್ರಣ ಆದೇಶ, ಬೀಜ ಕಾಯ್ದೆ ಮತ್ತು ನಿಯಮಗಳು ಸೇರಿದಂತೆ ಕೃಷಿ ಪರಿಕರ ಮಾರಾಟಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಪಾಲನೆ ಮಾಡುವ ಮೂಲಕ ಮಾರಾಟಗಾರರು ತಮ್ಮ ವಹಿವಾಟು ನಡೆಸಬೇಕು ಎಂದು ನಿಯಮವಿದ್ದರೂ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಮಲಾಪುರ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ರೈತರ ಹೆಸರಿನ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಖಾಸಗಿಯಾಗಿ ಬೀಜ ಗೊಬ್ಬರು ಖರೀದಿ ಮಾಡಬೇಕೆಂದರೆ ದರ ಹೆಚ್ಚಿಗೆ ಇರುವುದರಿಂದ ರೈತರು ರೈತ ಸಂಪರ್ಕವನ್ನು ನಂಬಿ ಬರುತ್ತಾರೆ ಆದರೆ ಇಲ್ಲಿನ ಅಧಿಕಾರಿಗಳು ಸರ್ವರ್ ಸಮಸ್ಯೆ ಇದೆ ಎಂದು ನೆಪ ಹೇಳುತ್ತಾರೆ ಆದರೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ನೀಡಿದ ರೈತರ ಪಾಣಿ ಮತ್ತು ದಾಖಲೆಗಳನ್ನು ಪಡೆದುಕೊಂಡು ಅವರಿಗೆ ಬೀಜಗಳನ್ನು ಒದಗಿಸುತ್ತಿದ್ದಾರೆ. ಹಾಗೂ ಹೊಲ ಇಲ್ಲದವರಿಗೂ ಕೂಡ ಬೀಜ ಕೊಡುತ್ತಿದ್ದಾರೆ, ಅವರು ಹೊರಗಡೆ ಬೇರೆ ರೈತರಿಗೆ ಹಣಕ್ಕಾಗಿ ಮಾರಿಕೊಳ್ಳುತ್ತಾರೆ.
ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ರೈತ ಸಂಪರ್ಕ ಕೇಂದ್ರ ತೆರೆಯಲ್ಲ, ವ್ಯವಸ್ಥೆ ಸರಿಯಿಲ್ಲದೆ ರೈತರು ನೂಕುನುಗ್ಗಲಿನಲ್ಲಿ ಪರದಾಡುವಂತಾಗಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರೈತರ ಹೆಸರಿನ ಮೇಲೆ ಲೂಟಿ ಮಾಡುತ್ತಿದ್ದಾರೆ. ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸಿ ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಸಂತೋಷಕುಮಾರ ಎಸ್.ಪಿ ಅಧ್ಯಕ್ಷರು, ಕನಸು ಸೇವಾ ಸಂಸ್ಥೆ (ರಿ) ಅವರು ಹೇಳಿದರು
* ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ.
* ಹಣ ನೀಡಿದವರಿಗೆ ಮೊದಲು ಬೀಜ ವಿತರಣೆ.
* ಸರ್ವರ್ ಸಮಸ್ಯೆ ಎಂದು ಹೇಳಿ ರೈತರಿಗೆ ಕಾಯಿಸುತ್ತಿದ್ದಾರೆ.
* ನಿಗದಿತ ದರದ ಪಟ್ಟಿ ಹಚ್ಚಿಲ್ಲ.
* ವ್ಯವಸ್ಥಿತವಾಗಿ ಸರತಿ ಸಾಲಿನಲ್ಲಿ ನಿಂತಿರುವ ರೈತರಿಗೆ ಬೀಜ ವಿತರಿಸುತ್ತಿಲ್ಲ, ಬದಲಿಗೆ ರಾಜಕೀಯ ಮುಖಂಡರ ಬೆಂಬಲ ಇದ್ದವರಿಗೆ ಮೊದಲು ಬೀಜ ವಿತರಣೆ.
* ಸರಿಯಾದ ಸಮಯಕ್ಕೆ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ತೆರೆಯುತ್ತಿಲ್ಲ.