ಜಾತ್ರಾ ಮಹೋತ್ಸವದ ಬಿತ್ತಿಪತ್ರ ಬಿಡುಗಡೆ

ಜಾತ್ರಾ ಮಹೋತ್ಸವದ ಬಿತ್ತಿಪತ್ರ ಬಿಡುಗಡೆ
ಶಹಪುರ : ಇಂದಿನಿಂದ ಫೆ 27 ರವರೆಗೆ ಪ್ರತಿನಿತ್ಯ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಮಠದ ಶ್ರೀಗಳಾದ ಮರುಳ ಮಹಾಂತ ಶಿವಾಚಾರ್ಯರು ಸ್ವಾಮಿಗಳು ತಿಳಿಸಿದರು.ತಾಲೂಕಿನ ಸಗರ ಗ್ರಾಮದ ಒಕ್ಕಲಿಗರ ಹಿರೇಮಠದ ಶ್ರೀ ಕರಿಬಸವೇಶ್ವರ ಜಾತ್ರಾ ಮಹೋತ್ಸವ - 2025 ರ ನಿಮಿತ್ಯ ಬಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಇಂದಿನಿಂದ ಪ್ರತಿನಿತ್ಯ ಸಾಯಂಕಾಲ 7:00ಗೆ ಶಹಾಪುರದ ವಿಶ್ವಕರ್ಮ ಏಕದಂಡಗಿ ಮಠದ ಯಾತ ಪುರಾಣ ಪ್ರವಚನಕಾರರಾದ ಹಾಗೂ ಪರಮ ಪೂಜ್ಯರಾದ ಕಾಳಹಸ್ತೇಂದ್ರ ಮಹಾಸ್ವಾಮಿಗಳಿಂದ ಶ್ರೀ ದೇವಿ ಪುರಾಣ ಪ್ರಾರಂಭಗೊಳ್ಳುವುದು. ಸಂದರ್ಭದಲ್ಲಿ ರಾಜಶೇಖರ ಹುಲ್ಲೂರ ಬಸವರಾಜ ವಿಶ್ವಕರ್ಮ ಅವರಿಂದ ಸಂಗೀತ ಕಾರ್ಯಕ್ರಮಗಳು ಜರುಗುವವು,ಫೆಬ್ರವರಿ 22ರಂದು ಸಾಯಂಕಾಲ 7:00ಗೆ ಮಠಾಧ್ಯಕ್ಷರಾದ ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳಿಗೆ ತುಲಾಭಾರ ಕಾರ್ಯಕ್ರಮ ನೆರವೇರುವುದು.
27 ರಂದು ಸಾಯಂಕಾಲ 8 ಗಂಟೆಗೆ ಪುರಾಣ ಕಾರ್ಯಕ್ರಮ ಮಹಾಮಂಗಲ,ಧರ್ಮಸಭೆ ನಾದರಾತ್ರಿ,ಶಿವರಾತ್ರಿ,ಶಿವ ಭಜನೆ, ನಿರಂತರವಾಗಿ ಜರುಗುವುದು,28 ರಂದು ಸಾಯಂಕಾಲ 5:30 ಗಂಟೆಗೆ ತೇರು ಎಳೆಯುವುದರ ಮೂಲಕ ಶ್ರೀ ಕರಿಬಸವೇಶ್ವರರ ಮಹಾ ರಥೋತ್ಸವಕ್ಕೆ ಚಾಲನೆ ನೀಡುವರು.
ನಂತರದಲ್ಲಿ ಭಾರ ಎತ್ತುವುದು ಹಾಗೂ ವಿವಿಧ ಸ್ಪರ್ಧೆಗಳು ಏರ್ಪಡಿಸಿ ವಿಜೇತರಿಗೆ ಶ್ರೀಗಳಿಂದ ಬೆಳ್ಳಿ ಕಡಗ ತೊಡಿಸಲಾಗುವುದು,ಈ ಜಾತ್ರಾ ಮಹೋತ್ಸವದಲ್ಲಿ ಸಗರ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದು ಪುನೀತರಾಗಿರಿ ಎಂದು ನುಡಿದರು.