ನಿಧನ ವಾರ್ತೆ: ರಾಜಕುಮಾರ ಎಂ.ಕೋರವಾರ , ನ್ಯಾಯವಾದಿ ಇನ್ನಿಲ್ಲ
ನಿಧನ ವಾರ್ತೆ: ರಾಜಕುಮಾರ ಎಂ.ಕೋರವಾರ , ನ್ಯಾಯವಾದಿ ಇನ್ನಿಲ್ಲ
ಜನಪರ ನ್ಯಾಯವಾದಿ ಉಚ್ಚ ನ್ಯಾಯಾಲಯದಲ್ಲಿ ಸರಕಾರಿ ವಕೀಲರಾಗಿದ್ದ ರಾಜಕುಮಾರ ಎಂ.ಕೋರವಾರ (48 ವರ್ಷ) ಅವರು ಇಂದು ಸಂಜೆ 4 ಗಂಟೆಗೆ ಅಕಾಲಿಕ ಮರಣ ಹೊಂದಿದ್ದಾರೆ.
ಅವರಿಗೆ ಪತ್ನಿ ಮತ್ತು ಎರಡು ಮಕ್ಕಳು ಇದ್ದಾರೆ , ಅವರ ಅಂತಿಮ ಸಂಸ್ಕಾರ ನಾಳೆ ಸೋಮವಾರ ದಿನಾಂಕ 7-10-2024 ರಂದು ಮಧ್ಯಾಹ್ನ 4 ಗಂಟೆಗೆ ಕಲಬುರಗಿ ಜಿಲ್ಲೆ, ಚಿಂಚೋಳಿ ತಾಲೂಕಿನ ಗಡಿಕೋಶ್ವರ ಗ್ರಾಮದ ಸ್ವಂತ ಮಾಗಿ ಜಮೀನಿನಲ್ಲಿ ನಡೆಯಲಿದೆ.
ಕಲಬುರಗಿ ಹೈಕೋರ್ಟ್ ನಲ್ಲಿ ಸರ್ಕಾರದ ಪರ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು,ಇವರು ಕಾನೂನು ಶಿಕ್ಷಣ ಪಡೆದ ನಂತರ ಮೊದಲು, ಖ್ಯಾತ ದಿವಾಣಿ ನ್ಯಾಯಾಲಯದ ವಕೀಲರಾಗಿದ್ದ ಲಿಂ.ಸುಭಾಷಚಂದ್ರ ಕಿಣಗಿ ಅವರ ಹತ್ತಿರ ಸೇವೆಮಾಡಿ ವಿವಿಧ ಮೊಕದ್ದಮೆಗಳನ್ನು ಗೆದ್ದಿದ್ದಾರೆ,
ಕಲಬುರಗಿ ಹೈಕೋರ್ಟ್ ನ್ಯಾಯಲಯ ಸ್ಥಾಪನೆಗಾಗಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಇತ್ತೀಚಿಗೆ ಸರಕಾರಿ ಹುದ್ದೆಯಲ್ಲಿ ನೇಮಕ ಗೊಂಡಿದ್ದರು, ಅಕಾಲಿಕ ಮರಣದಿಂದ ನ್ಯಾಯಬಳಗಕ್ಕೆ ಅತೀವ ದುಃಖ ಉಂಟಾಗಿದೆ.
ನ್ಯಾಯಾಧೀಶರಾಗಬೇಕೆನ್ನುವ ಕನಸು ಕಂಡಿದ್ದ, ಅವರ ಕನಸು ಕನಸಾಗಿಯೇ ಉಳಿಯಿತು.
ಕೋರವಾರ ಅವರನ್ನು ಕಳೆದುಕೊಂಡ ಕಲಬುರಗಿ ಜನತೆ ಅನಾಥರಾಗಿದ್ದು ,ವಕೀಲರ ಬಳಗಕ್ಕೆ ತುಂಬಲಾರದ 'ನಷ್ಟ ಉಂಟಾಗಿದೆ. ಎಂದು ಕ.ಕ.ಯುವ ನ್ಯಾಯವಾದಿಗಳ ಹಿತರಕ್ಷಣಾ ಹೋರಾಟ ಸಮಿತಿಯ ಪದಾಧಿಕಾರಿಗಳು ಶೋಕ ವ್ಯಕ್ತ ಪಡಿಸಿದ್ದಾರೆ.
ಆ ದೇವರು ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾತಿಥಿಸಿದ್ದಾರೆ.