ಜನಮನಕೆ ಹತ್ತಿರ ಕಾವ್ಯ ರಚಿಸಲಿ- ಡಾ.ಶೀಲಾದೇವಿ

ಜನಮನಕೆ ಹತ್ತಿರ ಕಾವ್ಯ ರಚಿಸಲಿ- ಡಾ.ಶೀಲಾದೇವಿ
ಹುಲಸೂರು:ಕಾವ್ಯ ಜನಪರ ನಿಲುವು ಹೊಂದಿದೆ ಕಲ್ಯಾಣದಲ್ಲಿ ಅನುಭವ ಮಂಟಪದ ಮೂಲಕ ಅನುಭವದ ಮೂಲಕ ಕಾವ್ಯ ರಚಿಸಿದ್ದ ಜನಮನಕೆ ಹತ್ತಿರ ವಾಗುವ ಕಾವ್ಯ ರಚಿಸಬೇಕೆಂದು ಸಾಹಿತಿ ಡಾ.ಶೀಲಾದೇವಿ ಬಿರಾದಾರಬನುಡಿದರು
ಸರ್ವೋದಯ ಸಾಹಿತ್ಯ ಸಮ್ಮೇಳನದ ಎರಡನೆಯ ದಿನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾವ್ಯದಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕಾವ್ಯ ಆಶಯಗಳು ಇವತ್ತಿನ ಕಾವ್ಯದಲ್ಲಿ ತರಬೆರಕೆಂದರು.
ಕಾವ್ಯ ಪರಂಪರೆ ಸಾಮಾಜಿಕ ಚಿಂತನೆ ಕವಿತೆಗಳು ಮನುಷಗಯನ ಮನಸ್ಸು ಅರಳಿಸುತ್ತವೆ.ಕವಿಗಳು ಕವಿತೆ ಬರೆದರೆ ಸಾಲದು ಅಧ್ಯಯನ ಶೀಲರಾಗಬೇಕೆಂದು ಹಿರಿಯ ಸಾಹಿತಿ ಶಿವಸ್ವಾಮಿ ಚಿನಕೇರಿ ನುಡಿದರು
ಸರ್ವೋದಯ ಸಾಹಿತ್ಯ ಸಮ್ಮೇಳನದ ಎರಡನೆಯ ದಿನದ ಕವಿಗೋಷ್ಠಿಯ ಆಶಯ ನುಡಿ ಆಡಿದರು ಕಾವ್ಯದ ಸತ್ವದಿಂದ ಜನಮನ ತಲುಪಲಿ ಎಂದರು
ಕವಿಗಳಾದ ಡಾ.ಸುಖದೇವಿ ಘಂಟೆ,ನೀಲಕಂಠ ಕುರಬಖೇಳಗಿ, ಮಹಾದೇವ ಸುಕಾಲೆ,ರಾಕೇಶ್ ರಾಜ ಗುರು,ಡಾ.ಸಿದ್ಧಪ್ಪ ಹೊಸಮನಿ,ಗೌತಮ ಕಾಂಬಳೆ,ಮಾರುತಿ ಮರಖಲ್,ರಾಜು ಮಾರುತಿ ಪವರ್,ಅವಿನಾಶ ಸೋನೆ,ಅಜಿತ್ ಎನ್,ಡಾ.ಅವಿನಾಶ ದೇವನೂರ,ರವಿದಾಸ ಕಾಂಬಳೆ,ರವಿದಾಸ ಕಾಂಬಳೆ, ಸೂರ್ಯಕಾಂತ ಸಸಾನೆ,ವಿಜಯಕುಮಾರ ಚಟ್ಟಿ,ಕವನ ವಾಚಿಸಿದರು.
ಸುರೇಶ್ ಕಾನೇಕರ,
ಮಹಾಲಿಂಗದೇವರು ಸ್ವಾಗತಿಸಿದರು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು.ಆಕಾಶ ತೆಗನೂರು ವಂದಿಸಿದರು.