ಶಿಕ್ಷಕರನ್ನು ಪಾಲಕರನ್ನು ಗೌರವಿಸುವುದೇ ನಿಜವಾದ ಶಿಕ್ಷಣ

ಶಿಕ್ಷಕರನ್ನು ಪಾಲಕರನ್ನು ಗೌರವಿಸುವುದೇ ನಿಜವಾದ ಶಿಕ್ಷಣ

ಶಿಕ್ಷಕರನ್ನು ಪಾಲಕರನ್ನು ಗೌರವಿಸುವುದೇ ನಿಜವಾದ ಶಿಕ್ಷಣ 

ದೊಡ್ಡಪ್ಪ ಅಪ್ಪ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ವರ್ಷದ ವಿಜ್ಞಾನ ಚಟುವಟಿಕೆಗಳ ಮುಕ್ತಾಯ ಸಮಾರಂಭ ವಾರ್ಷಿಕೋತ್ಸವ  

 ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲಬುರ್ಗಿ ನಗರ ಪೊಲೀಸ್ ಆಯುಕ್ತರದ ಡಾ.ಶರಣಪ್ಪ ಢಗೆ ಅವರು ಮಾತನಾಡಿ ಪಾಲಕರನ್ನು ಮತ್ತು ಶಿಕ್ಷಕರನ್ನು ಗೌರವಿಸುವುದೇ ನಿಜವಾದ ಶಿಕ್ಷಣ ಎಂದರು .

ತಂದೆ ತಾಯಿಗಳು ಮಕ್ಕಳಿಗಾಗಿ ತ್ಯಾಗ ಮಾಡಿರುತ್ತಾರೆ ತಮ್ಮ ದುಡಿಮೆಯನ್ನು ಮಕ್ಕಳಿಗೆ ಖರ್ಚು ಮಾಡುತ್ತಾರೆ .ಮಕ್ಕಳು ಪಾಲಕರನ್ನು ಮತ್ತು ಶಿಕ್ಷಕರನ್ನು ಗೌರವಿಸುವುದು ಅವರ ವ್ಯಕ್ತಿತ್ವದ ಭಾಗವಾಗಿದೆ .ವಿದ್ಯಾರ್ಥಿ ಔಪಚಾರಿಕ ಶಿಕ್ಷಣದಲ್ಲಿ ಅಕ್ಷರ ಜ್ಞಾನವನ್ನು ಜ್ಞಾನವನ್ನು ಸಂಪಾದಿಸಿದರೆ ಸಮಾಜದಲ್ಲಿ ಅನೌಪಚಾರಿಕವಾಗಿ ಎಲ್ಲರಿಂದಲೂ ಒಂದೊಂದು ವಿಷಯವನ್ನು ಕಲಿಯುತ್ತಾನೆ . ವಿದ್ಯಾರ್ಥಿಗಳು ಸತತ ಪ್ರಯತ್ನವನ್ನು ರೂಢಿಸಿಕೊಳ್ಳಬೇಕು .ಸೋಲು ಗೆಲುವಿನ ಸೋಪಾನ .ಭವಿಷ್ಯ ರೂಪಿಸಿಕೊಳ್ಳಲು ಶ್ರಮವಹಿಸಿ ಅಧ್ಯಯನ ಮಾಡಬೇಕು ಏಕಾಗ್ರತೆಯಿಂದ ಅಧ್ಯಯನಶೀಲರಾಗಬೇಕು ಆಗ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು .

ಇನ್ನೋರ್ವ ಮುಖ್ಯ ಅತಿಥಿಗಳಾದ ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅನಿಲ ಕುಮಾರ ಬಿಡವೆ ಮಾತನಾಡಿ ಪಿಯುಸಿ ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಭವಿಷ್ಯವನ್ನು ರೂಪಿಸುತ್ತದೆ . ತುಂಬಾ ಜಾಗರೂಕರಾಗಿ ಪದವಿ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು .ಕಲ್ಬುರ್ಗಿ ಶೈಕ್ಷಣಿಕ ಹೆಬ್ ಆಗಿ ಬೆಳೆದಿದೆ . ಕಲ್ಬುರ್ಗಿಯಲ್ಲಿ ಎಲ್ಲಾ ರೀತಿಯ ಕೋರ್ಸುಗಳ ಓದಿಗೆ ಅವಕಾಶವಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನುಡಿದರು .

ಇನ್ನೋರ್ವ ಮುಖ್ಯ ಅತಿಥಿಗಳಾದ ನವಿರಾದ ಕೌಶಲ್ಯ ತರಬೇತಿದಾರ ಬೆಂಗಳೂರಿನ ರಮೇಶ್ ಉಮ್ರಾಣಿ ಅವರು ಪ್ರೌಢ ವಿದ್ಯಾರ್ಥಿಗಳ ಪಾಲನೆಯಲ್ಲಿ ಪಾಲಕರ ಪಾತ್ರ ವಿಷಯದ ಕುರಿತು ಮಾತನಾಡಿ ಕಲಿಕೆಯಲ್ಲಿ ಏಕಾಗ್ರತೆ ಮುಖ್ಯ ಎಂದರು .ಒಂದು ತರಗತಿಯಲ್ಲಿ ರಾಂಕ್ ಪಡೆದ ವಿದ್ಯಾರ್ಥಿ ಮತ್ತು ಫೇಲಾದ ವಿದ್ಯಾರ್ಥಿ ಇಬ್ಬರು ದಿನಾಲು ತರಗತಿಗೆ ಹಾಜರಾಗಿರುತ್ತಾರೆ .ವ್ಯತ್ಯಾಸ ಇಷ್ಟೇ ರಾಂಕ್ ಪಡೆದ ವಿದ್ಯಾರ್ಥಿ ಏಕಾಗ್ರತೆಯಿಂದ ತನ್ಮತೆಯಿಂದ ಪಾಠ ಆಲಿಸಿ ಅಧ್ಯಯನ ಮಾಡಿರುತ್ತಾನೆ. ಫೇಲಾದ ವಿದ್ಯಾರ್ಥಿ ಚಂಚಲ ಚಿತ್ತನಾಗಿರುತ್ತಾನೆ .ಒಬ್ಬ ವಿದ್ಯಾರ್ಥಿಗೆ ತನ್ನ ತಪ್ಪನ್ನು ಒಪ್ಪಿಕೊಳ್ಳುವ ತಿದ್ದಿಕೊಳ್ಳುವ ಗುಣವಿರಬೇಕು .ಆತ್ಮಹತ್ಯೆ ಹೇಡಿತನದ ಪ್ರತೀಕವಾಗಿವಾಗಿದೆ .ಈಸಬೇಕು ಇದ್ದು ಜಯಿಸಬೇಕು . ವಿದ್ಯಾರ್ಥಿಗಳು ಸಾಮಾಜಿಕ ಹೊಂದಾಣಿಕೆಯ ಗುಣ ಕಲಿತುಕೊಳ್ಳಬೇಕು ಅದೇ ನಿಜವಾದ ಶಿಕ್ಷಣ .ದೈಹಿಕ ಆರೋಗ್ಯ ಇರದಿದ್ದರೆ ಮಾನಸಿಕ ಬೌದ್ಧಿಕ ಆರೋಗ್ಯ ಇರಲು ಸಾಧ್ಯವಿಲ್ಲ .ಆದ್ದರಿಂದ ಶರೀರಿಕ ಶಕ್ತಿ ಬೆಳೆಸಿಕೊಳ್ಳಬೇಕು ವಿದ್ಯಾರ್ಥಿಗಳು ಸೃಜನಶೀಲತೆ ಬೆಳೆಸಿಕೊಳ್ಳಬೇಕು. ವ್ಯಕ್ತಿ ಭಾವನಾತ್ಮಕ ಸಮತೋಲನ ಕಾಯ್ದುಕೊಳ್ಳಬೇಕು ಎಂದು ನುಡಿದರು .

ಅಧ್ಯಕ್ಷೀಯ ನುಡಿಗಳನ್ನಾಡಿದ ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಮಕೃಷ್ಣ ರೆಡ್ಡಿ ಅವರು ಮಾತನಾಡಿ ಕಡಿಮೆ ಅವಕಾಶಗಳಲ್ಲಿ ಅತ್ಯುನ್ನತ ಅಧ್ಯಯನ ಮಾಡಿ ಸಾಧಿಸಿದ ವ್ಯಕ್ತಿಗಳು ನಮಗೆ ಮಾದರಿಯಾಗಬೇಕು. ವಿದ್ಯಾರ್ಥಿಗಳು ಅವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು .ಪ್ರಾಚಾರ್ಯರದ ವಿನೋದ್ ಕುಮಾರ್ ಎಲ್ ಪತಂಗೆ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು .

ಸರ್ವಾಂಗೀಣ ವ್ಯಕ್ತಿತ್ವ ಹೊಂದಿರುವ ವಿದ್ಯಾರ್ಥಿಗಳಿಗೆ ಕೊಡ ಮಾಡುವ (ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ) ಸದರಿ ಶೈಕ್ಷಣಿಕ ವರ್ಷದ ಹೊರಹೋಗುವ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ವಾಸವಿ ,ಬಸಂತ್ ರೆಡ್ಡಿ ,ವೈಷ್ಣವಿ ,ಕಿಶೋರ್ ಅವರು ಪಡೆದುಕೊಂಡರು . ವಿಜ್ಞಾನ ಉತ್ಸವ- ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು . ಕುಮಾರ ಗಣೇಶ್ ಪಾಟೀಲ್ ಮತ್ತು ಕುಮಾರಿ ಗೌರಮ್ಮ ಪಾಟೀಲ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಜರುಗಿತು .ಸಂತೋಷ್ ಬೋರಟೆ ಅವರು ಸ್ವಾಗತಿಸಿದರು .ಸಿದ್ದರಾಮ್ ಅಮರೇ ಮತ್ತು ವಿದ್ಯಾಶ್ರೀ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು .ಅರುಣ ಕುಮಾರ್ ವಂದಿಸಿದರು .ಡಾ. ಆನಂದ ಸಿದ್ದಾಮಣಿ ಮತ್ತು ಭಾಗ್ಯವಂತಿ ಪಾಟೀಲ ಅವರು ನಿರೂಪಿಸಿದರು .