ಅಂತರ್ ಜಿಲ್ಲಾ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ಕ್ಯಾಂಬಲ್ಸ್ ಶಾಲೆ ಹಾಗೂ ಎಸ್ ಆರ್ ಎನ್ ಮೆಹತಾ ಶಾಲೆಯ ಕ್ರೀಡಾಪಟುಗಳು ಆಯ್ಕೆ

ಅಂತರ್ ಜಿಲ್ಲಾ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ಕ್ಯಾಂಬಲ್ಸ್ ಶಾಲೆ ಹಾಗೂ ಎಸ್ ಆರ್ ಎನ್ ಮೆಹತಾ ಶಾಲೆಯ ಕ್ರೀಡಾಪಟುಗಳು ಆಯ್ಕೆ
ಕಲಬುರಗಿ: ಹ್ಯಾಂಡ್ ಬಾಲ್ ಫೆಡರೇಶನ್ ಆಫ್ ಇಂಡಿಯಾ ರವರು ತೆಲಂಗಾಣ ರಾಜ್ಯದ ಗಚ್ಚಿ ಬೊಲಿಯಲ್ಲಿ ಆಯೋಜಿಸಿರುವ ಎರಡನೇ ಅಂತರ್ ಜಿಲ್ಲಾ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ಕಲ್ಬುರ್ಗಿ ಜಿಲ್ಲೆಯ ಕ್ಯಾಂಬಲ್ಸ್ ಶಾಲೆ ಮತ್ತು ಎಸ್ ಆರ್ ಎನ್ ಮೆಹತಾ ಶಾಲೆಯ ಕ್ರೀಡಾಪಟುಗಳು ಆಯ್ಕೆ ಯಾಗಿದ್ದಾರೆ.
ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಗುಲ್ಬರ್ಗ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಡಿಯಲ್ಲಿ ತರಬೇತಿ ನಿರತ ಕ್ರೀಡಾಪಟುಗಳು ಹ್ಯಾಂಡ್ ಬಾಲ್ ಫೆಡರೇಶನ್ ಆಫ್ ಇಂಡಿಯಾ ರವರು ತೆಲಂಗಾಣ ರಾಜ್ಯದ ಗಚ್ಚಿಬೋಲಿಯಲ್ಲಿ ದಿನಾಂಕ 17.2.2025 ರಿಂದ 20.02.2025 ರವರೆಗೂ ಆಯೋಜಿಸಿರುವ ಎರಡನೇ ಅಂತರ ಜಿಲ್ಲಾ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ನಗರದ ಕ್ಯಾಂಬಲ್ ಶಾಲೆ ಮತ್ತು ಎಸ್ ಆರ್ ಎನ್ ಮೆಹತಾ ಕ್ರೀಡಾಪಟುಗಳು ಆಯ್ಕೆಯಾಗಿದ್ದು ತಂಡದ ವ್ಯವಸ್ಥಾಪಕರಾಗಿ ಮಯೂರ್ ತಂಡದ ತರಬೇತುದಾರರಾಗಿ ಶಶಾಂಕ್ ಪಾಟೀಲ್ ರವರಿಗೆ ಅಮೃತ ಅಷ್ಟಗಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಈರಣ್ಣ ಪಾಟೀಲ್ ಜಳಕಿ ಅಧ್ಯಕ್ಷರು ಗುಲ್ಬರ್ಗ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್, ದತ್ತಾತ್ರೆ ಕೆ ಜೇವರ್ಗಿ ಕಾರ್ಯದರ್ಶಿಗಳು, ಗುಲ್ಬರ್ಗ ಜಿಲ್ಲಾ ಹ್ಯಾಂಬಲ್ ಅಸೋಸಿಯೇಷನ್ ಪ್ರವೀಣ್ ಪುಣೆ ತರಬೇತಿದಾರರು ಬಾಸ್ಕೆಟ್, ಬಾಲ್ ಬಸವರಾಜ್ ದೈಹಿಕ ಶಿಕ್ಷಕರು ಎಸ್ ಆರ್ ಎನ್ ಮೆಹತ ಶಾಲೆ ಇವರುಗಳು ಶುಭ ಹಾರೈಸಿದ್ದಾರೆ. ಎಂದು ಗುಲ್ಬರ್ಗ ಜಿಲ್ಲಾ ಹ್ಯಾಂಡಲ್ ಅಸೋಸಿಯೇಷನ್ ಕಾರ್ಯದರ್ಶಿ ದತ್ತಾತ್ರೇಯ ಜೇವರ್ಗಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.