ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಮತ್ತು ಲಸಿಕೆ ಕಾರ್ಯಕ್ರಮ ಜರುಗಿತು.

ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಮತ್ತು ಲಸಿಕೆ ಕಾರ್ಯಕ್ರಮ ಜರುಗಿತು.
ಕಲಬುರಗಿ: ನಗರದ ನಗರೇಶ್ವರ ಶಾಲೆಯ ಸಂಗಯ್ಯ ಮುಕ್ಕಾ ಸಭಾಗೃಹದಲ್ಲಿ ಶ್ರೀ ನಗರೇಶ್ವರ ವೆಲ್‌ಫೇರ್ ಸೊಸೈಟಿ ಮತ್ತು ದಿ.ಕಮ್ಯೂನಿಟಿ ಕನೆಕ್ಟರ್, ಬೆಂಗಳೂರಿನ ಎಚ್‌ಡಿಆರ್ ಹೆಲ್ತ್ಕೇರ್ ಫೌಂಡೇಷನ್, ಕಲಬುರಗಿಯ ಆದಿತ್ಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಮತ್ತು ಲಸಿಕೆ ಹಾಕುವ ಕಾರ್ಯಕ್ರಮ ಜರುಗಿತು. ಡಾ.ರಾಜೇಶ್ವರಿ ಪಾಲಾದಿ, ಅನುರಾಧಾ ಎಂ. ದೇಸಾಯಿ, ನಗರೇಶ್ವರ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಸಂಜೀವ ಗುಪ್ತಾ, ಪಿಐ ರಾಘವೇಂದ್ರ ಭಜಂತ್ರಿ, ರವಿಂದ್ರ ಮುಕ್ಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.