ಫ್ರೇ.17.ರಂದು ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿ ಪೀಠದಲ್ಲಿ ಭವ್ಯ ರಥೋತ್ಸವ ಹಾಗೂ ಲಕ್ಷ ದೀಪೋತ್ಸವ

ಫ್ರೇ.17.ರಂದು ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿ ಪೀಠದಲ್ಲಿ ಭವ್ಯ ರಥೋತ್ಸವ ಹಾಗೂ ಲಕ್ಷ ದೀಪೋತ್ಸವ

ಫ್ರೇ.17.ರಂದು ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿ ಪೀಠದಲ್ಲಿ ಭವ್ಯ ರಥೋತ್ಸವ ಹಾಗೂ ಲಕ್ಷ ದೀಪೋತ್ಸವ

ಕಲಬುರಗಿ: ತಾಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಮಹಾಲಕ್ಷ್ಮಿ ಶಕ್ತಿ ಪೀಠದ 38ನೇ ಸಂಭ್ರಮದ ಜಾತ್ರಾ ಮಹೋತ್ಸವ ಅಂಗವಾಗಿ ಫ್ರೇ. 17 .ರಂದು ಸಾಯಂಕಾಲ ಲಕ್ಷ ದೀಪೋತ್ಸವ ಹಾಗೂ 6.30. ಕ್ಕೆ ಭವ್ಯ ರಥೋತ್ಸವ, ಭಾವೈಕ್ಯ ಧರ್ಮಸಭೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುವವು. ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವ ದೇವಿ ಮುತ್ಯಾ ಇವರ ಅಪ್ಪಣೆಯ ಮೇರೆಗೆ ಜರಗಲಿದೆ. ವಿವಿಧ ಕ್ಷೇತ್ರದಲ್ಲಿ ಶ್ರಮಿಸಿದ ಗಣ್ಯರಿಗೆ ಸುಕ್ಷೇತ್ರ ಶ್ರೀನಿವಾಸ ಸರಡಗಿ ಶ್ರೀ ಶಕ್ತಿಪೀಠದ ವತಿಯಿಂದ ಪ್ರಶಸ್ತಿ ಪ್ರದಾನದೊಂದಿಗೆ ಗೌರವಿಸಲಾಗುವದು. 

 ತೇರಿನಮಠ, ಬಡದಾಳದ ಶ್ರೀ ಷ.ಬ್ರ. ಡಾ. ಚನ್ನಮಲ್ಲ ಶಿವಾಚಾರ್ಯರು ಇವರು ಸಾನಿಧ್ಯ ವಹಿಸುವರು. ಕಾರ್ಯಕ್ರಮದ ಮುಗಳನಾಗಾಂವ ಕಟ್ಟಮನಿ ಹಿರೇಮಠದ ಶ್ರೀ ಷ.ಬ್ರ . ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನೇತೃತ್ವ ವಹಿಸುವರು. ಶ್ರೀ ಷ.ಬ್ರ. ಅಭಿನವ ಮುರಗೇಂದ್ರ ಶಿವಾಚಾರ್ಯರು, ಶ್ರೀ ಮ.ನಿ.ಪ್ರ. ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯರು,ಶ್ರೀ ಮ.ನಿ.ಪ್ರ ಚರಲಿಂಗ ಮಹಾಸ್ವಾಮಿಗಳು, ಶ್ರೀ ಷ.ಬ್ರ. ಡಾ. ಚನ್ನರುದ್ರಮುನಿ ಶಿವಾಚಾರ್ಯರು, ಪೂಜ್ಯಶ್ರೀ ಡಾ.ಪರಮಾನಂದ ಮಹಾಸ್ವಾಮಿಗಳು, ಶ್ರೀ ಪೂಜ್ಯ ಶರಣಯ್ಯ ಸ್ವಾಮಿಗಳು, ಪೂಜ್ಯಶ್ರೀ ಡಾ. ಅಮೃತಪ್ಪ ದೇವಿ ಮುತ್ಯಾ, ಪೂಜ್ಯಶ್ರೀ ಚನ್ನಬಸವ ಶರಣರು ಇವರ ಸಮ್ಮುಖದಲ್ಲಿ ಜರುಗುವುದು. 

ಈ ಕಾರ್ಯಕ್ರಮವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಉದ್ಘಾಟಿಸುವರು. ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸುವರು. 

ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯಸಿಂಗ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ,ಜಗದೇವ ಗುತ್ತೇದಾರ,

ಹುಮನಾಬಾದ ಶಾಸಕ ಡಾ. ಸಿದ್ಧಲಿಂಗ ಪಾಟೀಲ, ಮಾಜಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ, ಮಾಜಿ ಸಚಿವ ಮಾಜಿ ರೇವುನಾಯಕ ಬೆಳಮಗಿ, ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ,ದೊಡ್ಡಪ್ಪಗೌಡ ಪಾಟೀಲ ನರಿಬೊಳ, ಬಿಜೆಪಿ ನಗರ ಅಧ್ಯಕ್ಷ ಚಂದ್ರಕಾAತ ಬಿ. ಪಾಟೀಲ, ಅ.ಭಾ.ವೀ.ಲಿಂ. ಮಹಾಸಭಾದ ಅಧ್ಯಕ್ಷ ಶರಣು ಮೋದಿ, ಬಿ.ಜೆ.ಪಿ. ಮುಖಂಡ ಶಿವಕಾಂತ ಮಹಾಜನ, , ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಮಾಜಿ ಮಹಾಪೌರ ಚಂದ್ರಿಕಾ ಪರಮೇಶ್ವರ, ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಅರುಣಕುಮಾರ ಎಸ್. ಪಾಟೀಲ, ಉದ್ದಿಮೇದಾರ ಸತೀಶ ವಿ. ಗುತ್ತೇದಾರ, ಕಾಂಗ್ರೆಸ್ ಮುಖಂಡ ನೀಲಕಂಠ ಮೂಲಗೆ, ಬಿ.ಜೆ.ಪಿ, ಮುಖಂಡ ನಿತೀನ ವಿ. ಗುತ್ತೇದಾರ, ಶಿವಾನಂದ ಪಾಟೀಲ, ರವಿ ಬಿರಾದಾರ ಕಮಲಾಪೂರ, ವೈಜಿನಾಥ ತಡಕಲ, ಪ್ರದೀಪ ವಾತಡೆ, ಡಾ.ವಿಕ್ರಮ ಸಿದ್ದಾರೆಡ್ಡಿ, ಸುನಿಲ ಎ. ಪಾಟೀಲ, ವಿನೋದ ಪಾಟೀಲ, ಹಾಗೂ ವಿವಿಧ ರಾಕೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸುವರು. 

ಶ್ರೀ ಸರಡಗಿ ಅನ್ನಪೂರ್ಣೇಶ್ವರಿ ಬಸವಕಲ್ಯಾಣ ಸಂಸ್ಥಾನ ಮಕ್ಕಳಿಂದ ಹಾಗೂ ಶ್ರೀ ಸರಡಗಿ ಶಕ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್ ಕಲಬುರಗಿ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ನಡೆವುದು. ಡಾ. ಶೋಭಾ ಆರ್.ಎಂ. ಮತ್ತು ಡಾ. ರಮೇಶ ಎಸ್.ಎಂ ಖ್ಯಾತ ವೈದ್ಯರು ಶೋಭಾ ಆಸ್ಪತ್ರೆ, ಬೆಂಗಳೂರು ಇವರಿಗೆ ವಿಶೇಷ ಸನ್ಮಾನಿಸಲಾಗುವುದು. 

ಅಂದು ಬೆಳಿಗ್ಗೆ 10 ರಿಂದ ಸಾಯಂಕಾಲ 4-00 ಗಂಟೆಗೆ ವರೆಗೆ ಯುನೈಟೇಡ್ ಆಸ್ಪತ್ರೆ ಕಲಬುರಗಿ ಇವರ ವತಿಯಿಂದ ಉಚಿತ ಆರೋಗ್ಯ ತಪಾಷಣೆ ಶಿಬಿರ ಹಮ್ಮಿಕೋಳಲಾಗುವುದು. ಶ್ರೀ ದೇವಿಯ ಪವಿತ್ರ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ,ಆಂಧ್ರಪ್ರದೇಶ ಹಾಗೂ ಗ್ರಾಮಸ್ಥರು, ಸಕಲ ಸದ್ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಬೆನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.