ಅತ್ಯಂತ ಕ್ಲಿಷ್ಟಕರ ಚಿಕಿತ್ಸೆ ನೀಡಿದ ಸುಜನಿ ತಾಯಿ-ಶಿಶು ಆರೈಕೆ

ಅತ್ಯಂತ ಕ್ಲಿಷ್ಟಕರ ಚಿಕಿತ್ಸೆ ನೀಡಿದ ಸುಜನಿ ತಾಯಿ-ಶಿಶು ಆರೈಕೆ
550ಗ್ರಾಂ. ಮಗುವಿಗೆ ಮರಳಿ ನವ ಚೈತನ್ಯ ನೀಡಿದ ಸುಜನಿ ಆಸ್ಪತ್ರೆ
ಅರ್ಧ ಕಿಲೋ ಕೂಸಿಗೆ ಮರುಜನ್ಮ ನೀಡಿದ ‘ಸುಜನಿ’ ಆಸ್ಪತ್ರೆ ವೈದ್ಯರು
ಕಲಬುರಗಿ: ಅವಧಿಪೂರ್ವ ಜನಿಸಿದ ಕೇವಲ 550 ಗ್ರಾಂ ಮಗುವಿಗೆ ನಿರಂತರ 58 ದಿನಗಳ ಕಾಲ ವಿಶೇಷ ಚಿಕಿತ್ಸೆ ನೀಡುವ ಮೂಲಕ ನವ ಚೈತನ್ಯ ನೀಡಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಹಾಗೂಮಕ್ಕಳ ತಜ್ಞ ಡಾ.ಸುಚೀತ ರೆಡ್ಡಿ ಹೇಳಿದರು.
ಕಲಬುರಗಿ ನಗರದ ಸುಜನಿ ತಾಯಿ ಮತ್ತು ಶಿಶು ಆರೈಕೆ ಕೇಂದ್ರದ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೂವರೆ ತಿಂಗಳ ಹಿಂದೆ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದ ಯಲ್ಲಮ್ಮ ಎಂಬ ಮಹಿಳೆಗೆ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ 3 ಮಕ್ಕಳು ಜನನ ಹೊಂದಿದ್ದು2 ಹೆಣ್ಣು ಹಾಗೂ 1 ಗಂಡು ಆಗಿದ್ದು ಒಂದು ಹೆಣ್ಣು ಮಗು 1.5 ಕೆ,ಜಿ, ಇನ್ನೊಂದು ಗಂಡು ಮಗು 1.2 ಕೆ.ಜಿ ಇನ್ನೋಂದು ಹೆಣ್ಣು ಮಗು 550 ಗ್ರಾo ಇದ್ದಿದು ತುಂಬಾ ಹೈ ರಿಸ್ಕ್ ಪ್ರಕರಣವಾಗಿದ್ದು ಕೂಡಲೇ ಅಲ್ಲಿನ ವೈದ್ಯರು ಸುಜನಿ ತಾಯಿ ಮತ್ತು ಶಿಶು ಆರೈಕೆ ಕೇಂದ್ರಕ್ಕೆ ಚಿಕಿತ್ಸೆಗೆ ಕಳುಹಿಸಿದ್ದರು.
ಅವಧಿ ಪೂರ್ವ ಹುಟ್ಟುವ ಮಕ್ಕಳಲ್ಲಿ ಶೇ.10ರಷ್ಟು ಮಕ್ಕಳಿಗೆ ಅಪಾಯ ಇರುತ್ತದೆ. ಅದರಲ್ಲೂ ಕೇವಲ 550 ಗ್ರಾಂ ತೂಕ ಹೊಂದಿರುವ ಮಗು ಬದುಕುವುದು ಮಾತ್ರ ಕಷ್ಟವಾಗಿತ್ತು. ಆದರೆ, ಈ ವೇಳೆ ಮಗುವಿನ ಕುಟುಂಬ ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಮಗುವಿನ ತೂಕ ಹೆಚ್ಚಳ ಮಾಡಲಾಯಿತು ,ಸಧ್ಯ ಮಗು 1.5 ಕೆಜಿ ತೂಕ ಹೊಂದಿದ್ದು ಉತ್ತಮ ಆರೋಗ್ಯದಿಂದ ಇದೆ ಎಂದು ಹೇಳಿದರು.
ಮಕ್ಕಳ ತಜ್ಣ ವೈದ್ಯ ಡಾ.ನಾಗರಾಜ್ ಕನಕೇರಿ ಮಾತನಾಡಿ ಮಗುವಿಗೆ ನವ ಚೈತನ್ಯ ನೀಡಲು ಮುಖ್ಯ ಕಾರಣವಾಗಿದ್ದು ಗೋಲ್ಡನ್ ಅವರ ಬಳಕೆಯಲ್ಲಿ ಆ ಮಗುವಿನಲ್ಲು ಬೆರೆ ಆಸ್ಪತ್ರೆಯಿಂದ ನಮ್ಮ ಆಸ್ಪತ್ರೆಗೆ ವರ್ಗಯಿಸುವಾಗ ತುಂಭಾ ಸುಷ್ಮವಾಗಿ ವರ್ಗಾಯಿಸಬೇಕಾಗುತ್ತದೆ ಪ್ಲಸಿಕ್ ರ್ಯಾಪ್ ನಲ್ಲಿ ಪ್ರತೇಕ ಅಂಬ್ಯೂಲೇನ್ಸ ನಲ್ಲಿ ತುಂಬಾ ಸುಷ್ಮವಾಗಿ ಕಾಳಜಿ ವಹಿಸಿ ವರ್ಗಾಯಿಸಬೇಕಾಯಿತು, ಬಂದ ತಕ್ಷಣ ಮಗುವಿನ ಚಿಕಿತ್ಸೆ ಆರಂಭಿ ಸಲಾಯಿತು. ಮಗು ಬದುಕುಳಿಯುವ ಸಂಭವ ಶೇ.10%ಕ್ಕಿಂತ ಕಡಿಮೆ ಇತ್ತು. ಇದೊಂದು ಕ್ಲಿಷ್ಟಕರ ಚಿಕಿತ್ಸಾ ವಿಧಾನವಾಗಿತ್ತು. ಆದರೆ, ಅದನ್ನು ಎಲ್ಲ ವೈದ್ಯರು, ನರ್ಸಿಂಗ್ ತಂಡ ನಿಭಾಯಿಸಿಕೊಂಡು ಮಗುವಿನ ಆರೈಕೆ ಮಾಡಿದ್ದರಿಂದ ಮಗು ಪರಿಪೂರ್ಣ ಆರೋಗ್ಯ ಪಡೆದಿದೆ ಎಂದು ಹೇಳಿದರು.
ಅವಧಿಗೂ ಮುನ್ನ ಜನಿಸಿದ ಮಗುವಿನ ಶ್ವಾಸಕೋಶ, ಜೀರ್ಣಾಂಗ ವ್ಯವಸ್ಥೆ ಸೇರಿ ದೇಹದ ಹಲವು ಅವಯವಗಳು ಪೂರ್ಣ ಬೆಳವಣಿಗೆ ಕಂಡಿರಲಿಲ್ಲ, ನಿಯಮಿತ ಚಿಕಿತ್ಸೆ ಜತೆಗೆ ಮಗುವಿಗೆ ಗರ್ಭದಲ್ಲಿ ನೀಡುವ ಬೆಚ್ಚನೆಯ ಭಾವ ನೀಡಬೇಕಾಗಿದ್ದು ಬಹು ಸವಾಲಿನ ಕೆಲಸವಾಗಿತ್ತು. ನಿತ್ಯ ತಾಯಿ ಮತ್ತು ಮಗುವಿನ ನಡುವೆ ಕೆಎಂಸಿ (ಕಾಂಗರೋ ಮದರ್ ಕೇರ್) ಚಿಕಿತ್ಸೆ ನೀಡುವ ಮೂಲಕ ಮಗು ವಿಗೆ ಆ ಭಾವ ನೀಡಲಾಯಿತು. ಆದ್ದರಿಂದ ಮಗು ಆರೋಗ್ಯ ಹೊಂದಿದೆ ಎಂದರು.
ಮಗು 550 ಗ್ರಾಮ ಇರುವುದಿಂದ ಕ್ಲಿಷ್ಟಕರ ಚಿಕಿತ್ಸಾ ವಿಧಾನವಾಗಿತ್ತು ಮಗು ತುಂಬಾ ಸುಷ್ಮವಾಗಿರುವುದರಿಂದ ಮಗುವಿಗೆ ಪ್ರತೇಕ (ಎನ.ಐ.ಸಿ.ಯು ) ನಲ್ಲಿ ಪ್ರತೇಕ ವೈದ್ಯರ ನಿಗ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು ಯಾಕೆ ಎಂದರೆ ಮಗುವಿಗೆ ಯಾವುದೆ ರೀತಿಯ ಇನಫೇಕ್ಷನ ಆಗಬಾರದು ಎಂದು ಪ್ರತೇಕ ಚಿಕಿತ್ಸೆ ನೀಡಲಾಗಿತ್ತು ಎಂದು ತಿಳಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಕ್ಕಳ ತಜ್ಞ ವೈದ್ಯರಾದ ಡಾ.ನಾಗರಾಜ ಕನಕೇರಿ, ಡಾ.ಬಾಪುರಾವ ಕಂಠಿ,ಡಾ.ನವೀನ ಕುಮಾರ ಡಾ. ಪೂರ್ಣಿಮಾ ಪಾಟೀಲ್ ಉಪಸ್ಥಿತರಿದ್ದರು.
ಆರ್ಥಿಕ ಪರಿಸ್ಥಿತಿ ಇಲ್ಲದ ಕಾರಣ ಡಿಸ್ಚಾರ್ಜ್ ಮಾಡಿ ಎಂದ ಪೋಷಕರು
3 ಮಕ್ಕಳ ಚಿಕಿತ್ಸೆಗೆ ನಮ್ಮ ಆಸ್ಪತ್ರೆಗೆ ದಾಖಲಾದಾಗ ಮಕ್ಕಳ ಪೋಷಕರ್ ಆರ್ಥಿಕ ಪರಿಸ್ಥಿತ ಸರಿ ಇಲ್ಲದ ಕಾರಣ ಅವರು ಚಕಿತ್ಸೆ ಪಡೆಯುವಾಗ ನಮ್ಮ ಬಳಿ ಹಣ ಇಲ್ಲ ನಮಗೆ ಡಿಸ್ಚಾರ್ಜ ಮಾಡಿ ಎಂದು ಪೋಷಕರು ಮನವಿ ಮಾಡಿದ್ದರು , ಆದರೆ ಮಗುವಿನ ಕುಟುಂಬ ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಆಸ್ಪತ್ರೆಯಲ್ಲಿ ಚಾಲ್ತಿಯಲ್ಲಿರುವ ಬಿ.ಪಿ.ಎಲ್ ಕಾರ್ಡನ ಎ.ಬಿ.ಆರ್.ಕೆ ಯೋಜನೆ ಅಡಿಯಲ್ಲಿ ಅತ್ಯಂತ ಕ್ಲಿಷ್ಟಕರ ಚಿಕಿತ್ಸೆ 58 ದಿನ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತ ನೀಡಲಾಗಿದೆ, ನಮ್ಮ ವೈದ್ಯರ ತಂಡದ ಮುಖ್ಯ ಉದ್ದೇಶ ಹಣವಾಗಿರಲಿಲ್ಲ ಮಗುವಿನ ಜೀವ ಉಳಿಸುವುದಾಗಿತ್ತು.
ಡಾ. ಸುಚೀತ ರೆಡ್ಡಿ ,ಆಸ್ಪತ್ರೆಯ ಮುಖ್ಯಸ್ಥರು ಸುಜನಿ
ಕೆಎಂಸಿ ಮಾರ್ಗೋಪಾಯಗಳ ಅನ್ವಯ ತಾಯಿ ಮತ್ತು ಶಿಶುವಿನ ಮಧ್ಯೆ ಆಹ್ಲಾದಕರ ‘ಪರಸ್ಪರ ಚರ್ಮ ಸ್ಪರ್ಶ’ ಇರುವಂತೆ ಎಚ್ಚರ ವಹಿಸಿದ್ದರಿಂದ ಶಿಶುವಿನ ಹೃದಯ ಮತ್ತು ಶ್ವಾಸನಾಳದ ಸಕ್ರಿಯ ಚಟುವಟಿಕೆ, ದೇಹದ ಉಷ್ಣತೆ, ನಿದ್ರೆ, ನರವ್ಯೂಹದ ಬೆಳವಣಿಗೆ ಈ 58 ದಿನಗಳಲ್ಲಿ ಸಾಧಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಬಾಪುರಾವ ಕಂಠಿ,ಮಕ್ಕಳ ತಜ್ಙ,ವೈದ್ಯರು.