ಸಮರ್ಥ ಶಿಕ್ಷಕರಿಂದಲೇ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ” - ಡಾ. ರಜಿನೀಶ ವಾಲಿ

ಸಮರ್ಥ ಶಿಕ್ಷಕರಿಂದಲೇ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ” - ಡಾ. ರಜಿನೀಶ ವಾಲಿ
ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರನಲ್ಲಿ ಬಿ.ಎಡ್. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ರಜಿನೀಶ ವಾಲಿ ಅವರು ಮಾತನಾಡಿ ಒಬ್ಬ ಸಮರ್ಥ ಶಿಕ್ಷಕ ಮಾತ್ರ ಒಂದು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದರ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ. ಜ್ಞಾನದ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಶಿಕ್ಷಣವು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನದ ಜೊತೆಗೆ ಸಾಮಾಜಿಕ ಅರಿವು ಕೂಡ ಬೆಳೆಸಿಕೊಡುವಂತದ್ದು ಎಂದು ಹೇಳಿ ವಿದ್ಯಾರ್ಥಿಗಳಿಗೆ ಭವಿಷ್ಯದ ಜೀವನ ಉಜ್ವಲವಾಗಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸುರೇಖಾ, ಕುಲಸಚಿವರು (ಆಡಳಿತ), ಬೀದರ ವಿಶ್ವವಿದ್ಯಾಲಯ, ಬೀದರ ಅವರು ಮಾತನಾಡಿ ಸತತ ಪರಿಶ್ರಮ, ನಿರಂತರ ಅಧ್ಯಯನದಿಂದ ವ್ಯಕ್ತಿ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಪ್ರಯತ್ನಶೀಲರಾಗಿ ತಮ್ಮ ಗುರಿಯನ್ನು ತಲುಪಬೇಕು. ಶಿಸ್ತು, ಸಮಯ ಪ್ರಜ್ಞೆ, ಗುರು-ಹಿರಿಯರಲ್ಲಿ ಗೌರವ ಮನೋಭಾವದಿಂದ ಇದ್ದಾಗ ಮಾತ್ರ ಅವರು ತಮ್ಮ ಸಾಧನೆ ಮಾಡಲು ಸಾಧ್ಯ ಹಾಗೂ ಸೂಕ್ತ ಮಾರ್ಗದರ್ಶನ ಪಡೆದಾಗ ಪ್ರತಿಫಲ ದೊರೆಯುತ್ತದೆ. ಶಿಕ್ಷಕ ವೃತ್ತಿಯು ಎಲ್ಲಾ ವೃತ್ತಿಗಳಲ್ಲಿಯೇ ಶ್ರೇಷ್ಠವಾದುದು, ಪವಿತ್ರವಾದುದು ಇದನ್ನು ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ನಿಭಾಯಿಸಬೇಕು ಎಂದು ಕರ್ತವ್ಯದ ಮಹತ್ವವನ್ನು ತಿಳಿಸಿದರು. ಜೊತೆಗೆ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯವು ಬಿ.ಎಡ್. ಕಾಲೇಜುಗಳಲ್ಲಿಯೇ ಮಾದರಿ ಶಿಕ್ಷಕರ ತರಬೇತಿ ಕೇಂದ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅತಿಥಿಗಳಾದ ಶ್ರೀ ಶಂಭುಲಿAಗ ವಾಲ್ದೊಡ್ಡಿ ಅವರು ಮಾತನಾಡಿ ಮಹಾವಿದ್ಯಾಲಯದಲ್ಲಿ ತಮ್ಮ ನೆನಪು ಹಾಗೂ ಅನುಭವಗಳ ಮೂಲಕ ಶಿಕ್ಷಕರ ವಿಶೇಷ ಅರ್ಹತೆ, ಸಾಮರ್ಥ್ಯಗಳ ಕುರಿತು ತಿಳಿಸಿದರು. ಬಿ.ವಿ.ಬಿ. ಮಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪಿ. ವಿಠ್ಠಲರೆಡ್ಡಿ ಅವರು ಮಾತನಾಡಿ ಭಾವಿ ಶಿಕ್ಷಕರು ತಮ್ಮ ಮನೆ, ಮಹಾವಿದ್ಯಾಲಯ, ಊರು ಹಾಗೂ ದೇಶದ ಹೆಸರನ್ನು ಬೆಳೆಸಬೇಕು, ಕೀರ್ತಿಯನ್ನು ತರಬೇಕು, ಯಶಸ್ಸು ಹೊಂದಬೇಕೆAದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಚ. ಕನಕಟ್ಟೆ ಮಾತನಾಡಿ ವಿದ್ಯಾರ್ಥಿಗಳು ನಿರಾಶವಾದಿಗಳಾಗದೇ ಆಶಾವಾದಿಗಳಾಗಿ, ಛಲವಾದಿಗಳಾಗಿ ಧನಾತ್ಮಕ ಚಿಂತನೆ ಮಾಡುತ್ತಾ ಪ್ರಗತಿಪರ ದೃಷ್ಟಿಕೋನ ಹೊಂದಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಸಂತೋಷಕುಮಾರ ಸಜ್ಜನ, ಶ್ರೀಮತಿ ವೀಣಾ ಜಲಾದೆ, ಶ್ರೀಮತಿ ಶಿಲ್ಪಾ ಹಿಪ್ಪರಗಿ, ರಾಜಕುಮಾರ ಸಿಂಧೆ, ಪಾಂಡುರAಗ ಕುಂಬಾರ, ಡಾ. ಸಿದ್ದರಾಮ ನೆಂಗಾ, ನೂರಪಾಶಾ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಪ್ರಶಿಕ್ಷಣಾರ್ಥಿಗಳಾದ ಶ್ರೀನಿವಾಸ ಸ್ವಾಗತಿಸಿದರು, ಕೆ.ಎಲ್. ಶಿವಶರಣಪ್ಪ, ಭಾಗಿರತಿ ಕೊಂಡಾ ನಿರೂಪಿಸಿದರು ಮತ್ತು ಸ್ವಾತಿ ವಂದಿಸಿದರು.
ವರದಿ: ಮಛಂದ್ರನಾಥ ಕಾಂಬ್ಳೆ