ಕೊಳಕೂರ ಸಹಕಾರ ಸಂಘದ ಚುನಾವಣೆಯಲ್ಲಿ ಶರಣಬಸಪ್ಪ ಅಧ್ಯಕ್ಷರಾಗಿ ಆಯ್ಕೆ

ಕೊಳಕೂರ ಸಹಕಾರ ಸಂಘದ ಚುನಾವಣೆಯಲ್ಲಿ ಶರಣಬಸಪ್ಪ ಅಧ್ಯಕ್ಷರಾಗಿ ಆಯ್ಕೆ

ಕೊಳಕೂರ ಸಹಕಾರ ಸಂಘದ ಚುನಾವಣೆಯಲ್ಲಿ ಶರಣಬಸಪ್ಪ ಅಧ್ಯಕ್ಷರಾಗಿ ಆಯ್ಕೆ

ಕೋಳಕೂರ, ಜೂ.30: ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ (ರಿ.) ಕೋಳಕೂರ ಇದರ ಆಡಳಿತ ಮಂಡಳಿ ಸದಸ್ಯರ ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ದಿನಾಂಕ 30-06-2025ರಂದು ಶಿಸ್ತಿನಲ್ಲಿ ಜರುಗಿತು.

ಚುನಾವಣೆಯಲ್ಲಿ ಶರಣಬಸಪ್ಪ ಬಿ. ಹೋನಿಕೇರಿ ಅವರು ಅಧ್ಯಕ್ಷರಾಗಿ ಹಾಗೂ ಅಕ್ಬರ್ ಅಲ್ಲಾಬಕ್ಷ ರಡ್ಡೇವಾಡಗಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಶಿವಪುತ್ರ ಬಿ. ಆಡಿನ್, ಪೀರಣ್ಣ ಬಿ. ಗುತ್ತಾ, ಬಸವರಾಜಗೌಡ ಮಾಲಿಪಾಟೀಲ್, ಪ್ರಭು ಕುಮ್ಮಣಿ, ಕಮಲಾಬಾಯಿ ದಿ. ಕಾಶಿರಾಗೌಡ  ಪಾಟೀಲ್, ಜಗದೇವಪ್ಪ ಎಸ್. ಪರಸಗೊಂಡ, ರಾಜು ರದ್ದೇವಾಡಗಿ, ಈರಮ್ಮ ದೇವೇಂದ್ರಪ್ಪ ಅಷ್ಟಗಿ, ಪ್ರಭಾಕರ್ ಕುಮ್ಮಣಿ ಹಾಗೂ ಸಿದ್ದರಾಮ್ ಡಿ. ಕಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಚುನಾವಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಮನೋಹರ್ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಹೊನ್ನಪ್ಪ ಸಾಹು ಹೋನಿಕೇರಿ, ಮುತ್ತಪ್ಪ ಪೂಜಾರಿ, ಮಲ್ಲಣ್ಣ ಕುಲಕರ್ಣಿ, ಭಾಗಣ್ಣ ಮುತ್ತಪ್ಪ ಆಡಿನ್, ಬಸ್ಸುಗೌಡ ಪಾಟೀಲ್, ಈರಣ್ಣ ನಾಯ್ಕೋಡಿ ಹಾಗೂ ಸಂಘದ ಕಾರ್ಯದರ್ಶಿ ಶ್ರೀಶೈಲ್ ಆಡಿನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಶಾಂತಲಿಂಗ ಪಾಟೀಲ್ ಅವರು ಮಾತನಾಡಿ, ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲ ರಾಜಕೀಯ ಮುಖಂಡರಿಗೆ ರೈತರಿಗೂ ಕೃತಜ್ಞತೆ ತಿಳಿಸಿ, ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಸನ್ಮಾನಿಸಿದರು.