ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿಗೆ NPTEL ವಿಶೇಷ ಪ್ರಶಸ್ತಿ, ಪ್ರಾಧ್ಯಾಪಕಿ ಡಾ ಜಯಶ್ರೀ ಅಗರಖೇಡ NPTEL ರಾಯಭಾರಿ

ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿಗೆ NPTEL ವಿಶೇಷ ಪ್ರಶಸ್ತಿ, ಪ್ರಾಧ್ಯಾಪಕಿ ಡಾ ಜಯಶ್ರೀ ಅಗರಖೇಡ NPTEL ರಾಯಭಾರಿ

ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿಗೆ NPTEL ವಿಶೇಷ ಪ್ರಶಸ್ತಿ, ಪ್ರಾಧ್ಯಾಪಕಿ ಡಾ ಜಯಶ್ರೀ ಅಗರಖೇಡ NPTEL ರಾಯಭಾರಿ

ಕಲಬುರಗಿಯ PDA ಕಾಲೇಜ್ ಆಫ್ ಇಂಜಿನಿಯರಿಂಗ್, NPTEL ಸಂಸ್ಥೆ ಮೂಲಕ ಆನ್‌ಲೈನ್ ಕಲಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ NPTEL ವಿಶೇಷ ಸಕ್ರಿಯ ಭಾಗವಹಿಸುವಿಕೆ ವಿಭಾಗದಲ್ಲಿ ಪ್ರಶಸ್ತಿಗೆ ಬಾಜನವಾಗಿದೆ, ಸದರಿ ಪ್ರಶಸ್ತಿಯನ್ನು IIT ಮದ್ರಾಸ್‌ನಲ್ಲಿ SWAYAM - NPTEL ಆಯೋಜಿಸಿದ SPOC ಫೆಲಿಸಿಟೇಶನ್ ಕಾರ್ಯಾಗಾರದಲ್ಲಿ PDA ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿಗೆ ನೀಡಲಾಯಿತು.

ಕಾಲೇಜಿನ ಪರವಾಗಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಹಾಗು ಕಾಲೇಜು ಫ್ಯಾಕಲ್ಟಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ನಿರ್ದೇಶಕಿ ಡಾ. ಜಯಶ್ರೀ ಅಗರಖೇಡ್,ನಿರ್ದೇಶಕಿ ಅವರು ಕಾಲೇಜಿನ ಪರವಾಗಿ ಪ್ರಶಸ್ತಿ ಪಡೆದರು ಇದರೊಂದಿಗೆ ಸ್ಥಳೀಯ ಮಟ್ಟದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುತ್ತಿರುವುದನ್ನು ಗುರುತಿಸಿ ಅವರಿಗೆ ವೈಯುಕ್ತಿಕ ವಾಗಿ *ಪ್ರಶಂಸೆಯ ಪ್ರಮಾಣಪತ್ರವನ್ನು ನೀಡಿ, ಸಂಸ್ಥೆಯಲ್ಲಿ ಎನ್‌ಪಿಟಿಇಎಲ್‌ನ *ಬ್ರಾಂಡ್ ಅಂಬಾಸಿಡರ್* ಆಗಿ ಅವರನ್ನು ನೇಮಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಯಶ್ರೀ ಅಗರಖೇಡ್, "ಈ ಮನ್ನಣೆಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ಆನ್‌ಲೈನ್ ಕಲಿಕೆಯನ್ನು ಉತ್ತೇಜಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ನಾವು ಎನ್‌ಪಿಟಿಇಎಲ್ ಉಪಕ್ರಮದ ಭಾಗವಾಗಿರಲು ಹೆಮ್ಮೆಪಡುತ್ತೇವೆ ಮತ್ತು ಶೈಕ್ಷಣಿಕ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಶ್ರಮಿಸುತ್ತೇವೆ" ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಐಟಿ ಮದ್ರಾಸ್‌ನ ನಿರ್ದೇಶಕ ಪ್ರೊ.ವಿ.ಕಾಮಕೋಟಿ ವಹಿಸಿದ್ದರು, ಐಐಟಿ ಮದ್ರಾಸ್‌ನ ಔಟ್‌ರೀಚ್ ಮತ್ತು ಡಿಜಿಟಲ್ ಎಜುಕೇಶನ್ ಕೇಂದ್ರದ (ಕೋಡ್) ಅಧ್ಯಕ್ಷ ಪ್ರೊ.ಆಂಡ್ರ್ಯೂ ತಂಗರಾಜ್ ಮತ್ತು ಕೋಡ್‌ನ ಅಸೋಸಿಯೇಟ್ ಚೇರ್ ಪ್ರೊ.ವಿಘ್ನೇಶ್ ಮುತ್ತುವಿಜಯನ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಅವರು ಡಿಜಿಟಲ್ ಶಿಕ್ಷಣದ ಹೆಚ್ಚುತ್ತಿರುವ ಮಹತ್ವವನ್ನು ಒತ್ತಿಹೇಳಿದರು ಮತ್ತು NPTEL ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕಲಿಕೆಯನ್ನು ಹೆಚ್ಚಿಸುವ ತಮ್ಮ ಪ್ರಯತ್ನಗಳಿಗಾಗಿ ಸಂಸ್ಥೆಗಳನ್ನು ಶ್ಲಾಘಿಸಿದರು.

 IIT ಮದ್ರಾಸ್‌ನಲ್ಲಿನ SPOC ಫೆಲಿಸಿಟೇಶನ್ ಕಾರ್ಯಾಗಾರವು ಭಾರತದಾದ್ಯಂತ ವಿವಿಧ ಕಾಲೇಜುಗಳಿಂದ SPOC ಗಳನ್ನು ಒಟ್ಟುಗೂಡಿಸಿತು, ಅನುಭವಗಳನ್ನು ಹಂಚಿಕೊಳ್ಳಲು, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಆನ್‌ಲೈನ್ ಕಲಿಕೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸಲು ವೇದಿಕೆಯನ್ನು ಒದಗಿಸುತ್ತದೆ.

 ಎಚ್‌ಕೆಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಲ್ ಜಿ ನಮೋಶಿ, ಉಪಾಧ್ಯಕ್ಷರಾದ ಶ್ರೀ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಶ್ರೀ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಸ ಪಾಟೀಲ ಹಾಗೂ ಎಚ್‌ಕೆಇ ಶಿಕ್ಷಣ ಸಂಸ್ಥೆಯ ಎಲ್ಲ ಆಡಳಿತ ಮಂಡಳಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿ, ಸಾಧನೆಗೆ ಸಂತಸ ವ್ಯಕ್ತಪಡಿಸಿದರು.