ಎಸ್. ಎಲ್. ಬೈರಪ್ಪನವರ ನಿಧನಕ್ಕೆ ಹಾರಕೂಡ ಶ್ರೀ ಸಂತಾಪ

ಎಸ್. ಎಲ್. ಬೈರಪ್ಪನವರ ನಿಧನಕ್ಕೆ ಹಾರಕೂಡ ಶ್ರೀ ಸಂತಾಪ
ಸನ್ಮಾನ್ಯರಾದ ಎಸ್. ಎಲ್. ಬೈರಪ್ಪನವರು ವಿಶ್ವದ ಶ್ರೇಷ್ಠ ಕಾದಂಬರಿ ಕಾರರಲ್ಲಿ ಅಗ್ರಗಣ್ಯರು.
ಕನ್ನಡ ಸಾಹಿತ್ಯಕ್ಕೆ ಅನೇಕ ಅನುಭಾವ ಪೂರ್ಣ ಕಾದಂಬರಿಗಳನ್ನು ಕೊಟ್ಟಿದ್ದಾರೆ, ಇವರ ಅನೇಕ ಕಾದಂಬರಿಗಳು ಇಂಗ್ಲಿಷ್ ಭಾಷೆಗೆ ಅನುವಾದ ಗೊಂಡಿವೆ.
ಇವರ ಕಾದಂಬರಿ ಆಧಾರಿತ ಅನೇಕ ಚಲನ ಚಿತ್ರಗಳು ಪ್ರಸಿದ್ದಿ ಪಡೆದಿವೆ.
2024ರಲ್ಲಿ ಇವರಿಗೆ ಹಾರಕೂಡ ಮಠದಿಂದ "ಚನ್ನ ರೇಣುಕ ಬಸವ" ಪ್ರಶಸ್ತಿ ಕೊಟ್ಟಿದ್ದೇವೆ.
ಇವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯದ ಶ್ರೇಷ್ಠ ನಕ್ಷತ್ರ ಕಳಚಿದಂತಾಗಿದೆ.
ಇವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ, ಇವರ ಭೌತಿಕ ದೇಹ ಅಗಲಿದರೂ ಕೂಡ ಇವರ ಹೆಸರು ಸೂರ್ಯ ಚಂದ್ರ ಇರುವವರೆಗೂ ಜನಮಾನಸದ ಸ್ಮೃತಿ ಪಟಲದಲ್ಲಿ ಅಜರಾಮರವಾಗಿ ಉಳಿಯುತ್ತದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ತಿಳಿಸಿದ್ದಾರೆ.