ಕಲಮೂಡ ಪಿಕೆಪಿಎಸ್ ಅಧ್ಯಕ್ಷರಾಗಿ ರಾಜಕುಮಾರ ಗುರುಲಿಂಗಪ್ಪ ಕೋಟಿ ಆಯ್ಕೆ

ಕಲಮೂಡ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರಿ ಧುರೀಣ ರಾಜಕುಮಾರ್ ಕೋಟೆ ಆಯ್ಕೆ
ಕಮಲಾಪುರ: ತಾಲೂಕಿನ ಕಲಮೂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ, ಕಲಬುರಗಿ ಜನತಾ ಬಜಾರ್ ನಿರ್ದೇಶಕರೂ ಆದ ಸಹಕಾರಿ ಧುರೀಣ ರಾಜಕುಮಾರ್ ಕೋಟೆ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಲೋಕೇಶ್ ಮಲ್ಲರೆಡಿ ರೆಡ್ಡಿ ಆಯ್ಕೆಯಾಗಿದ್ದಾರೆ. ಇದಕ್ಕೂ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ ಅಶೋಕ್ ರಾಮಚಂದ್ರ , ಕಲ್ಯಾಣರಾವ ಶಂಕರೆಪ್ಪ, ರಾಜಕುಮಾರ್ ಗುರುಲಿಂಗಪ್ಪ ಕೋಟೆ, ರೇವಣಸಿದ್ದಪ್ಪ ರಾಮಲಿಂಗಪ್ಪ ಬಿರಾದಾರ,ಕೋಟೆ, ಲೋಕೇಶ್ ಮಲ್ಲರೆಡಿ, ಜಗದೇವಿ ಶಿವಶಂಕರಪ್ಪ, ತುಕಾರಾಮ ಪ್ರಭು, ಮೊನಪ್ಪ ಗುಂಡಪ್ಪ ಬಡಿಗೇರ, ಅಶೋಕ್ ರೆಡ್ಡಿ ಭೀಮರೆಡ್ಡಿ , ಸಿದ್ದಮ್ಮ ರೇವಣಸಿದ್ದಯ್ಯ, ಪ್ರಭಾವತಿ ವಿಲಾಸ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜ ಮಾಲಿ ಪಾಟೀಲ್, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ರಾಜಶೇಖರ ರಾಮಪೂರೆ, ಕಲಮೂಡ ಕೆ ಪಿ ಎಸ್ ಸಿಇಒ ನಾಗರಾಜ ಬಾರಾದಿ, ಮಾಣಿಕಪ್ಪ ಕೋಟಿ, ರವೀಂದ್ರ ಕರಿಕಲ್, ಮಾಣಿಕ್ ರೆಡ್ಡಿ, ಕಮಲಾಕರ್ ಬುಕ್ಕನ, ಬಸಯ್ಯ ಸ್ವಾಮಿ, ಶರಣಯ್ಯ ಸ್ವಾಮಿ ದಿನಸಿ,ಆನಂದ ಚವಾಣ್ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.
ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಲಬುರಗಿ ಜನತಾ ಬಜಾರ್ ನಿರ್ದೇಶಕರೂ ಆದ ರಾಜಕುಮಾರ್ ಕೋಟೆ ಮಾತನಾಡಿ, ಪಿಕೆಪಿಎಸ್ ಅಭಿವೃದ್ಧಿಗೆ ಹಾಗೂ ರೈತರಿಗೆ ಸಮರ್ಪಕ ಸಾಲ ವಿತರಣೆ, ಸಹಕಾರಿ ಯೋಜನೆ ಮತ್ತು ಕೃಷಿ ಪರಿಕರಗಳನ್ನು ಒದಗಿಸಲು ಡಿಸಿಸಿ ಬ್ಯಾಂಕ್ ಜೊತೆಗೂಡಿ ಹಗಲಿರುಳು ಕೆಲಸ ಮಾಡುವುದಾಗಿ ಹೇಳಿದರು.
ಅದರಲ್ಲೂ ಎಲ್ಲ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸ ಲಾಗುವುದು ಎಂದು ರಾಜಕುಮಾರ್ ಕೋಟೆ ಹೇಳಿದರು.
[ಕಲಮೂಡ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಸಹಕರಿಸಿ, ಅನಗತ್ಯ ಖರ್ಚು ತಡೆದು ಸಹಕಾರಿ ಸಂಘದ ಅಭಿವೃದ್ಧಿಗೆ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆಗಳು]
-ರಾಜಕುಮಾರ್ ಕೋಟೆ ಅಧ್ಯಕ್ಷರು,ಪಿಕೆಪಿಎಸ್ ಕಲಮೂಡ