ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ

ಕಲಬುರಗಿ : ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ದಿನಗೂಲಿ, ಕನಿಷ್ಠ ವೇತನ ಅಡುಗೆಯವರು, ಅಡುಗೆ ಸಹಾಯಕರು ಮತ್ತು ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿರುವನೌಕರರಿಗೆ ಕ್ಷೇಮಾಭಿವೃದ್ಧಿ ನೌಕರರೆಂದು ಆದೇಶ ನೀಡುವಂತೆ ಮತ್ತು ಇಲಾಖೆಯ ಆದೇಶದಂತೆ "ಸಮಾನ ಕೆಲಸಕ್ಕೆ ಸಮಾನ ವೇತನ" ನೀಡಿ ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಕರ್ಯ ನೀಡುವಂತೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಯ

ವಸತಿ ನಿಲಯಗಳ ದಿನಗೂಲಿ, ಕನಿಷ್ಠ ವೇತನ ನೌಕರರ ಸಂಘದ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದರುಗಡೆ ಧರಣ ಸತ್ಯಾಗ್ರಹ ನಡೆಸಲಾಯಿತು.

ಧರಣ ಸತ್ಯಾಗ್ರಹದ ನಂತರ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು. ಬೇಡಿಕೆ ಈಡೇರಿಸಿದ್ದರೆ ಆ.೨೪ ರಂದು ಕಲಬುರಗಿ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.

ಸಂಘದ ಮುಖಂಡರಾದ ಚಂದ್ರಶೇಖರ ಎ.ಕೋಳಿಗೇರಿ, ದಶರಥ ಕಲಗುರ್ತಿ, ಮಹೇಶ, ಮಲ್ಲಿಕಾರ್ಜುನ, ಬಾಬು, ಖಾಜಾಪಾಶಾ, ಶಶಿಕಾಂತ, ಸುಜಾತಾ, ರಾಜಶ್ರೀ, ಶೋಭಾ ಸೇರಿದಂತೆ ಮತ್ತಿತರರು ಧರಣ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.