ಸ್ವಾಮಿ ವಿವೇಕಾನಂದ ರವರ 162 ನೇ ಜನ್ಮ ದಿನದ ಪ್ರಯುಕ್ತ "ವಿವೇಕ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಪಾಟೀಲ ಚಾಲನೆ
ಸ್ವಾಮಿ ವಿವೇಕಾನಂದ ರವರ 162 ನೇ ಜನ್ಮ ದಿನದ ಪ್ರಯುಕ್ತ "ವಿವೇಕ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಪಾಟೀಲ ಚಾಲನೆ
ಕಲಬುರಗಿ: ನಗರದ ಪ್ರಿಯದರ್ಶಿನಿ ಕನ್ಯಾ ಪ್ರೌಢ ಶಾಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಸೌಭಾಗ್ಯ ಸಿರಿ ಸಾಮಾಜಿಕ ಸೇವಾ ಟ್ರಸ್ಟ್ (ರಿ ) ತ್ರೀಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ (ರಿ ) ಕಲಬುರಗಿ ಇವರ ಸಂಯುಕ್ತಶ್ರಯದಲ್ಲಿ ಸ್ವಾಮಿ ವಿವೇಕಾನಂದ ರವರ 162 ನೇ ಜನ್ಮ ದಿನದ ಪ್ರಯುಕ್ತ "ವಿವೇಕ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಅಭಿಷೇಕ್ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿ ಮಾತನಾಡಿ ವಿವೇಕಾನಂದ ಅವರ ಬಗ್ಗೆ ಹಾಗೂ ಮಹಿಳೆಯರು ಯಾವುದೆ ವಿಷಯದಲ್ಲಿ ಹಿಂದೆ ಇಲ್ಲ ಅವರಿಗೂ ಕೂಡ 40 ಶೇಕಡಾ ಮೀಸಲಾತಿ ಇದೆ ಎಲ್ಲಾ ವಿಷಯದಲ್ಲಿ ಅವರಿಗೆ ಹಕ್ಕು ಇದೆ ಎಂದು ವಿದ್ಯಾರ್ಥಿಗಳಿಗೆ ಒಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕೆಂದು ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮಾಜಿ ಸದಸ್ಯ ಸುರೇಶ ಬಡಿಗೇರ ಇವರು ವಿವೇಕಾನಂದ ಅವರ ಜೀವನ ಬಗ್ಗೆ ಹಾಗೂ ಅವರ ಕೊಡುಗೆ ಬಗ್ಗೆ ಬಹಳಷ್ಟು ಸ್ಪಷ್ಟವಾಗಿ ಸಹವಿಸ್ತಾರವಾಗಿ ಉಪನ್ಯಾಸ ಮಾಡಿದರು. ಮುಖ್ಯ ಅಥಿತಿಯಾದ ಕುಮಾರಿ ಮಾಲಾ ಕಣ್ಣಿ ಅವರು ವಿದ್ಯಾರ್ಥಿಗಳಿಗೆ ಯಾವ ರೀತಿ ಬೆಳೆಯ ಬೇಕೆಂದರೆ ಹುಟ್ಟು ಸಾರ್ಥಕವಾಗಿರ ಬೇಕು ಸತ್ತರು ಪ್ರಪಂಚ ನೆನೆಯಲು ಬೇಕು, ಹೆಣ್ಣು ಯಾವುದರಲ್ಲಿಯು ಅಭಲೇ ಅಲ್ಲ ಅವಳು ಸಭಲೆ ಹುಟ್ಟಿಸಿದ ತಂದೆ ತಾಯಿಗೆ ಧಕ್ಕೆ ಬರುವ ಕೆಲಸ ಯಾವತ್ತು ಮಾಡಬಾರದು ಎಂದು ಹೇಳಿದರು. ಪ್ರಿಯದರ್ಶಿನಿ ಶಾಲೆಯ ಮುಖ್ಯ ಗುರುಗಳಾದ ಚಂದ್ರಶೇಖರ ಎಚ್ ಪೋಲಕಪಲ್ಲಿ ಮಾತನಾಡಿದರು. ಟ್ರಸ್ಟ್ನ್ ಅಧ್ಯಕ್ಷೆ ಅಶ್ವಿನಿ ಚವ್ಹಾಣ ಸೇರಿದಂತೆ ಶಾಲೆಯ ಶಿಕ್ಷಕರ ವೃಂದದವರು, ಸಿಬ್ಬಂದಿವರ್ಗದವರು ಇದ್ದರು.
ನಂತರ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರಪಡಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.