ಬದುಕು ರೂಪಿಸಿಕೊಳ್ಳಲು ಸಾಹಿತ್ಯ ಕ್ಷೇತ್ರ ಪೂರಕ

ಬದುಕು ರೂಪಿಸಿಕೊಳ್ಳಲು ಸಾಹಿತ್ಯ ಕ್ಷೇತ್ರ ಪೂರಕ

ಠಾಣಾಕುಶನೂರನಲ್ಲಿ ಜನಪದ ನೃತ್ಯೋತ್ಸವ

ಬದುಕು ರೂಪಿಸಿಕೊಳ್ಳಲು ಸಾಹಿತ್ಯ ಕ್ಷೇತ್ರ ಪೂರಕ

ಕಮಲನಗರ : ಮಾನವ ತನ್ನ ಬದುಕನ್ನು ರೂಪಿಸಿಕೊಳ್ಳಲು ಜಾನಪದ ಸಾಹಿತ್ಯ ಕ್ಷೇತ್ರ ಪೂರಕ ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು. 

ತಾಲೂಕಿನ ಠಾಣಾಕುಶನೂರ ಗ್ರಾಮದಲ್ಲಿ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ನವದೆಹಲಿ, ಕರ್ನಾಟಕ ಜಾನಪದ ಪರಿಷತ್ತು ತಾಲೂಕಾ ಘಟಕ ಔರಾದ್(ಬಾ), ಗ್ರಾಮ ಪಂಚಾಯತ ಠಾಣಾಕುಶನೂರ ಹಾಗೂ ಪ್ರಸನ್ನ ಕಲೆ ಮತ್ತು ಸಾಂಸ್ಕೃತಿಕ ಟ್ರಸ್ಟ(ರಿ),ಸಂತಪೂರ ಸಹಯೋಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಜನಪದ ನೃತ್ಯೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜನಪದ ಸಂಸ್ಕೃತಿ ಎಲ್ಲ ಸಾಹಿತ್ಯ ಪ್ರಕಾರಗಳಿಗೆ ಮುಖ್ಯ ಪ್ರೇರಣೆಯಾಗಿದೆ, ಬದುಕಿನಲ್ಲಿ ತಾತ್ವಿಕತೆ ನೆಲೆಗಟ್ಟು ಮರೆಯಾಗಿ ತಂತ್ರಗಾರಿಕೆ ತುಂಬಿಕೊಂಡಿದೆ. ಜನಪದ ಸಾಹಿತ್ಯ ಆಕಾಶದಷ್ಟು ವಿಶಾಲ ಹಾಗೂ ಸಾಗರದಷ್ಟು ಆಳವಾಗಿದೆ. ಅದರಲ್ಲಿ ಬರುವ ಕಥೆ, ಗೀತೆ ಜನಪದ ಸಾಹಿತ್ಯ ಸೇರಿ ವಿಶ್ವ ಸಾಹಿತ್ಯದ ಮೂಲವನ್ನೆಲ್ಲ ಒಳಗೊಂಡಿರುವುದು ಜನಪದಗಳಲ್ಲಿ ಇರುವುದು ಎಂದರು.

ಸಂಸ್ಕೃತಿ, ಸಂಸ್ಕಾರ ಬೆಳೆಯಬೇಕಾದರೆ ಸಾಹಿತ್ಯ ಸೊಗಡನ್ನು ಓದುವ ಮನಸ್ಸುಗಳು ಅಗತ್ಯ. ಸಾಹಿತ್ಯ ಚೈತನ್ಯ ಶಕ್ತಿ. ನಮ್ಮ ಅಂತರಂಗದ ಅನುಭವತೆಯನ್ನು ಸೇರಿಸಿ ಅದರ ಜತೆಗೆ ನಾವು ಶ್ರಮಿಸಿದಾಗ ಸಾಹಿತ್ಯ, ಕಾವ್ಯದ ಹುಟ್ಟು ಸಾಧ್ಯ ಎಂದರು.

 ರಾಜಕುಮಾರ ಹೆಬ್ಬಾಳೆ ಅವರು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಆದ ಬಳಿಕ ಜಿಲ್ಲೆಯಲ್ಲಿ ಜಾನಪದ ಕಾರ್ಯಕ್ರಮಗಳಿಗೆ ಇನ್ನಷ್ಟು ಶಕ್ತಿ ಬಂದಿದೆ ಎಂದು ಹೆಬ್ಬಾಳೆ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪದ ಸಾಹಿತ್ಯ ಎಲ್ಲ ಭಾಷೆಗಳ ತವರೂರು. ಜನಪದ ಸಾಹಿತ್ಯ ಈಗ ನಶಿಸುತ್ತಿರುವುದು ಕಳವಳಕಾರಿ ವಿಷಯ ಎಂದರು. ದೇಶದ ಎಲ್ಲ ಹಳ್ಳಿಗಳಲ್ಲಿ ಜನಪದ ಸಾಹಿತ್ಯ ಕಣ್ಮರೆಯಾಗುತ್ತಿದೆ. ಜನಪದ ಸಾಹಿತ್ಯ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ಜನಪದ ಸಾಹಿತ್ಯ ನಮ್ಮ ಜೀವನದ ಹಾಸು ಹೊಕ್ಕಾಗಿದೆ. ಆದರೆ ನಾವೆಲ್ಲರೂ ಜನಪದ ಸಾಹಿತ್ಯ ಮರೆಯುತ್ತಿದ್ದೇವೆ. ಬರಿ ಸರಕಾರದ ಒಂದು ಇಲಾಖೆಯಿಂದ ಜನಪದ ಸಾಹಿತ್ಯ ಉಳಿಸಲು ಸಾಧ್ಯವಿಲ್ಲ. ಜನಪದ ಸಾಹಿತ್ಯ ಉಳಿಸಿ ಬೆಳೆಸುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಪ್ರಾಸ್ತಾವಿಕ ಮಾತನಾಡಿದರು. 

ಔರಾದ(ಬಾ)ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ, ಕಮಲನಗರ ತಹಸೀಲ್ದಾರ ಅಮಿತ‌ಕುಮಾರ ಕುಲಕರ್ಣಿ, ತಾಪಂ‌ ಎಡಿ ಶಿವಕುಮಾರ ಘಾಟೆ, ಔರಾದ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ಮುಕ್ತೆದಾರ್, ಶೀರಸ್ಥೆದಾರ ಶಿವಲಿಂಗ್, 

ಪಿಎಸ್ಐ ಸುಕಾನಂದ, ಮಾಜಿ ತಾಪಂ ಅಧ್ಯಕ್ಷ ಗಿರೀಶ ವಡಿಯಾರ್, ಗ್ರಾಪಂ ಸದಸ್ಯರಾದ ಶೇಷಪ್ಪ, ಅನಿಲ ಹೇಡೆ, ಜಾನಪದ ಪರಿಷತ್ ಸದಸ್ಯ ಸಂಗೀತಾ ಕಾಂಬಳೆ ಸೇರಿದಂತೆ ಅನೇಕರಿದ್ದರು. 

ಪಿಡಿಒ ಮನೋಹರ ಎಸ್ ಸ್ವಾಗತಿಸಿದರು. ಅನುದಾನಿತ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಶರಣಪ್ಪ ವಲ್ಲೇಪೂರೆ ನಿರೂಪಣೆ ಮಾಡಿದರು ಜಗನ್ನಾಥ ಜಿರಗೆ ವಂದಿಸಿದರು.

ಸಾಧಕರಿಗೆ ಸತ್ಕಾರ

ನವದೆಹಲಿಯ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿಗಳು ಡಾ!ರಾಜಕುಮಾರ ಹೆಬ್ಬಾಳೆ, ಕಲಬುರಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಶ್ರೀ ಸಿದ್ದಪ್ಪ ಮೂಲಗೆ, ಕಮಲನಗರ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀ ಸುನಿಲ ಕಸ್ತೂರೆ, ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಕಮಲಮ್ಮಾ ಅರ್ಜುನ್ ಅವರಿಗೆ ಈ ವೇಳೆ ಅಭಿನಂದನಾ ಫಲಕ ನೀಡುವ ಮೂಲಕ ವಿಶೇಷವಾಗಿ ಸತ್ಕರಿಸಲಾಯಿತು.

ಕಲಾ ತಂಡಗಳ ಭವ್ಯ ಮೆರವಣಿಗೆ

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ನವದೆಹಲಿ, ಕರ್ನಾಟಕ ಜಾನಪದ ಪರಿಷತ್ ಔರಾದ್, ಗ್ರಾಪಂ ಠಾಣಾಕುಶನೂರ ಹಾಗೂ ಪ್ರಸನ್ನ ಕಲೆ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಜನಪದ ನೃತ್ಯೋತ್ಸವ ಅಂಗವಾಗಿ ಆಯೋಜಿಸಿರುವ ಕಲಾ ತಂಡಗಳ ಭವ್ಯ ಮೆರವಣಿಗೆ ಠಾಣಾಕುಶನೂರ ಮುಖ್ಯ ರಸ್ತೆಯಲ್ಲಿ ನಡೆಯಿತು. ಮೆರವಣಿಗೆಯೂದ್ದಕ್ಕೂ ಕಲಾವಿದರು ಕಲಾತಂಡಗಳ ನೃತ್ಯ ಎಲ್ಲರ ಗಮನ ಸೆಳೆಯಿತು. ಮುಂಬಯಿ, ಪಂಜಾಬ್, ಹೈದ್ರಾಬಾದ್, ಉಸ್ಮಾನಬಾದ್ ಸೇರಿದಂತೆ ಒಟ್ಟು 10ಕ್ಕೂ ಅಧಿಕ ಕಲಾತಂಡಗಳು ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಕಣ್ಮನ ಸೆಳೆದ ಜನಪದ ನೃತ್ಯೋತ್ಸವ

ತಾಲೂಕಿನ ಠಾಣಾಕುಶನೂರ ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ಜನಪದ ನೃತ್ಯೋತ್ಸವ ನೃತ್ಯ ರೂಪಕಗಳು ಒಂದಕ್ಕಿಂತ ಒಂದು ಆಕರ್ಷಣೀಯವಾಗಿದ್ದವು. ನೋಡುಗರಿಗೆ ಮನಮೋಹಕವಾಗಿದ್ದವು. ಮಹಾರಾಷ್ಟ್ರದ ಮುಂಬಯಿ ಸುರಬಿ ಮನಸಾಲೆ ತಂಡದಿಂದ ಲಾವಣಿ‌ನೃತ್ಯ, ಪಂಜಾಬ್ ಹರಮನ್ ಪ್ರೀತಸಿಂಗ್ ಕಲಾತಂಡದಿಂದ ಭಾಂಗಡಾ ನೃತ್ಯ, ಹೈದ್ರಾಬಾದ್ ಭಾಷೆ ಮತ್ತು ಸಂಸ್ಕೃತಿ ಇಲಾಖೆ ತಂಡದಿಂದ ಒಗ್ಗುಡೊಲು ನೃತ್ಯ, ಬೋನಾಲು ಕೋಲಾಟಂ, ಉಸ್ಮಾನಬಾದ್ ಕೃಷ್ಣ ಮಹಾವಿದ್ಯಾಲಯ ಕಲಾತಂಡದಿಂದ ಬಂಜಾರ ನೃತ್ಯ, ಧನಗಿರಿ ನೃತ್ಯ, ಹೋಳಸಮುದ್ರ ಅಕ್ಕಮಹಾದೇವಿ ಕೋಲಾಟ ಸಂಘ, ಮುಧೋಳ ಕಾಶಿವಿಶ್ವನಾಥ ಕೋಲಾಟ ಸಂಘದಿಂದ ಕೋಲಾಟ, ಠಾಣಾಕುಶನೂರ ಆರತಿ-ಭಾರತಿ ಕೋಲಾಟ ಸಂಘದಿಂದ ಕೋಲಾಟ, ಬೆಳಕೋಣಿ (ಚೌ) ಮಲ್ಲಿಕಾರ್ಜುನ ಭಜನಾ ಸಂಘದಿಂದ ಚಕ್ರಿ ಭಜನೆ ಕಾರ್ಯಕ್ರಮ ನಡೆದರುವು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ನೃತ್ಯೋತ್ಸವ ಕನ್ಮಣ ಸೆಳೆಯಿತು.