ನಿರಾಶ್ರಿತ ಮಂಗಳಮುಖಿ ಸಮುದಾಯಕ್ಕೆ ಆಶ್ರಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸ್ನೇಹ ಸೊಸೈಟಿ ಹಾಗೂ ಕಲ್ಯಾಣ ಕರ್ನಾಟಕ ಸೇನೆಯಿಂದ ಒತ್ತಾಯ

ಕಲಬುರಗಿ:ಕಲಬುರಗಿ ನಗರದ ನಿರಾಶ್ರಿತ ಮಂಗಳಮುಖಿ ಸಮುದಾಯದವರಿಗೆ ಶಾಶ್ವತ ಆಶ್ರಯ ಕಲ್ಪಿಸುವ ಉದ್ದೇಶದಿಂದ ಜಾಗ ಖರೀದಿ ಮಾಡಿ ಮನೆ ನಿರ್ಮಿಸಿ ನೀಡುವಂತೆ ಸ್ನೇಹ ಸೊಸೈಟಿ (ರಿ) ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕ ಸೇನೆ (ರಿ) ಕಲಬುರಗಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ನೇಹ ಸೊಸೈಟಿ ಹಾಗೂ ಕಲ್ಯಾಣ ಕರ್ನಾಟಕ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದತ್ತು ಹಯ್ಯಾಳಕರ್ ಅವರು, ಕಲಬುರಗಿ ನಗರದಲ್ಲಿ ವಾಸಿಸುತ್ತಿರುವ ಮಂಗಳಮುಖಿಯರು ದಿನನಿತ್ಯ ವಿವಿಧ ರೀತಿಯ ಶೋಷಣೆ, ಅವಮಾನ ಹಾಗೂ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಬಾಡಿಗೆ ಮನೆ ಪಡೆಯುವುದಕ್ಕೂ ತೀವ್ರ ಅಡಚಣೆ ಎದುರಾಗುತ್ತಿದ್ದು, ಸಮಾಜದಲ್ಲಿ ಇನ್ನೂ ಸಮಾನತೆಯ ಕೊರತೆ ಮುಂದುವರಿದಿದೆ ಎಂದು ಹೇಳಿದರು.

ನಗರದಲ್ಲಿ ಅಂದಾಜು 3,600ಕ್ಕೂ ಹೆಚ್ಚು ಮಂಗಳಮುಖಿಯರು ವಾಸಿಸುತ್ತಿದ್ದು, ಸ್ವಾತಂತ್ರ್ಯಾನಂತರ ಇಂದಿನವರೆಗೂ ಈ ಸಮುದಾಯಕ್ಕೆ ಯಾವುದೇ ಸಮರ್ಪಕ ಸೌಲಭ್ಯಗಳು ದೊರಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಗರದ ಒಂದು ಭಾಗದಲ್ಲಿ ಸುಮಾರು 1 ಎಕರೆ ಜಾಗ ಖರೀದಿ ಮಾಡಿ, ಅರ್ಹ ಹಾಗೂ ನಿರಾಶ್ರಿತ ಮಂಗಳಮುಖಿಯರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು. ಈ ಕುರಿತು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಜಿಲ್ಲಾಧಿಕಾರಿಗಳು ಶಿಫಾರಸ್ಸು ಮಾಡಬೇಕೆಂದು ಅವರು ಒತ್ತಾಯಿಸಿದರು.

ಒಂದು ವೇಳೆ ಮಂಗಳಮುಖಿ ಸಮುದಾಯದವರಿಗೆ ಶೀಘ್ರವಾಗಿ ಜಾಗ ಹಾಗೂ ಮನೆ ಮಂಜೂರು ಮಾಡದಿದ್ದಲ್ಲಿ, ಕಲಬುರಗಿ ನಗರದಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಮನವಿ ಕಾರ್ಯಕ್ರಮದಲ್ಲಿ ಭೀಮರಾಯ, ಬಸವರಾಜ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಹೋರಾಟಕ್ಕೆ ಸಕ್ರಿಯ ಬೆಂಬಲ ವ್ಯಕ್ತಪಡಿಸಿದರು.

ವರದಿ ಚಂದ್ರಶೇಖರ್ ಬೆಳಮಗಿ